ಯಲ್ಲಾಪುರದ ಮಳಲಗಾಂವ್ ಶಾಲೆಯಲ್ಲಿ ಅಡುಗೆ ಸಹಾಯಕರಾಗಿದ್ದ ಪಾರ್ವತಿ ಆಗೇರ್ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಕಿವಿ ಹಾಗೂ ಮೂಗಿನಿಂದ ರಕ್ತ ಸುರಿಯುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ.
ಯಲ್ಲಾಪುರದ ಮಳಲಗಾಂವಿನಲ್ಲಿ ಪಾರ್ವತಿ ಸತೀಶ ಆಗೇರ್ (51) ಅವರು ವಾಸವಾಗಿದ್ದರು. ಅವರು ಆ ಊರಿನ ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜುಲೈ 7ರಂದು ಪಾರ್ವತಿ ಆಗೇರ್ ಅವರು ಚಂದ್ಗುಳಿ ಬಳಿಯ ಮರ್ಕಲಮನೆಯ ಸಂತೋಷ ಜೂಜೆ ಫರ್ನಾಂಡಿಸ್ ಅವರ ಬೈಕ್ ಹತ್ತಿದ್ದರು. ಶಿರಸಿ ಕಡೆ ಜೋರಾಗಿ ಹೊರಟ ಆ ಬೈಕು ಸಿಮೆಂಟ್ ರಸ್ತೆ ಮೇಲೆ ಸ್ಕಿಟ್ ಆಯಿತು.
ಬೈಕಿನಿಂದ ಬಿದ್ದ ಪಾರ್ವತಿ ಆಗೇರ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಅವರ ಕಿವಿ-ಮೂಗಿನಿಂದ ಭಾರೀ ಪ್ರಮಾಣದ ರಕ್ತ ಸುರಿಯಿತು. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹುಬ್ಬಳ್ಳಿಯ ಶೆಕ್ಯೂರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಕಿಮ್ಸ್’ಗೆ ಕರೆದೊಯ್ದು ಆರೈಕೆ ಮಾಡಲಾಯಿತು. ಸಾಕಷ್ಟು ಪ್ರಯತ್ನಿಸಿದರೂ ಅವರನ್ನು ಬದುಕಿಸಲು ಆಗಲಿಲ್ಲ. ಜುಲೈ 9ರಂದು ಪಾರ್ವತಿ ಆಗೇರ್ ಅವರು ಕೊನೆಯುಸಿರೆಳೆದರು.
ಪೆಂಟಿoಗ್ ಕೆಲಸ ಮಾಡುವ ಮಂಜುನಾಥ ಆಗೇರ್ ಅವರು ಅಪಘಾತದ ಬಗ್ಗೆ ವರದಿ ನೀಡಿದ್ದು, ವೇಗವಾಗಿ ಬೈಕ್ ಓಡಿಸಿದ ಸಂತೋಷ ಜೂಜೆ ಫರ್ನಾಂಡಿಸ್ ಅವರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದರು.
`ಸಂಚಾರಿ ನಿಯಮ ಪಾಲಿಸಿ. ಅಪಘಾತ ತಪ್ಪಿಸಿ’