ಶಿರಸಿ ಬಸ್ ನಿಲ್ದಾಣ ಬಳಿಯ ಕ್ಯಾಂಟೀನ್’ನಲ್ಲಿ ತಿಂಡಿ ತಿಂದು ದುಡ್ಡು ಕೊಡದೇ ಗಲಾಟೆ ಮಾಡಿದ ನಾಲ್ವರನ್ನು ಪೊಲೀಸರು ಪ್ರಶ್ನಿಸಿದ್ದು, ಆ ನಾಲ್ವರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಹೀಗಾಗಿ, ಅವರೆಲ್ಲರನ್ನು ಪೊಲೀಸರು ಹಿಡಿದು ಜೈಲಿಗೆ ಹಾಕಿದ್ದಾರೆ.
ಜುಲೈ 5ರ ರಾತ್ರಿ 1 ಗಂಟೆಗೆ ಶಿರಸಿ ಕೇಂದ್ರೀಯ ಬಸ್ ನಿಲ್ದಾಣ ಬಳಿ ಗಲಾಟೆ ನಡೆದಿದ್ದು, ಎಸೈ ಎಸೈ ಸುರೇಶ ಗೊಂಜಾಲಿ ಹಾಗೂ ಹೋಂ ಗಾರ್ಡ ನವೀನ ಶಾಸ್ತಿçಗೆ ನಿಂದನೆ ಅವರು ಅಲ್ಲಿ ಹೋಗಿ ವಿಚಾರಿಸಿದ್ದಾರೆ. ಆಗ, ವೆಲ್ಡಿಂಗ್ ಕೆಲಸ ಮಾಡುವ ರಾಮನಬೈಲ್ ಶ್ರೀರಾಮ ಕಾಲೋನಿಯ ಫೈಜಾನ್ ಅಬ್ದುಲ್ ಸಮ್ಮದ್ ಮುಲ್ಲಾ (22), ಅದೇ ಪ್ರದೇಶದಲ್ಲಿ ಕ್ಯಾಟರಿಂಗ್ ಕೆಲಸ ಮಾಡುವ ರಿಹಾನ್ ಅಬ್ದುಲ್ ಸಮ್ಮದ್ ಮುಲ್ಲಾ (27) ಹುಬ್ಬಳ್ಳಿ ರಸ್ತೆಯ ಹವಾಲ್ದಾರಗಲ್ಲಿಯ ತನ್ವೀರ ಆಸೀಫ್ ಶೇಖ್ (22) ಹಾಗೂ ಚಿಕನ್ ಅಂಗಡಿ ನಡೆಸುವ ರಾಜೀವ ನಗರದ ತೋಹಿದ್ ಶಬ್ಬೀರ್ ಸವಣೂರು (22) ಅವರು ಅಲ್ಲಿ ತಿಂಡಿ ತಿಂದು ದುಡ್ಡು ಕೊಡದೇ ಗಲಾಟೆ ಮಾಡುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಎಸೈ ಸುರೇಶ ಗೊಂಜಾಲಿ ಅವರಿಗೆ ಆರೋಪಿತರು ಕಾಲಿನಿಂದ ಒದ್ದಿದ್ದಾರೆ.
ಈ ವಿಷಯ ತಿಳಿದು ಪಿಸೈ ನರಸಿಂಹಲು ಅವರು ಅಲ್ಲಿಗೆ ಧಾವಿಸಿದ್ದು, ಆಗ ರಿಹಾನ್ ಅಬ್ದುಲ್ ಸಮ್ಮದ್ ಮುಲ್ಲಾ ಅವರು ನರಸಿಂಹಲು ಅವರಿಗೂ ನಿಂದಿಸಿದ್ದಾರೆ. ಜೊತೆಗೆ ಪೊಲೀಸ್ ಜೀಪ್ ಮೇಲೆ ದಾಳಿ ಮಾಡಿ ಅದನ್ನು ಜಖಂ ಮಾಡಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಸುರೇಶ ಗೊಂಜಾಲಿ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿದವರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಅದಾದ ನಂತರ ಪೊಲೀಸರು ಅವರನ್ನು ಹುಡುಕಿ ಈ ದಿನ ಎಲ್ಲರನ್ನು ಬಂಧಿಸಿದ್ದಾರೆ. ಸದ್ಯ ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಗಿದೆ.