ಹಿರಿಯ ನಾಗರಿಕರು ಮತ್ತು ಎಂಡೋಸಲ್ಫಾನ್ ಬಾಧಿತ ವಿಶೇಷ ಚೇತನರ ಸಬಲೀಕರಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯೂ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಗೆ `ಸಮಾಜ ಸೇವಾ ಶ್ರೇಷ್ಠತಾ ಪ್ರಶಸ್ತಿ’ ನೀಡಿದೆ. ಸ್ಕೋಡ್‌ವೆಸ್ ಸಾರಥಿಗಳಾದ ವೆಂಕಟೇಶ ನಾಯಕ ಹಾಗೂ ಸರಸ್ವತಿ ಎನ್ ರವಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
FKCCI ಗ್ಲೋಬಲ್ ಸಿ.ಎಸ್.ಆರ್ & ಸಸ್ಟೇನೇಬಿಲಿಟಿ ಸಮಿಟ್ 2026ನ ಅಂತರರಾಷ್ಟಿಯ ಮಟ್ಟದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ ಮತ್ತು ಅಂತರರಾಷ್ಟ ಮಟ್ಟದ ಸಿಎಸ್‌ಆರ್ ಕಾರ್ಯಕ್ರಮಗಳು ಆದ್ಯತಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳಬೇಕೆಂಬ ಉದ್ದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಪ್ರತಿಷ್ಠಿತ ಕಂಪನಿಗಳು, ಸ್ವಯಂ ಸೇವಾ ಸಂಸ್ಥೆಗಳ ಸಮನ್ವಯತೆಗಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯೂ ಸಂಘಟಿಸಿದ್ದ ಕಾರ್ಯಕ್ರಮಕ್ಕೆ ಸ್ಕೊಡ್‌ವೆಸ್ ಸಂಸ್ಥೆಯನ್ನು ವಿಶೇಷವಾಗಿ ಆಹ್ವಾನಿಸಿ ಗೌರವಿಸಲಾಗಿದೆ.
ಪ್ರಶಸ್ತಿ ಪ್ರದಾನ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸ್ಕೊಡ್‌ವೆಸ್ ಸಂಸ್ಥೆಯ ಸಾಧನೆಯನ್ನು ಅಭಿನಂದಿಸಿದರು. ಸಮಾರಂಭದಲ್ಲಿ FKCCIನ ಪ್ರಥಮ ಮಹಿಳಾ ಅಧ್ಯಕ್ಷೆ ಉಮಾ ರೆಡ್ಡಿ ಅಧ್ಯಕ್ಷತೆವಹಿಸಿದ್ದರು. FKCCIನ ಹಿರಿಯ ಉಪಾಧ್ಯಕ್ಷ ಟಿ ಸಾಯಿರಾಂ ಪ್ರಸಾದ್, ಯು.ಎನ್.ಆರ್.ಸಿಯ ಇಂಡಿಯಾ ಹೆಡ್ ಸ್ಟೀಫನ್ ಪ್ರೆöÊಸನರ್, ಇಸ್ರೇಲ್ ಜನರಲ್ ಕನ್ಸೂಲೇಟ್‌ನ ಓರ್ಲಿ ವೈಟ್ಸ್ಮನ್, ಯು.ಎನ್. ಗ್ಲೋಬಲ್ ಕಾಂಪಾಕ್ಟ್ ನೆಟ್‌ವರ್ಕ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ರತ್ನೇಶ್, ಲೂಥ್ರಾ ಗ್ರೂಪ್‌ನ ಚೇರಮನ್ ಗಿರೀಶ್ ಲೂಥ್ರಾ ಇತರರು ಇದ್ದರು.