`ವಿನೂತನ ಮಾದರಿಯ ಮಳೆ ನೀರು ಕೊಯ್ಲು ಘಟಕ ಅಳವಡಿಸಿದ್ದಕ್ಕಾಗಿ ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಮೋಹನ್ ಚಂದ್ರಗುತ್ತಿ ಅವರು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರಿಗೆ ಸನ್ಮಾನಿಸಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಆವರಣದ ನೂತನ ಕಟ್ಟಡಗಳ 50 ಸಾವಿರ ಚದರ ಅಡಿ ಮೇಲ್ಛಾವಣಿಗೆ ಪ್ರತಿಷ್ಠಿತ ಗೋಕಲ್ ದಾಸ್ ಎಕ್ಸ್ಪೋರ್ಟ್ಸ ಫೌಂಡೇಶನ್ ಅವರ ಸಿಎಸ್‌ಆರ್ ಕಾರ್ಯಕ್ರಮದ ಅಡಿ ಮಳೆ ನೀರು ಕೊಯ್ಲು ಘಟಕ ಅಳವಡಿಸಲಾಗಿದೆ. ಇಲ್ಲಿ ಕೊಳವೆ ಹಾಗೂ ತೆರೆದ ಬಾವಿಗಳ ಜಲ ಮರುಪೂರಣ ಘಟಕಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಆ ಮೂಲಕ ನೀರಿನ ಕೊರತೆಯನ್ನು ನೀಗಿಸುವಲ್ಲಿ ಸ್ಕೋಡ್‌ವೆಸ್ ಉತ್ತಮ ಸೇವೆ ನೀಡಿದೆ. ಇದನ್ನು ಅಭ್ಯಯಿಸಿದ ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಮೋಹನ್ ಚಂದ್ರಗುತ್ತಿ ಅವರು ವೆಂಕಟೇಶ ನಾಯ್ಕ ಇವರಿಗೆ ಸನ್ಮಾನಿಸಿದ್ದಾರೆ.
ಗೋಕಲ್ ದಾಸ್ ಎಕ್ಸ್ಪೋರ್ಟ್ಸ ಫೌಂಡೇಶನ್‌ನ ಸಿಎಸ್‌ಆರ್‌ಒ ಅಮಿತ್ ಶರ್ಮಾ, ಉಪಾಧ್ಯಕ್ಷ ಅಖಿಲ್ ಪಾಶಾ, ಸಿಎಸ್‌ಆರ್ ವಿಭಾಗದ ಜನರಲ್ ಮ್ಯಾನೆಜರ್ ಮಹಾಂತೇಶ್ ಬಂಗಾರಿ, ಎಚ್ ಆರ್ ವಿಭಾಗದ ಎವಿಪಿ ಗಿರೀಶ್ ಬಿ ಆರ್, ಸಿಎಸ್‌ಆರ್ ಎಚ್ ಆರ್ ವಿಭಾಗದ ಮ್ಯಾನೆಜರ್ ರಾಜೇಂದ್ರ ಪ್ರಸಾದ್, ಎಚ್ ಆರ್ ಮೆನೇಜರ್ ಲಕ್ಷಿನಾರಾಯಣ, ಎಚ್ ಆರ್ ಸತ್ಯಾ, ಜನರಲ್ ಮ್ಯಾನೇಜರ್ ಪ್ರಕಾಶ್, ತುಮಕೂರು ವಿಶ್ವ ವಿದ್ಯಾಲಯದ ಆರ್ಟ್ಸ ವಿಭಾಗದ ಡೀನ್ ಪರಶುರಾಮ್ ಕೆ ವಿ ಸೈನ್ಸ ವಿಭಾಗದ ಡೀನ್ ನಾಗಭೂಷಣ, ನಿರ್ದೇಶಕ ಸುರೇಶ, ಹಿರಿಯ ಪ್ರಾಧ್ಯಾಪಕ ಕೇಶವ, ಸ್ಕೊಡ್‌ವೆಸ್‌ನ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ನಾರಾಯಣ ಹೆಗಡೆ ಅವರು ಈ ಸನ್ಮಾನಕ್ಕೆ ಸಾಕ್ಷಿಯಾಗಿದ್ದಾರೆ.