ಶ್ರಾವಣ ಮಾಸ ಬಂತೆoದೆರೆ ಸಾಕು ಒಂದೊoದು ದಿನ ತಿಥಿಗೊಂದು ವಿಶೇಷತೆ ವಿವಿಧ ರೀತಿಯ ಹಬ್ಬಹರಿದಿಗಳು ನಡೆಯುತ್ತದೆ. ಈ ಮಾಸವು ಅಮವಾಸ್ಯೆಯಿಂದ ಪ್ರಾರಂಭವಾಗಿ ಒಂದು ತಿಂಗಳವರೆಗೆ ಮುಂದುವರಿಯುತ್ತಿದೆ. ಈ ಮಾಸದಲ್ಲಿ ವಿವಿಧ ರೀತಿಯ ಧಾರ್ಮಿಕ ಆಚರಣೆಗಳು ನಡೆಯುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ತಿಂಗಳನ್ನು ವೃತಾಚರಣೆ ತಿಂಗಳೆoದು ಸಾಕಷ್ಟು ಕಡೆಯಲ್ಲಿ ಆಚರಿಸುವದುಂಟು. ವೃತಾಚರಣೆಯನ್ನು ಪಾಲಿಸುವವರು ಒಂದು ತಿoಗಳ ಕಾಲ ಕಟ್ಟುನಿಟ್ಟಾಗಿ ಪೂಜಾ ಕೈಂಕರ್ಯಗಳನ್ನು, ದಿನವಾರವನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಾರೆ. ಹಾಗಾಗಿ ಈ ಅವಧಿಯಲ್ಲಿ ಮೀನು-ಮಾಂಸ, ಬೀಡಿ-ಸಿಗರೇಟು, ಮದ್ಯಪಾನವನ್ನು ಬದಿಗಿಡುತ್ತಾರೆ.
ವಿಶೇಷ ಅಮವಾಸ್ಯೆ
ಶ್ರಾವಣ ಪ್ರಾರಂಭದ ಅಮವಾಸ್ಯೆಯನ್ನು ನಾಡಿನ ಬೇರೆ ಬೇರೆ ಕಡೆಯಲ್ಲಿ ವಿಶೇಷದಿನವಾಗಿ ಆಚರಿಸಲಾಗುತ್ತದೆ. ಅದರಲ್ಲಿ ಭೀಮನ ಅಮವಾಸ್ಯೆಯಾಗಿ, ಹೊಸ ಅಳಿಯಂದಿರ ಅಮವಾಸ್ಯೆಯಾಗಿ, ಶ್ರಾವಣ ಆರಂಭದ ಮುನ್ನಾದಿನವಾಗಿ, ಎಳ್ಳಮವಾಸ್ಯೆಯಾಗಿ ಹೀಗೆ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿ ಕರಾವಳಿ ತಾಲೂಕುಗಳಲ್ಲಿ ಶ್ರಾವಣ ಪ್ರಾರಂಭದ ಅಮವಾಸ್ಯೆ ಎಂದರೆ ಇದಕ್ಕೆ ಒಂದು ವಿಶೇಷ ಅರ್ಥವನ್ನೆ ಕಲ್ಪಿಸಿದ್ದಾರೆ. ಹೊಸ ಅನ್ವರ್ಥವನ್ನೆ ಕೊಟ್ಟಿದ್ದಾರೆ. ಇಲ್ಲಿ ಇದಕ್ಕೆ “ಗಟಾರ ಅಮವಾಸ್ಯೆ” ಎಂದೇ ಕರೆಯಲಾಗುತ್ತದೆ. ಹಾಗಾಗಿ ಗಟಾರ ಅಮವಾಸ್ಯೆ ಅಥವಾ “ ಮದ್ಯ ಅಮವಾಸ್ಯೆ” ಎನ್ನುವದು ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರ ಬಾಯಲ್ಲಿ ಇದು ಜನಜನಿತವಾಗಿದೆ.
ಏನಿದರ ಗಮ್ಮತ್ತು ?
ಈ ಅಮವಾಸ್ಯೆಗೂ ಬೇರೆ ದಿನ ಬರುವ ಅಮವಾಸ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಇದು ಆಚರಿಸಲ್ಪಡುವದು ವಿಶೇಷ ವಾಗಿ “ಪಾನ ಪ್ರಿಯರಿಗಾಗಿ”.ಪಾನ ಪ್ರಿಯರು ಇದನ್ನು ತಮ್ಮ ಅಮವಾಸ್ಯೆ ಎಂದು ಕರೆದುಕೊಂಡಿದ್ದಾರೆ. ಅಂದರೆ ಶ್ರಾವಣ ಮಾಸದ ವೃತಾಚರಣೆಯನ್ನು ಆಚರಿಸುವವರು ಮೀನು-ಮಾಂಸ-ಬೀಡಿ-ಸಿಗರೇಟು ಮತ್ತು ಮದ್ಯ ಸೇವಿಸುವವರು ಈ ಒಂದು ತಿಂಗಳ ವೃತಾಚರಣೆಯಲ್ಲಿ ಇವ್ಯಾವುದನ್ನು ಸೇವಿಸುವದಿಲ್ಲ. ಹಾಗಾಗಿ ಶ್ರಾವಣ ಮಾಸದ ಆರಂಭದ ದಿನ ಅಮವಾಸ್ಯೆಯಂದು ಪಾನ ಪ್ರಿಯರು ಮನಸೋ ಇಚ್ಛೆಯಂತೆ ತುಂಡು-ಗುAಡು ಹಾಕಿ ಕುಡಿತದ ತಮ್ಮ ಬಯಕೆಯನ್ನು ತೀರಿಸಿಕೊಳ್ಳುತ್ತಾರೆ.
ಈ ದಿನದಂದು ಹಳ್ಳಿ ನಗರ ಎನ್ನದೇ ಎಲ್ಲೆಡೆ ಮದ್ಯದಂಗಡಿಗಳು ಭಾರಿ ಮದ್ಯಪ್ರಿಯರಿಂದ ತುಂಬಿರುತ್ತದೆ. ಎಲ್ಲಿ ನೋಡಿದಲ್ಲಿ ಮದ್ಯದ ದಾಸರೆ ಕಂಡು ಬರುತ್ತಾರೆ. ಎಲ್ಲರ ಬಾಯಲ್ಲಿ ಗಟಾರ ಅಮಾಸ ಎನ್ನುತ್ತ ಕೈಯಲ್ಲಿ ಮದ್ಯದ ಬಾಟಲಿಗಳು, ಗ್ಲಾಸುಗಳು ರಂಗೇರುತ್ತದೆ. ದಿನದ ಬೆಳಿಗ್ಗೆಯಿಂದ ಹಿಡಿದು ಮಧ್ಯರಾತ್ರಿಯವರೆಗೂ ‘ಮದ್ಯ’ ದಂಗಡಿಗಳು ಜೋರಾದ ಭರಾಟೆಯಲ್ಲಿದ್ದರೆ. ಮದ್ಯ ಪ್ರಿಯರು ‘ಅಮಲಿನ ರಂಗಿ’ನಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಮದ್ಯ ಹೆಚ್ಚಾದ ಕೂಡಲೆ ನಡೆಯಲು-ನಿಲ್ಲಲು ಬಾರದೆ ತೂರಾಡುತ್ತ ಸಾಗುವ ದೃಶ್ಯಕಾಣುತ್ತದೆ. ಹೀಗೆ ತೂರಾಡುತ್ತ ತೂರಾಡುತ್ತ ರಸ್ತೆಯ ಮಗ್ಗಲು, ವಿದ್ಯುತ ಕಂಬಗಳು ಹಾಗೂ ರಸ್ತೆಯ ಬದಿಯ ಚರಂಡಿಗಳು ಈ ಕುಡುಕರಿಗೆ ಆಶ್ರಯದ ತಾಣವಾಗುತ್ತದೆ. ಹಾಗಾಗಿ ಕುಡಿದು ಹೆಚ್ಚಾದ ಮೇಲೆ ಅವರಿಗೆ ನೆಲವೆ ಹಾಸಿಗೆ. ಅಂದರೆ ಕಂಠಮಟ್ಟ ಕುಡಿದು ಕೊನೆಗೆ ರಸ್ತೆಯ ಮೇಲೆ ಉರುಳುವದಕ್ಕೆ ಗಟಾರ ಅಮವಾಸ್ಯೆ ಪ್ರತಾಪ ಎಂದು ಕರೆಯುತ್ತಾರೆ.
ರಂಗೇರುವ ಗಡಿಯ ಗೋವಾ.
ಈ ದಿನದಂದು ಕಾರವಾರಕ್ಕೆ ಹೊಂದಿಕೊAಡಿರುವ ಗೋವಾ ರಾಜ್ಯದ ಗಡಿಯಲ್ಲಿರುವ ಹಲವಾರು ಮದ್ಯದಂಗಡಿಗಳು ಮದ್ಯಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಈ ಒಂದು ದಿನದ ಪ್ರತಿಯೊಂದು ಬಾರ್ ಗಳು ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟನ್ನು ನಡೆಸುತ್ತವೆ. ನಶ್ಯದ ಅಮಲಿನ ಜಗತ್ತೇ ಕುಡುಕರ ಅಮವಾಸ್ಯೆಯಾಗಿದೆ. ಹಾಗಾಗಿ ಕಾರವಾರದಲ್ಲಿ ಕೊಂಕಣಿ ಮಾತನಾಡುವವರು ಯಾರೆ ಸಿಗಲಿ, `ಆಜ ಗಟಾರ ಅಮಾಸ ಕೈ ಗೆಲ್ಲೋ ಮಾರಾಯ’ ಎಂದು ಕೇಳುತ್ತಾರೆ.