ದಾoಡೇಲಿ ಅಂಬೇವಾಡಿ ಬಳಿ ವಿದ್ಯಾರ್ಥಿಯೊಬ್ಬರು ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನಲ್ಲಿ ಸಂಶಯವಿರುವುದಾಗಿ ಕುಟುಂಬದವರು ಹೇಳಿದ್ದಾರೆ.
ಅಂಬೇವಾಡಿ ಗಾಂವಠಾಣಾ ಬಳಿಯ ನವಗ್ರಾಮ ಗೌಟನ ಬಳಿ ಸುಹಾಸ್ ಸಂತೋಷ ಲಮಾಣಿ ಅವರು ವಾಸವಾಗಿದ್ದರು. 14 ವರ್ಷದ ಅವರು 9ನೇ ತರಗತಿಯಲ್ಲಿ ಓದುತ್ತಿದ್ದರು. ಗುರುವಾರ ಸಂಜೆ ಅವರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶವ ನೋಡಿ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ.
ಮನೆಯ ಕೋಣೆಯಲ್ಲಿರುವ ಜಂತಿಗೆ ಸೀರೆ ಕಟ್ಟಿಕೊಂಡು ಸುಹಾಸ್ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಶವ ಕಾಣಿಸಿದೆ. ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಸುಹಾಸ್ ಲಮಾಣಿ ಅವರು ಚಿಂತಿಸುತ್ತಿದ್ದರು ಎಂದು ಅವರ ತಾಯಿ ರೇಣುಕಾ ಲಮಾಣಿ ಅವರು ಹೇಳಿದ್ದಾರೆ. ಅದಾಗಿಯೂ, ಅವರ ಸಾವಿನಲ್ಲಿ ಸಂಶಯವಿರುವುದಾಗಿ ಅವರು ದೂರಿದ್ದಾರೆ.
ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.