ಗುಡ್ಡ, ಬೆಟ್ಟ, ನದಿ, ತೊರೆ, ಜಲಪಾತಗಳನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆ ಎಂದರೆ ಫೋಟೋಗ್ರಾಫರ್’ಗಳಿಗೆ ಹಬ್ಬ. ಅದರಲ್ಲಿಯೂ ಸಣ್ಣಪುಟ್ಟ ವಿಡಿಯೋ ಮಾಡಿ ಹರಿಬಿಡುವವರಿಗೆ ಇಲ್ಲಿನ ಪರಿಸರ ಸದಾ ಹಸಿರು. ಹೀಗಾಗಿ ರೀಲ್ಸ್ ಮಾಡುವವರಿಗೆ ಸಹ ಉತ್ತರ ಕನ್ನಡ ಎಂದರೆ ಅಚ್ಚುಮೆಚ್ಚು. ಅಂಥವರಿಗಾಗಿ ಇದೀಗ ಸರ್ಕಾರವೇ ಒಂದು ಅವಕಾಶ ನೀಡಿದ್ದು, ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಬಂದರು ಯೋಜನೆಗಳ ಜಾರಿಗೆ ಸಿದ್ಧತೆ ನಡೆದಿದೆ. ಹೆಚ್ಚುವರಿ ಅಣು ಘಟಕ ಸ್ಥಾಪನೆಯ ತಯಾರಿ ಜೋರಾಗಿದೆ. ಪಂಪ್ ಸ್ಟೋರೇಜ್ ಹೆಸರಿನಲ್ಲಿ ಭೂಗತ ಯೋಜನೆಯೊಂದರ ಶುರು ಮಾಡಲು ಸರ್ಕಾರ ಮನಸ್ಸು ಮಾಡಿದೆ. ಗಣಿಗಾರಿಕೆ, ಮರಳುಗಾರಿಗೆ ಸದ್ದಿಲ್ಲದೇ ನಡೆಯುತ್ತಿದೆ. ನದಿ ತಿರುವು ಯೋಜನೆಗಳ ಅನುಷ್ಠಾನಕ್ಕೂ ನಾನಾ ಕಸರತ್ತು ನಡೆಯುತ್ತಿದೆ. ಅಪರೂಪದ ವನ್ಯಜೀವಿಗಳ ಮೇಲೆ ಆಕ್ರಮಣ ಮುಂದುವರೆದಿದೆ.
ಪರಿಸರ ಹೋರಾಟ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ವಿವಿಧ ಯೋಜನೆಗಳಿಂದ ಆಗುತ್ತಿರುವ ಪರಿಸರ ನಾಶದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ರೀಲ್ಸ್ ಸ್ಪರ್ಧೆ ಸಹಾಯಕಾರಿ. ಹವ್ಯಾಸಕ್ಕಾಗಿ ರೀಲ್ಸ ಮಾಡುವವರ ಜೊತೆ ಹೊಸಬರಿಗೆ ಸಹ ಇಲ್ಲಿ ಅವಕಾಶವಿದ್ದು, ನಿಮ್ಮೊಳಗಿನ ಸಾಮಾಜಿಕ ಸಂದೇಶವನ್ನು ಸರ್ಕಾರಕ್ಕೆ ತಲುಪಿಸಲು ಈ ಸ್ಪರ್ಧೆ ವೇದಿಕೆ ಆಗಲಿದೆ.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ, ಎರಡನೇ ಬಹುಮಾನ 25 ಸಾವಿರ ರೂ ಹಾಗೂ 3ನೇ ಬಹುಮಾನ 10 ಸಾವಿರ ರೂಪಾಯಿಗಳಿವೆ. ಕಾಫಿರೈಟ್ ಇಲ್ಲದ ಮ್ಯೂಸಿಕ್ ಬಳಸಿ ರೀಲ್ಸ್ ಮಾಡುವಂತೆ ಸೂಚಿಸಲಾಗಿದೆ. ಅಕ್ಟೊಬರ್ 10ರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭ ಆಯೋಜಿಸುತ್ತಿದ್ದು, ಅದರ ಅಂಗವಾಗಿ ರೀಲ್ಸ್ ಸ್ಪರ್ಧೆ ನಡೆಸುತ್ತಿದೆ. 60 ಸೆಕೆಂಡಿನ ರೀಲ್ಸ್ ಮಾಡಿ ಅದನ್ನು `ರೀಲ್ಸ ವಿಡಿಯೋ ಸ್ಪರ್ಧೆ’ ನ್ನು ಕ್ಲಿಕ್ ಮಾಡಿ ಅಪ್ಲೋಡ್ ಮಾಡಬೇಕು. ನೀವು ಮಾಡಿದ ರೀಲ್ಸಗಳನ್ನು ಇನಸ್ಟಾಗ್ರಾಮಿಗೆ ಹಾಕಿ #kspcb_official ಗೆ ಟ್ಯಾಗ್ ಮಾಡಿದರೆ ಇನ್ನಷ್ಟು ಅನುಕೂಲ.
`ರೀಲ್ಸ್ ಮಾಡುವ ನಿಮ್ಮ ಬಳಗಕ್ಕೆ ಈ ಮಾಹಿತಿ ಶೇರ್ ಮಾಡಿ’