ಬಿಜೆಪಿ ಪ್ರಮುಖ ಗಣಪತಿ ಕರಂಜೇಕರ್ ಅವರು ತಮ್ಮ ಸಹಚರರ ಜೊತೆ ಸೇರಿ ಕೆಸರೊಳ್ಳಿಯ ಮೀನಿನ್ ಸೂಜ್ ಅವರಿಗೆ ಥಳಿಸಿದ್ದಾರೆ. ಮೀನಿನ್ ಸೋಜ್ ಅವರು ನೆಲಕ್ಕೆ ಬಿದ್ದ ನಂತರ ನಾಲ್ವರು ಸೇರಿ ಬಡಿಗೆಯಿಂದ ಬಡಿದಿದ್ದಾರೆ.
ಕೆಸರೊಳ್ಳಿಯಲ್ಲಿ ಕೆರೆಯ ನೀರು ಬಿಟ್ಟ ವಿಷಯವಾಗಿ ಜಗಳ ನಡೆದಿದ್ದು, ಅದೇ ಹೊಡೆದಾಟದ ಸ್ವರೂಪಪಡೆದಿದೆ. ತಮ್ಮನಿಗೆ ಥಳಿಸಿದ ಗಣಪತಿ ಸಹದೇವ್ ಕರಂಜೇಕರ್ ಅವರು ತಮ್ಮ ಸಹಚರರಾದ ಸತೀಶ ಅಶೋಕ ಕರಂಜೇಕರ್, ಶಿವಾಜಿ ಸಹದೇವ ಕರಂಜೇಕರ್, ಲೋಕಪ್ಪಾ ಸಹದೇವ ಕರಂಜೆಕರ್ ಅವರ ವಿರುದ್ಧ ವ್ಯಾಪಾರಿ ಅಂತೋನ್ ಪಾವಲು ಸೀಜ್ ಅವರು ಪೊಲೀಸ್ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅವರ ದೂರಿನ ಪ್ರಕಾರ, ಜುಲೈ 23ರಂದು ಈ ಹೊಡೆದಾಟ ನಡೆದಿದೆ.
ಗಣಪತಿ ಕರಂಜೇಕರ್ ಅವರು ಮೀನಿನ್ ಸೋಜ್ ಅವರ ಬಳಿ ಆಗಮಿಸಿ `ಈ ಕೆರೆ ಏನ್ ನಿಮ್ಮ ಅಪ್ಪಂದ?’ ಎಂದು ಪ್ರಶ್ನಿಸಿದ್ದಾರೆ. `ಬೇಕಾಬಿಟ್ಟಿ ನೀರು ಬಿಡುವುದಕ್ಕೆ ಹೇಳಿದ್ದು ಯಾರು?’ ಎಂದು ಗದರಿಸಿದ್ದಾರೆ. ಆ ಪ್ರಶ್ನೆಗೆ ಸೂಕ್ತ ಉತ್ತರ ಸಿಗದ ಕಾರಣ ಅವರನ್ನು ಹಿಡಿದು ಥಳಿಸಿದ್ದಾರೆ. ಆಗ, ಸಹಚರರಾದ ಸತೀಶ ಅಶೋಕ ಕರಂಜೇಕರ್, ಶಿವಾಜಿ ಸಹದೇವ ಕರಂಜೇಕರ್, ಲೋಕಪ್ಪಾ ಸಹದೇವ ಕರಂಜೆಕರ್ ಅವರು ಸಹ ಮೀನಿನ್ ಸೋಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನೆಲಕ್ಕೆ ಬೀಳಿಸಿ ಬಡಿಗೆಯಿಂದ ಬಡಿದಿದ್ದಾರೆ.
ಈ ಹೊಡೆದಾಟದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. ಹೊಡೆದಾಟ ಖಂಡಿಸಿದ ಊರಿನ ಜನ ಸಮಗ್ರ ತನಿಖೆಗೆ ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆ, ತಹಶಿಲ್ದಾರ್ ಪಿರೋಜ್ ಷಾ ಸೋಮನಕಟ್ಟಿ ಹಾಗೂ ಪೊಲೀಸರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಊರಿನವರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ತೆರಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ್ ಅವರಿಗೂ ಮನವಿ ಸಲ್ಲಿಸಿ ಆರೋಪಿತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
`ಕಾನೂನು ಸುವ್ಯವಸ್ಥೆ ಕಾಪಾಡಿ’