ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಕಸ್ತೂರಿಬಾ ನಗರದ ಮಹಮಹದ್ ಕೈಪ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತಿಯಾದ ಮಾದಕ ವ್ಯಸನ ಸೇವಿಸಿರುವುದು ಬೆಳಕಿಗೆ ಬಂದಿದೆ.
ಶಿರಸಿಯ ಕಸ್ತೂರಿ ಬಾ ನಗರದ ಆರ್ ಟಿ ಓ ಆಫೀಸ್ ಬಳಿ ಮಹಮದ್ ಕೈಫ್ ಮಹಮದ್ ಪಯಾಜ್ ಖಾನ್ ಅವರು ವಾಸವಾಗಿದ್ದಾರೆ. 19 ವರ್ಷದ ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಉಮೇದಿಯಲ್ಲಿದ್ದಾರೆ. ಆದರೆ, ಸಣ್ಣ ವಯಸ್ಸಿನಲ್ಲಿಯೇ ಶುರುವಾದ ಗಾಂಜಾ ವ್ಯಸನ ಮಹಮದ್ ಕೈಪ್ ಅವರ ಬದುಕನ್ನು ಹಾಳು ಮಾಡಿದೆ. ನಶೆಯ ಗುಂಗಿನಲ್ಲಿ ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ಅವರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಹೊಸ ಮಾರುಕಟ್ಟೆ ಠಾಣೆಯ ಉಪಪೊಲೀಸ್ ನಿರೀಕ್ಷಕಿ ಗೀತಾ ಕಲಘಟಕಿ ಅವರು ಮಹಮದ್ ಕೈಪ್ ಅವರ ನಶೆ ಇಳಿಸಿದ್ದಾರೆ.
ಜುಲೈ 21ರ ರಾತ್ರಿ 8.40 ಆದರೂ ಮಹಮದ್ ಕೈಪ್ ಅವರು ಮನೆಗೆ ಹೋಗಿಲ್ಲ. ಕಸ್ತೂರಿ ಬಾ ನಗರದ ಬಸಟ್ಟಿ ಕೆರೆ ಬಳಿ ಮಾದಕ ವ್ಯಸನ ಸೇವಿಸಿದ ಅವರು ಕೆರೆ ಸುತ್ತ ಅಲೆದಾಡುತ್ತಿದ್ದು, ಅದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಅಪಾಯದ ಅಂಚಿನಲ್ಲಿದ್ದ ಮಹಮದ್ ಕೈಪ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಮಹಮದ್ ಕೈಪ್ ಅವರು ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ನಿಷೇಧಿತ ವಸ್ತು ಸೇವಿಸಿದ ಹಿನ್ನಲೆ ಆರೋಪಿ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
`ಮಾದಕ ವ್ಯಸನ ಜೀವನಕ್ಕೆ ಮಾರಕ’