ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ ಬಳಿ ಮಹಾಬಲೇಶ್ವರ ಹೆಗಡೆ ಅವರು ಅಂದರ್ ಬಾಹರ್ ಆಟ ಆಯೋಜಿಸಿದ್ದು, ಅಲ್ಲಿ ಭಾಗವಹಿಸಿದ್ದ 9 ಜನ ಪೊಲೀಸರ ಅತಿಥಿಯಾಗಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪಿಸೈ ಅಶೋಕ ರಾಥೋಡ್ ಅವರು ಆ ಎಲೆಮಾನವರ ಆಟವನ್ನು ಬಂದ್ ಮಾಡಿಸಿದ್ದಾರೆ.
ಕೊಳಗಿಬೀಸಿನ ಮಹಾಬಲೇಶ್ವರ ಸತ್ಯನಾರಾಯಣ ಹೆಗಡೆ ಅವರು ಆ ಭಾಗದ ವ್ಯಾಪಾರಿಯಾಗಿದ್ದು, ಅವರೇ ಈ ಕ್ರೀಡಾಕೂಟ ಆಯೋಜಿಸಿದ್ದರು. ಹಣ ಹೂಡಿ ಆಡುವ ಅಕ್ರಮ ಆಟಕ್ಕೆ ಹನುಮಂತಿಯ ಮಲ್ಲಪ್ಪ ಚನ್ನಬಸಪ್ಪ ಗೌಡರ್ ಹಾಗೂ ಬಾಬುಶ್ ಸಾವೇರ್ ರೋಡಿಗ್ರಸ್ ಅವರು ವಿಶೇಷ ಅತಿಥಿಯಾಗಿದ್ದರು. ಅವರ ಜೊತೆ ಪ್ರಗತಿ ಪರ ರೈತರಾದ ಮತ್ತಿಗಾರಿನ ಸುಬ್ರಾಯ ರಾಮಚಂದ್ರ ಹೆಗಡೆ, ಬೊಪ್ಪನಳ್ಳಿಯ ಗಂಗಾಧರ ಸುಬ್ರಾಯ ಭಟ್ಟ, ಯಡಳ್ಳಿಯ ಮಂಜುನಾಥ ಗಣಪತಿ ಹೆಗಡೆ, ಶ್ರೀಧರ ಸೀತಾರಾಮ ಹೆಗಡೆ, ಅಮಿನಳ್ಳಿಯ ಗಜಾನನ ರಾಮಕೃಷ್ಣ ಹೆಗಡೆ ಹಾಗೂ ಸಿದ್ದಾಪುರ ಹೇರೂರು ಶಿರಗೋಡಿನ ಗಜಾನನ ಗೋವಿಂದ ಹೆಗಡೆ ಅವರು ಸಹ ಹಣಹೂಡಿದ್ದರು.
ಈ ಎಲ್ಲರೂ ಸೇರಿ ಜುಲೈ 19ರಂದು ಅಮೃತ ಹೊಟೇಲ್ ಹಿಂದೆ 16090ರೂಪಾಯಿಗಳನ್ನು ಹರಡಿಕೊಂಡು ಇಸ್ಪಿಟ್ ಆಡುತ್ತಿದ್ದರು. ಇದನ್ನು ನೋಡಿದ ಮತ್ತೊಬ್ಬರು ಪೊಲೀಸರಿಗೆ ಫೋನ್ ಮಾಡಿದ್ದರು. ತಮ್ಮ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಆಟ ನಡೆಯುತ್ತಿರುವ ಬಗ್ಗೆ ಅರಿತ ಪಿಸೈ ಅಶೋಕ ರಾಥೋಡ್ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಅಲ್ಲಿದ್ದ 9 ಆಟಗಾರರನ್ನು ವಶಕ್ಕೆಪಡೆದು, ಹಣ ಹಾಗೂ ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿದರು. ಶಿರಸಿ ನ್ಯಾಯಾಲಯದ ಅನುಮತಿಪಡೆದು ಆ ಎಲ್ಲರ ವಿರುದ್ಧವೂ ಕೇಸು ದಾಖಲಿಸಿದರು.
`ಜೂಜಾಟದಿಂದ ಜೀವನ ಹಾಳು’