ಬರ್ತಡೆ ಪಾರ್ಟಿಗೆ ಹೋಗಿದ್ದ ಬೆಲೆಕೇರೆಯ ಲಕ್ಷ್ಮೀಕಾಂತ ನಾಯಕ ಅವರ ಮೇಲೆ ಅಪರಿಚಿತರ ದಾಳಿ ನಡೆದಿದೆ. ಗಣೇಶ, ರಜತ, ರಕ್ಷಿತ ಎಂಬಾತರು ದಾಳಿ ಮಾಡಿದ ಬಗ್ಗೆ ಅವರು ದೂರಿದ್ದಾರೆ.
ಅಂಕೋಲಾದ ಬೆಲೆಕೇರಿಯಲ್ಲಿ ಲಕ್ಷ್ಮೀಕಾಂತ ಅನಂತ ನಾಯಕ ಅವರು ವಾಸವಾಗಿದ್ದಾರೆ. 40 ವರ್ಷದ ಅವರು ಮ್ಯಾನೇಜರ್ ಆಗಿ ಬದುಕು ಕಟ್ಟಿಕೊಂಡಿದ್ದಾರೆ. ಅಗಸ್ಟ 7ರಂದು ಅವರ ಸಂಬoಧಿಕರ ಮಗಳಾದ ಆರಾಧ್ಯ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರ ಆಮಂತ್ರಣ ಮನ್ನಿಸಿ ಲಕ್ಷ್ಮೀಕಾಂತ ನಾಯಕ ಅವರು ಅಂಕೋಲಾ ಇಂಟರ್‌ನ್ಯಾಶನಲ್ ಹೊಟೇಲಿಗೆ ಹೋಗಿದ್ದಾರೆ. ರಾತ್ರಿ 10.30ರವರೆಗೂ ಅಲ್ಲಿ ಅವರು ಪಾರ್ಟಿ ಮಾಡಿದ್ದಾರೆ. ಅದಾದ ನಂತರ ಅವರು ಶೌಚಾಲಯದ ಬಳಿ ತೆರಳಿದ್ದು, ಅಲ್ಲಿ ಅವರಿಗೆ ಸ್ನೇಹಿತ ಉಜ್ವಲ್ ಅವರು ಎದುರಾಗಿದ್ದಾರೆ. ಅವರ ಜೊತೆ ಮಾತನಾಡಿ ಮರಳುವಾಗ ಶೌಚಾಲಯದ ಬಳಿ 12 ಜನ ಮದ್ಯಪಾನ ಮಾಡುತ್ತಿರುವುದನ್ನು ನೋಡಿದ್ದಾರೆ.
ಈ ವೇಳೆ ಅಲ್ಲಿಗೆ ಲಕ್ಷ್ಮೀಕಾಂತ ನಾಯಕ ಅವರ ಮಗಳು ವರಾಹ ಒಳಗೆ ಬಂದಿದ್ದು, `ಇಲ್ಲಿಗೆ ಏಕೆ ಬಂದೆ? ಎಂದು ಅವರು ಪ್ರಶ್ನಿಸಿದ್ದಾರೆ. ಈ ವೇಳೆ ಮದ್ಯಪಾನ ಮಾಡುತ್ತಿದ್ದ ಮೂವರು ಲಕ್ಷ್ಮೀಕಾಂತ ನಾಯಕ ಅವರನ್ನು ನಿಂದಿಸಿ ಏಕಾಏಕಿ ದಾಳಿ ಮಾಡಿದ್ದಾರೆ. ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೊಡೆದಾಟ ತಪ್ಪಿಸಲು ಬಂದ ಉಮಾಕಾಂತ ನಾಯಕ ಅವರಿಗೂ ಆ ಮೂವರಿಂದ ಪೆಟ್ಟು ಬಿದ್ದಿದೆ. ಅದಾದ ನಂತರ ಲಕ್ಷ್ಮೀಕಾಂತ ನಾಯಕ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದಿದ್ದಾರೆ.
ತಮ್ಮ ಮೇಲೆ ದಾಳಿ ಮಾಡಿದವರ ಬಗ್ಗೆ ವಿಚಾರಿಸಿದಾಗ ಲಕ್ಷ್ಮೀಕಾಂತ ನಾಯಕ ಅವರಿಗೆ ಗಣೇಶ, ರಜತ, ರಕ್ಷಿತ ಎಂಬ ಹೆಸರು ಗೊತ್ತಾಗಿದೆ. ಅದೇ ಅನುಮಾನದ ಅಡಿ ಅವರು ಪೊಲೀಸ್ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
`ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕಾಪಾಡಿ’