ಶಿರಸಿಯ ಶ್ರೀನಿವಾಸ ಆಚಾರಿ ಅವರಿಗೆ ಸಂಕೇತ ಪೂಜಾರಿ ಅವರು ದೊಣ್ಣೆಯಿಂದ ಹೊಡೆದಿದ್ದಾರೆ. `ಏಕೆ ಹೊಡೆಯುವೆ?’ ಎಂದು ಪ್ರಶ್ನಿಸಿದ ಕಾರಣ ಮತ್ತೆ ಎರಡು ಏಟು ಹೆಚ್ಚಿಗೆ ಹೊಡೆದಿದ್ದಾರೆ!
ಶಿರಸಿಯ ಕರಿಗುಂಡಿ ರಸ್ತೆಯಲ್ಲಿ ಕ್ವಾಲಿಟಿ ವೈನ್ ಶಾಫ್ ಮಳಿಗೆಯಿದೆ. ಭಗತ್‌ಸಿಂಗ್ ನಗರದ ಶ್ರೀನಿವಾಸ ಅರವಿಂದ ಆಚಾರಿ ಅವರು ಅಲ್ಲಿ ನಿತ್ಯ ಸರಾಯಿ ಖರಿದಿಸುತ್ತಾರೆ. ಪ್ರತಿ ದಿನ ಸರಾಯಿ ಖರೀದಿಸಲು ಹೋದಾಗಲೂ ಆ ವೈನ್‌ಶಾಪ್ ಮ್ಯಾನೇಜರ್ ಸಂಕೇತ ಪೂಜಾರಿ ಅವರು ಶ್ರೀನಿವಾಸ ಆಚಾರಿ ಅವರನ್ನು ನಿಂದಿಸುತ್ತಾರೆ. ಅನಗತ್ಯವಾಗಿ ಕೆಟ್ಟ ಶಬ್ದಗಳಿಂದ ಬೈಯ್ಯುತ್ತಾರೆ. ಅದಾಗಿಯೂ, ಶ್ರೀನಿವಾಸ ಆಚಾರಿ ಅವರು ಅಲ್ಲಿಗೇ ಹೋಗಿ ಸರಾಯಿ ಖರೀದಿಸುತ್ತಿದ್ದು, ಇದನ್ನು ಸಹಿಸದ ಸಂಕೇತ ಪೂಜಾರಿ ಅವರು ಶ್ರೀನಿವಾಸ ಆಚಾರಿ ಅವರಿಗೆ ದೊಣ್ಣೆಯಿಂದ ಬಡಿದಿದ್ದಾರೆ.
ಜುಲೈ 13ರ ಸಂಜೆ 7.30ಕ್ಕೆ ಎಂದಿನoತೆ ಶ್ರೀನಿವಾಸ ಆಚಾರಿ ಅವರು ಮದ್ಯಪಾನ ಮಾಡಲು ಕ್ವಾಲಿಟಿ ವೈನ್ ಶಾಫ್’ಗೆ ಹೋಗಿದ್ದಾರೆ. ಅಲ್ಲಿ ಹಣ ಕೊಟ್ಟು ಕ್ವಾಟರ್ ಖರೀದಿ ಮಾಡಿದ್ದಾರೆ. ಆಗಲೂ, ಅಲ್ಲಿದ್ದ ಸಂಕೇತ ಪೂಜಾರಿ ಅವರು ಶ್ರೀನಿವಾಸ ಆಚಾರಿ ಅವರನ್ನು ಕೆಟ್ಟದಾಗಿ ಬೈದಿದ್ದಾರೆ. ಅದಾದ ನಂತರ ಅಲ್ಲಿಯೇ ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸಿದ ಶ್ರೀನಿವಾಸ ಆಚಾರಿ ಅವರು, ವೈನ್ ಶಾಪಿನಿಂದ ಹೊರಗೆ ಬಂದಿದ್ದಾರೆ. ಪರಿಚಿತ ವ್ಯಕ್ತಿಯೊಬ್ಬರು ಎದುರಾಗಿದ್ದು, ಅವರ ಬಳಿ ಮಾತನಾಡಿದ್ದಾರೆ. ಈ ವೇಳೆ ಸಿಟ್ಟಿನಲ್ಲಿ ಬಂದ ಸಂಕೇತ ಪೂಜಾರಿ ಅವರು ಶ್ರೀನಿವಾಸ ಆಚಾರಿ ಅವರಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಶ್ರೀನಿವಾಸ ಆಚಾರಿ ಅವರ ಬಲಬುಜಕ್ಕೆ ನೋವಾಗಿದೆ.
`ಏಕೆ ಹೊಡೆಯುವೆ?’ ಎಂದು ಶ್ರೀನಿವಾಸ ಆಚಾರಿ ಅವರು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸದೇ ಮತ್ತೆ ಹೊಡೆಯಲು ಶುರು ಮಾಡಿದ್ದಾರೆ. ಹೀಗಾಗಿ ಅದೇ ದಿನ ರಾತ್ರಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಹೋದ ಶ್ರೀನಿವಾಸ ಆಚಾರಿ ಅವರು ಕರಿಗುಂಡಿ ರಸ್ತೆಯ ಸಂಕೇತ ಪೂಜಾರಿ ಅವರ ವಿರುದ್ಧ ಕೇಸು ಕೊಟ್ಟಿದ್ದಾರೆ. ಈ ಹೊಡೆದಾಟದ ಬಗ್ಗೆ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.