ಮಕ್ಕಳಿಗೆ ಬೈಕ್ ಕೊಟ್ಟ ಪಾಲಕರಿಗೆ ನ್ಯಾಯಾಲಯ ಪದೇ ಪದೇ ದುಬಾರಿ ದಂಡ ವಿಧಿಸುತ್ತಿದ್ದು, ಅದಾಗಿಯೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಲ್ಲ. ಹೀಗಾಗಿ ಶಿರಸಿ ನ್ಯಾಯಾಲಯ ಅಪ್ತಾಪ್ತರಿಗೆ ಬೈಕ್ ನೀಡಿದ ಪಾಲಕರೊಬ್ಬರನ್ನು ಜೈಲಿಗೆ ಕಳುಹಿಸಿದೆ.
ಶಿರಸಿಯ ಟ್ರಾಫಿಕ್ ಪಿಸೈ ದೇವೇಂದ್ರ ನಾಯ್ಕ ಅವರು ಮೇ ಮಾಸದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಬಿಡ್ಕಿ ಸರ್ಕಲ್ ಬಳಿ ವೇಗವಾಗಿ ಬೈಕ್ ಒಂದು ಬಂದಿದ್ದು, ಅದಕ್ಕೆ ಅಡ್ಡಲಾಗಿ ಅವರು ಕೈ ಮಾಡಿದರು. ವಿಚಾರಣೆ ವೇಳೆ ಅಪ್ರಾಪ್ತ ಬೈಕ್ ಓಡಿಸಿದ್ದು ಅವರ ಗಮನಕ್ಕೆ ಬಂದಿತು. ಹೀಗಾಗಿ, ಆ ಬಗ್ಗೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ಜುಲೈ 22ರಂದು ಶಿರಸಿ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತು. ಬಾಲಕನಿಗೆ ಬೈಕ್ ನೀಡಿದ ಪಾಲಕನನ್ನು ಕೋರ್ಟು ಕಟಕಟೆಯಲ್ಲಿ ನಿಲ್ಲಿಸಿತು. ಆ ಪಾಲಕನಿಗೆ 26500ರೂ ದಂಡ ವಿಧಿಸಿದ ನ್ಯಾಯಾಲಯ ಎರಡು ದಿನ ಜೈಲು ಶಿಕ್ಷೆಯನ್ನು ನೀಡಿತು. ಮಗ ಮಾಡಿದ ತಪ್ಪಿಗೆ ತಂದೆ ಜೈಲು ಸೇರಿದ್ದು, ದಂಡವನ್ನು ಪಾವತಿಸಿ ಕ್ಷಮೆ ಕೋರಿದರು.