ಶಿರಸಿ ಗಣೇಶ ನಗರದ ಚೇತನ ಕಲಾಲ್ ಅವರಿಗೆ ಹುಬ್ಬಳ್ಳಿಯ ಹುಡುಗಿ ಜೊತೆ ವಿವಾಹ ನಿಶ್ಚಿತಾರ್ಥ ನಡೆದಿದ್ದು, ಶಿವಮೊಗ್ಗದ ಪ್ರಿಯಾಂಕ ಮೈಸೂರು ಎಂಬಾತರು ಆ ಮದುವೆಗೆ ಅಡ್ಡಗಾಲು ಹಾಕುತ್ತಿದ್ದಾರೆ. `ನೀ ನನಗೆ ಮದುವೆ ಆಗಬೇಕು’ ಎಂದು ಪ್ರಿಯಾಂಕ ಅವರು ಕಾಡಿಸುತ್ತಿದ್ದು, `ಈ ಮದುವೆ ನಿರಾಕರಿಸುವುದಾದರೆ 50 ಲಕ್ಷ ರೂ ಹಣ ಕೊಡಬೇಕು’ ಎಂದು ತಾಕೀತು ಮಾಡಿದ್ದಾರೆ.
ಶಿರಸಿ ಗಣೇಶ ನಗರದ ಶೆಟ್ಟರ್ ಕಾಲೋನಿಯಲ್ಲಿ ಚೇತನ ಅಡವಿಲಪ್ಪ ಕಲಾಲ್ ಅವರು ವಾಸವಾಗಿದ್ದಾರೆ. 34 ವರ್ಷದ ಅವರಿಗೆ ಶಿವಮೊಗ್ಗದ ಶಿವಮೊಗ್ಗದ ಹರಿಗೆ ವಿದ್ಯಾನಗರದಲ್ಲಿ ವಾಸವಾಗಿರುವ ಪ್ರಿಯಾಂಕಾ ಮೈಸೂರು ಅವರು ಪರಿಚಿತರಾಗಿದ್ದಾರೆ. ಪ್ರಿಯಾಂಕ ಮೈಸೂರು ಹಾಗೂ ಚೇತನ ಕಲಾಲ್ ಮೊದಲು ಅನ್ಯೋನ್ಯವಾಗಿದ್ದು, ಪ್ರಿಯಾಂಕ ಅವರು ಚೇತನ್ ಅವರನ್ನೇ ಮದುವೆ ಆಗುವ ಕನಸು ಕಂಡಿದ್ದಾರೆ. ಆದರೆ, ಚೇತನ ಕಲಾಲ್ ಅವರಿಗೆ ಪ್ರಿಯಾಂಕ ಅವರನ್ನು ವರಿಸಲು ಮನಸ್ಸಿಲ್ಲ. ಹೀಗಿರುವಾಗ ಚೇತನ ಕಲಾಲ್ ಅವರಿಗೆ ಅವರದ್ದೇ ಸಂಬAಧಿಕರೊಬ್ಬರ ಜೊತೆ ವಿವಾಹ ನಿಶ್ಚಯವಾಗಿದೆ. ಹುಬ್ಬಳ್ಳಿಯಲ್ಲಿ ವಾಸವಾಗಿರುವ ಹುಡುಗಿಯನ್ನು ಮದುವೆ ಆಗಲು ಚೇತನ ಕಲಾಲ್ ಅವರು ಒಪ್ಪಿದ್ದು, ಅದಕ್ಕೆ ಪ್ರಿಯಾಂಕ ಅವರು ಅಡ್ಡಿಯಾಗಿದ್ದಾರೆ.
ಚೇತನ ಕಲಾಲ್ ಅವರ ನಿಶ್ಚಿತಾರ್ಥದ ದಿನ ಫೋನ್ ಮಾಡಿದ ಪ್ರಿಯಾಂಕ ಅವರು `ಆಕೆಯನ್ನು ಬಿಟ್ಟು ನನ್ನ ಮದುವೆ ಆಗು’ ಎಂದು ಒತ್ತಾಯ ಮಾಡಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ `ನನ್ನ ಮದುವೆ ಆಗದೇ ಇದ್ದರೆ 50 ಲಕ್ಷ ರೂ ಹಣ ಕೊಡು’ ಎಂದು ಪೀಡಿಸಲು ಶುರು ಮಾಡಿದ್ದಾರೆ. `ನನ್ನ ಮದುವೆ ಆಗಬೇಕು. ಇಲ್ಲವೇ, 50 ಲಕ್ಷ ರೂ ಹಣ ಕೊಡಬೇಕು. ಇದೆರಡೂ ಆಗದಿದ್ದರೆ ನಿನಗೆ ಜೀವನ ಮಾಡಲು ಬಿಡುವುದಿಲ್ಲ’ ಎಂದು ಪ್ರಿಯಾಂಕ ಅವರು ಹೆದರಿಸಿದ್ದಾರೆ. ಇದಕ್ಕೆ ಚೇತನ ಕಲಾಲ್ ಅವರು ಪ್ರತಿಕ್ರಿಯಿಸದ ಕಾರಣ ಜೂನ್ 23ರಂದು ಪ್ರಿಯಾಂಕ ಹಾಗೂ ಅವರ ತಾಯಿ ಮಮತಾ ಅವರು ಶಿರಸಿಗೆ ಬಂದಿದ್ದಾರೆ. ಗಣೇಶ ನಗರದ ನಾಗೇಶ ಶೆಟ್ಟಿ ಕಾಲೋನಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ.
ಮನೆಯ ಒಳಗಿದ್ದ ಚೇತನ ಕಲಾಲ್ ಅವರನ್ನು ಉದ್ದೇಶಿಸಿ `ನೀ ಹೇಗೆ ಮದುವೆ ಆಗುತ್ತೀಯಾ? ನಾನು ನೋಡುವೆ’ ಎಂದು ಪ್ರಿಯಾಂಕ ಹಾಗೂ ಮಮತಾ ಕೂಗಾಡಿದ್ದಾರೆ. ಈ ವೇಳೆ ಚೇತನ ಕಲಾಲ್ ಅವರ ಅಣ್ಣ ಅಣ್ಣ ಮಂಜುನಾಥ ಕಲಾಲ್ ಹಾಗೂ ತಾಯಿ ಗಾಯತ್ರಿ ಕಲಾಲ್ ಅವರು ಶಿವಮೊಗ್ಗದಿಂದ ಬಂದ ಮಹಿಳೆಯರಿಬ್ಬರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. `ಆತನಿಗೆ ಮದುವೆ ಆಗಲು ಇಷ್ಟವಿಲ್ಲ. ಬಲವಂತ ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ. ಇದರಿಂದ ಇನ್ನಷ್ಟು ಸಿಟ್ಟಾದ ಪ್ರಿಯಾಂಕ ಅವರು ಚೇತನ ಅವರ ಹೆಸರಿನಲ್ಲಿ ಇನಸ್ಟಾಗ್ರಾಮಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಅಲ್ಲಿ ಚೇತನ ಕಲಾಲ್ ಅವರ ವಿವಿಧ ಫೋಟೋ ಹರಿಬಿಟ್ಟಿ ಕೆಟ್ಟದಾಗಿ ಬರೆದು ಸೇಡು ತೀರಿಸಿಕೊಂಡಿದ್ದಾರೆ.
`ನಕಲಿ ಖಾತೆಗಳ ಸಂದೇಶ ನಂಬಬೇಡಿ’