ಆರ್ಟ ಆಫ್ ಲಿವಿಂಗ್’ನಿOದ ಯಲ್ಲಾಪುರದಲ್ಲಿ ಆರು ದಿನಗಳ ಆನಂದ ಉತ್ಸವ ಶಿಬಿರ ನಡೆಸಿದ್ದು, 85 ಶಿಬಿರಾರ್ಥಿಗಳು ಭಾಗವಹಿಸಿ ಧ್ಯಾನ-ಜ್ಞಾನದ ಅನುಭವಪಡೆದಿದ್ದಾರೆ.
ಇಲ್ಲಿನ TMS ಆವಾರದಲ್ಲಿ ಈ ಶಿಬಿರ ನಡೆಯಿತು. ನಿತ್ಯ ಸಂಜೆ ನಡೆದ ಸತ್ಸಂಗದಲ್ಲಿ ತಾಲೂಕಿನ ಬೇರೆ ಬೇರೆ ಭಾಗದ ಜನ ಭಾಗವಹಿಸಿದ್ದಾರೆ. ಶಿಬಿರಾರ್ಥಿಗಳೆಲ್ಲರಿಗೂ ಸುದರ್ಶನ ಕ್ರಿಯೆ, ಧ್ಯಾನ ಹಾಗೂ ಯೋಗ-ಪ್ರಾಣಾಯಾಮದ ಬಗ್ಗೆ ಅರಿವು ಮೂಡಿಸಲಾಗಿದೆ. 50ಕ್ಕೂ ಅಧಿಕ ಮಹಿಳೆಯರು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದು, ವಿವಿಧ ಆಧ್ಯಾತ್ಮಿಕ ಚಟುವಟಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಯಲ್ಲಾಪುರದಲ್ಲಿ ಈವರೆಗೆ 9 ಸಲ ಆನಂದೋತ್ಸವ ಶಿಬಿರ ನಡೆದಿದ್ದು, ಈವರೆಗೆ 250ರಷ್ಟು ಜನ ಸುದರ್ಶನ ಕ್ರಿಯೆ ಕಲಿತಿದ್ದಾರೆ. ಈ ಬಾರಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಶಿಷ್ಯೆ ದೀಪಿಕಾ ಅವರು ಶಿಬಿರ ನಡೆಸಿಕೊಟ್ಟಿದ್ದಾರೆ. `ಮಾನಸಿಕ ನೆಮ್ಮದಿಯ ಜೊತೆ ದೈಹಿಕ ವ್ಯಾಯಾಮಗಳಿಗೂ ಈ ಶಿಬಿರದಿಂದ ಅನುಕೂಲವಾಗಿದೆ’ ಎಂದು ಶಿಬಿರಾರ್ಥಿಗಳು ಅನುಭವಹಂಚಿಕೊOಡಿದ್ದಾರೆ. ಯಲ್ಲಾಪುರದ ಆರ್ಟ ಆಫ್ ಲಿವಿಂಗ್ ಸದಸ್ಯ ಶಂಕರ್ ಭಟ್ ಕವರಿಗದ್ದೆ, ಸುಬ್ರಾಯ ಭಟ್ಟ, ನಾರಾಯಣ ಸಭಾಹಿತ, ಚಂದ್ರಶೇಖರ ಹುತ್ಕಂಡ, ಸದಾನಂದ ದಬಗಾರ್ ಕುಟುಂಬದವರು ಈ ಶಿಬಿರದ ಮೇಲುಸ್ತುವಾರಿವಹಿಸಿದ್ದರು.
ಇನ್ನೂ ಅಗಸ್ಟ್ 3ರಿಂದ 8ರವರೆಗೆ ಯಲ್ಲಾಪುರದಲ್ಲಿ 10ನೇ ಸಲದ ಆನಂದೋತ್ಸವ ಶಿಬಿರ ನಡೆಯಲಿದೆ. ಮಕ್ಕಳಿಗಾಗಿ ಉತ್ಕರ್ಷ ಹಾಗೂ ಮೇದಾ ಶಿಬಿರವನ್ನು ಆಯೋಜಿಸಲು ಸಂಘಟಕರು ನಿರ್ಧರಿಸಿದ್ದಾರೆ.