ಕುಮಟಾದ ಬರ್ಗಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಚಿನ್ಮಯ ಪಟಗಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಗಂಭೀರ ಗಾಯಗೊಂಡಿದ್ದ ಅವರು ಸಾವನಪ್ಪಿದ್ದಾರೆ.
ಕುಮಟಾದ ಹೆಗಡೆಯಲ್ಲಿ ಚಿನ್ಮಯ ಪಟಗಾರ ಅವರು ವಾಸವಾಗಿದ್ದರು. ಯಾಣದ ತಿಲಕ ಗೌಡ ಅವರ ಜೊತೆ ಮಂಗಳವಾರ ಕುಮಟಾದಿಂದ ಅಂಕೋಲಾ ಕಡೆ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಚಿನ್ಮಯ ಪಟಗಾರ ಹಾಗೂ ತಿಲಕ ಗೌಡ ಅವರು ಸ್ನೇಹಿತರಾಗಿದ್ದು, ಅವರು ಐಟಿಐ ವಿದ್ಯಾರ್ಥಿಯಾಗಿದ್ದರು. ಅಂಕೋಲಾದ ಕಾಲೇಜಿನಲ್ಲಿ ಅವರು ಕಲಿಯುತ್ತಿದ್ದರು. ಕುಮಟಾದ ಬರ್ಗಿ ಬಳಿ ಅವರ ಬೈಕು ಅಪಘಾತಕ್ಕೀಡಾಯಿತು.
ಅಪರಿಚಿತ ವಾಹನವೊಂದು ಅವರಿದ್ದ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಯಿತು. ಪರಿಣಾಮ ಚಿನ್ಮಯ ಪಟಗಾರ ಅವರ ಜೊತೆ ತಿಲಕ ಗೌಡ ಅವರು ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡರು. ಆಂಬುಲೆನ್ಸಿನ ಮೂಲಕ ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿನ್ಮಯ ಪಟಗಾರ ಅವರು ಸಾವನಪ್ಪಿದರು. ತಿಲಕ ಗೌಡ ಅವರನ್ನು ಸದ್ಯ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಪರಾರಿಯಾದ ವಾಹನ ಹಾಗೂ ಅದರ ಚಾಲಕನ ಹುಡುಕಾಟ ಮುಂದುವರೆದಿದೆ.