ಅಪರೂಪದ ಭತ್ತದ ತಳಿ ಅಭಿವೃದ್ಧಿಗಾಗಿ ಸ್ಕೋಡ್ವೆಸ್ ಸಂಸ್ಥೆ `ನಾಟಿ ಹಬ್ಬ’ ಆಯೋಜಿಸಿದ್ದು, ವಿವಿಧ ಅಧಿಕಾರಿಗಳು ಹಾಗೂ ಮಠಾಧೀಶರು ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ. ಆ ಮೂಲಕ ಆಹಾರ ಬೆಳೆ ಬೆಳೆಯುವ ರೈತರಿಗೆ ಗಣ್ಯರು ಬೆಂಬಲ ನೀಡಿದ್ದಾರೆ.
ADVERTISEMENT
ಶಿರಸಿಯ ಉಂಚಳ್ಳಿ ಬಳಿಯ ತುಡ್ವಿ ಮನೆ ಸರಸ್ವತಿ ಫಾರಂ’ನಲ್ಲಿ ಮಂಗಳವಾರ ನಾಟಿ ಹಬ್ಬ ನಡೆದಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಮಹತ್ವ ಸಾರುವುದಕ್ಕಾಗಿ ಸ್ಕೋಡ್ವೆಸ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದ್ದು, ಗೋ ಪೂಜೆ-ನೇಗಿಲು ಪೂಜೆ ನಂತರ ಗಣ್ಯರು ಗದ್ದೆಗಿಳಿದಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿಯೇ ನಾಟಿ ಹಬ್ಬ ಜೋರಾಗಿ ನಡೆದಿದೆ. ಹಾವೇರಿಯ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಅವರು ಉತ್ಸಾಹದಿಂದ ಕೆಸರು ಗದ್ದೆಗಿಳಿದು ನಾಟಿ ಕಾರ್ಯ ನಡೆಸಿದ್ದಾರೆ.
ADVERTISEMENT
ಈ ವೇಳೆ ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ ವಿ ವೆಂಕಟೇಶ ಅವರು ‘ಬೀಜ ಸಂಪದ’ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಸ್ಕೊಡ್ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಕಾರ್ಯಕ್ರಮ ಸಂಘಟಿಸಿದ್ದು, ನಾಟಿ ಹಬ್ಬದ ಯಶಸ್ಸಿನ ಬಗ್ಗೆ ಅಲ್ಲಿದ್ದವರು ಮೆಚ್ಚುಗೆಯ ಮಾತನಾಡಿದ್ದಾರೆ.