ರಾಮನಗರದ ಪವನಕುಮಾರ ಕಟಾವರಕರ್ ಅವರು ಲಾರಿ ಓಡಿಸಿ ಜೀವನ ನಡೆಸುತ್ತಿದ್ದು, ಲಾರಿ ಹಾಳಾದಾಗ GOOGLE ನೆರವು ಯಾಚಿಸಿ ಅವರು 90 ಸಾವಿರ ರೂ ಕಳೆದುಕೊಂಡಿದ್ದಾರೆ. ಸಹಾಯ ಮಾಡುವುದಾಗಿ ನಂಬಿಸಿದ ಅಪರಿಚಿತರು ಪವನಕುಮಾರ ಅವರ ಬ್ಯಾಂಕ್ ಖಾತೆ ಖಾಲಿ ಮಾಡಿದ್ದಾರೆ.
ಜೊಯಿಡಾದ ರಾಮನಗರದ ದುರ್ಗಾದೇವಿಗಲ್ಲಿಯಲ್ಲಿ ಪವನಕುಮಾರ ದೀಪಕ ಕಟಾವರಕರ್ ಅವರು ವಾಸವಾಗಿದ್ದಾರೆ. ಒಂದು ಊರಿನಿಂದ ಮತ್ತೊಂದು ಊರಿಗೆ ಲಾರಿ ಓಡಿಸಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಮಾರ್ಚ್ 5ರಂದು ರಾತ್ರಿ ಅವರು ಧಾರವಾಡದಿಂದ ರಾಮನಗರಕ್ಕೆ ಬರುತ್ತಿದ್ದ ವೇಳೆ ಅವರ ಲಾರಿ ಹಾಳಾಗಿದೆ. ಐಚರ್ ಕಂಪನಿಯ ಎಲ್ಪಿಜಿ ಸಿಲಿಂಡರ್ ಲಾರಿ ಹಾಳಾಗಿದ್ದರಿಂದ ಅವರು ಮೆಕ್ಯಾನಿಕ್ ನೆರವು ಪಡೆಯಲು ಗೂಗಲ್ ಮಾಡಿದ್ದಾರೆ.
ಐಚರ್ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದಾಗ ಅಲ್ಲಿ ಅವರಿಗೆ 7319673644 ಸಂಖ್ಯೆ ಸಿಕ್ಕಿದೆ. ಅದಕ್ಕೆ ಫೋನ್ ಮಾಡಿದಾಗ, ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. `ನಿಮ್ಮ ಟಿಕೆಟ್ ಬುಕ್ ಆಗಿದೆ. ನಿಮ್ಮ ಮೊಬೈಲ್ಗೆ ಬಂದ ಟಿಕೆಟ್ ಸಂಖ್ಯೆಯನ್ನು ಹೇಳಿ’ ಎಂದಿದ್ದಾರೆ. `ಹುಬ್ಬಳ್ಳಿಯಿಂದ ಮೆಕ್ಯಾನಿಕ್ ಕಳುಹಿಸುತ್ತೇವೆ’ ಎಂಬ ಭರವಸೆ ನೀಡಿದ್ದಾರೆ. ಅದಾದ ನಂತರ ಪವನಕುಮಾರ ಅವರ ಮೊಬೈಲಿಗೆ ಬಂದ ಸಂಖ್ಯೆಪಡೆದ ಫೋನ್ ಮಾಡಿದ ವ್ಯಕ್ತಿ, ಅವರ ಫೋನ್ ಹ್ಯಾಕ್ ಮಾಡಿ ಹಣ ಎಗರಿಸಿದ್ದಾರೆ.
ಎರಡು ತಾಸುಗಳ ಕಾಲ ಪವನಕುಮಾರ ಅವರ ಮೊಬೈಲ್ ಹ್ಯಾಂಗ್ ಆಗಿದೆ. ಅದಾದ ನಂತರ ಅವರ ಕೆನರಾ ಬ್ಯಾಂಕ್ ಖಾತೆಯಿಂದ 90 ಸಾವಿರ ರೂ ಹಣ ಖಾಲಿಯಾಗಿದೆ. ಸೌರಭ್ ಯಾದವ್ ಎಂಬ ಅಪರಿಚಿತನ ಖಾತೆಗೆ ಹಣ ವರ್ಗವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪವನಕುಮಾರ್ ಅವರು ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿಗೆ ದೂರು ನೀಡಿದ್ದು, ಅದಾಗಿಯೂ ಹಣ ಮರಳಿ ಸಿಕ್ಕಿಲ್ಲ.
`ಯಾರಿಗೂ OTP ಹೇಳಬೇಡಿ’