ಯಲ್ಲಾಪುರದಲ್ಲಿ ಈ ವರ್ಷ ನಡೆದ ಯುಗಾದಿ ಉತ್ಸವದ ಲೆಕ್ಕಾಚಾರದ ಪಟ್ಟಿ ಹೊರ ಬಿದ್ದಿದೆ. ಯುಗಾದಿ ಉತ್ಸವಕ್ಕೆ ಐದುವರೆ ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ.
ಯಲ್ಲಾಪುರಲ್ಲಿ ನಡೆದ 26ನೇ ಯುಗಾದಿ ಉತ್ಸವ ಸಮಿತಿಗೆ ಈ ವರ್ಷ ವಿಶಾಲ ವಾಳಂಬಿ ಅವರು ಅಧ್ಯಕ್ಷರಾಗಿದ್ದರು. ಅನೇಕ ದಾನಿಗಳು ಉತ್ಸವಕ್ಕೆ ನೆರವು ನೀಡಿದ್ದರು. ಭಾನುವಾರ ಯಲ್ಲಾಪುರದ ವೆಂಕಟ್ರಮಣ ಮಠದಲ್ಲಿ ವಿಶಾಲ ವಾಳಂಬಿ ಅವರು ಉತ್ಸವದ ಲೆಕ್ಕಪತ್ರಗಳನ್ನು ಸಾರ್ವಜನಿಕರ ಮುಂದಿಟ್ಟರು.
ಯುಗಾದಿ ಉತ್ಸವದ ಹಿನ್ನಲೆ ಒಟ್ಟು 596064ರೂ ಸಂಗ್ರಹವಾಗಿತ್ತು. ಅದರಲ್ಲಿ 579604ರೂ ಖರ್ಚಾಗಿದೆ. 16294ರೂ ಸಮಿತಿಗೆ ಉಳಿತಾಯವಾಗಿದೆ. ಆ ಹಣವನ್ನು ಮುಂದಿನ ಯುಗಾದಿ ಉತ್ಸವಕ್ಕೆ ಬಳಕೆ ಮಾಡಲು ಈ ದಿನ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ದೀಪಾಲಂಕಾರ, ಕಲಾವಿದರಿಗೆ ಗೌರವಧನ, ಪ್ರಸಾದ ವ್ಯವಸ್ಥೆ, ಸ್ಥಬ್ದಚಿತ್ರ, ವಾಹನ ಬಾಡಿಗೆ, ಪ್ರಚಾರ, ಊಟೋಪಚಾರ ಸೇರಿ ವಿವಿಧ ಖರ್ಚುಗಳ ಬಗ್ಗೆ ವರದಿ ವಿಶಾಲ ವಾಳಂಬಿ ಅವರು ವರದಿ ಒಪ್ಪಿಸಿದರು.
`ಈ ಹಿಂದೆ ನಡೆದಕ್ಕಿಂತಲೂ ಹೆಚ್ಚಿನ ವಿಜ್ರಂಭಣೆಯಿAದ ಹಾಗೂ ಅಚ್ಚುಕಟ್ಟಾಗಿ ಯುಗಾದಿ ಉತ್ಸ ನಡೆದಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ’ ಎಂದು ಸಮಿತಿ ಉಪಾಧ್ಯಕ್ಷ ಆರ್ ಎಸ್ ಭಟ್ಟ ಚಂದ್ಗುಳಿ ಅವರು ಹೇಳಿದರು. `ಕಾರ್ಯಕ್ರಮಕ್ಕೆ ತನು-ಮನ-ದನ ಸಹಕಾರ ನೀಡಿದವರಿಗೆ ಮತ್ತೊಮ್ಮ ಉಪಾಧ್ಯಕ್ಷ ಗಜಾನನ ಭಟ್ಟ ಕಳಚೆ ಅವರು ಧನ್ಯವಾದ ಸಲ್ಲಿಸಿದರು. ಪ್ರಮುಖರಾದ ಮಹೇಶ ನಾಯ್ಕ, ರಾಮು ಆಚಾರಿ, ಗಣೇಶ ದೇವಡಿಗಾ, ಸತೀಶ ನಾಯ್ಕ, ಸಿದ್ದಾರ್ಥ ನಂದೊಳಿಮಠ ಅವರು ಇದ್ದರು.