ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಅನೇಕ ಉದ್ಯೋಗಗಳು ಖಾಲಿ ಇವೆ. ಸಂಬoಧಿಸಿದ ಹುದ್ದೆಗಳಿಗೆ ಅರ್ಹರ ಹುಡುಕಾಟ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತು ರಾಷ್ಟಿಯ ಆರೋಗ್ಯ ಅಭಿಯಾನ ಅಡಿಯಲ್ಲಿಯ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಅವುಗಳ ಅನುಷ್ಠಾನಕ್ಕಾಗಿ ತಜ್ಞ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯವಿದೆ. MD, MS, ಡಿಪ್ಲೋಮಾ ವಿದ್ಯಾರ್ಹತೆಯಿರುವವರ ಜೊತೆ MBBS ಓದಿದವರನ್ನು ಇಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಇದರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ವ್ಯಾಪ್ತಿಯಲ್ಲಿರುವ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಫಾರ್ಮಸಿ ಅಧಿಕಾರಿ ಮತ್ತು ಶುಶ್ರೂಷಾಧಿಕಾರಿ ಹುದ್ದೆಗಳಿಗೂ ಅರ್ಹರ ಹುಡುಕಾಟ ನಡೆದಿದೆ.
ರಾಷ್ಟಿಯ ಆರೋಗ್ಯ ಅಭಿಯಾನ ಯೋಜನೆ ಅಡಿ ಅರ್ಜಿ ಸಲ್ಲಿಸುವವರು ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿ ಹೊಂದಿರಬೇಕು ಎಂಬ ನಿಯಮವಿದೆ. ರಜಾ ದಿನಹೊರತುಪಡಿಸಿ ನೇರ ಸಂದರ್ಶನಕ್ಕೆ ಅವರನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಂದರ್ಶನ ನಡೆಯಲಿದೆ. ತಜ್ಞ ವೈದ್ಯಾಧಿಕಾರಿಗಳಿಗೆ ಮಾಸಿಕ 1,30,000ರೂ ವೇತನ ಹಾಗೂ ಎಂ.ಬಿ.ಬಿ.ಎಸ್. ವೈದ್ಯಾಧಿಕಾರಿಗಳಿಗೆ ಮಾಸಿಕ 60,000 ವೇತನ ನೀಡಲಾಗುತ್ತದೆ.
ಇನ್ನೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ವ್ಯಾಪ್ತಿಯಲ್ಲಿರುವ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಫಾರ್ಮಸಿ ಅಧಿಕಾರಿ ಮತ್ತು ಶುಶ್ರೂಷಾಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ವೇತನ ನೀಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 23 ಕಡೆ ಫಾರ್ಮಾಸಿಸ್ಟ್ ಅಧಿಕಾರಿ ಹುದ್ದೆ ಖಾಲಿಯಿದೆ. ಈ ಉದ್ಯೋಗಪಡೆಯಲು ಡಿಪ್ಲೋಮಾ ಇನ್ ಲ್ಯಾಬೋರೇಟರಿ ತಾಂತ್ರಿಕ ವಿದ್ಯಾರ್ಹತೆಪಡೆದವರಿರಬೇಕು ಎಂಬ ನಿಯಮವಿದೆ. 27 ಕಡೆ ಕಿರಿಯ ಲ್ಯಾಬ್ ಟೆಕ್ನಿಷಿಯನ್ ಅಧಿಕಾರಿ ಹುದ್ದೆ ಖಾಲಿಯಿದ್ದು, ಡಿ ಪರ್ಮಾ ವಿದ್ಯಾರ್ಹತೆಪಡೆದಿರಬೇಕು. ಜೊತೆಗೆ ಈ ಹುದ್ದೆಗೆ ಕರ್ನಾಟಕ ಫಾರ್ಮಸಿ ಕೌನ್ಸಿಲ್ ನೋಂದಣಿಯಾಗಿರಬೇಕು ಎಂಬ ನಿಯಮವಿದೆ. 11 ಕಡೆ ಶುಶ್ರೂಷಾಧಿಕಾರಿ ಹುದ್ದೆ ಖಾಲಿ ಇದ್ದು, ಸರ್ಕಾರಿ ಮಾನ್ಯತೆಪಡೆದ ಶಾಲೆಯಲ್ಲಿ ನರ್ಸಿಂಗ್ ವಿದ್ಯಾರ್ಹತೆಪಡೆದಿರಬೇಕು. ಹಾಗೂ ನರ್ಸಿಂಗ್ ಕೌನ್ಸಿಲ್’ನಲ್ಲಿ ನೋಂದಣಿಯಾಗಿರಬೇಕು ಎಂಬ ನಿಯಮವಿದೆ.
ಈ ಹುದ್ದೆ ಗುತ್ತಿಗೆ ಆಧಾರಿತವಾಗಿದ್ದು, ಒಂದು ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ. ಆಸಕ್ತರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಉಚಿತ ಅರ್ಜಿ ವಿತರಣೆ ನಡೆಯುತ್ತಿದೆ. ಜುಲೈ 24ರಿಂದ ಅರ್ಜಿ ವಿತರಣೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ಅಗಸ್ಟ 5 ಕೊನೆ ದಿನ.