ಉಮ್ಮಚ್ಗಿ ಹುಣಸೆಮನೆಯ ಸೋಮು ಸಿದ್ದಿ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಿದರೂ, ಬದುಕಿಸಲು ಆಗಿಲ್ಲ.
ಯಲ್ಲಾಪುರದ ಉಮ್ಮಚ್ಗಿ ಹುಣಸೆಮನೆಯಲ್ಲಿ ಸೋಮು ಸುಬ್ಬಾ ಸಿದ್ದಿ ಅವರು ವಾಸವಾಗಿದ್ದರು. 51 ವರ್ಷದ ಅವರು ಅಗಸ್ಟ 13ರಂದು ಹಲಸಿನಕೊಪ್ಪದಿಂದ ಕನನಳ್ಳಿ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ಆ ಬೈಕು ಸ್ಕಿಡ್ ಆಗಿ ಬಿದ್ದಿದ್ದು, ಬೈಕಿನಿಂದ ಬಿದ್ದ ಸೋಮು ಸಿದ್ದಿ ಅವರು ಗಂಭೀರವಾಗಿ ಗಾಯಗೊಂಡರು. ಬಿದ್ದ ರಭಸಕ್ಕೆ ಅವರ ಮೊಣಕಾಲು ಹಾಗೂ ಗುಪ್ತಾಂಗಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟು ಬಿದ್ದಿತು.
ಸೋಮು ಸಿದ್ದಿ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಿಂದ ಅವರ ನೋವು ಕಡಿಮೆ ಆಗಲಿಲ್ಲ. ಸಾವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಅಗಸ್ಟ 14ರ ರಾತ್ರಿ 12 ಗಂಟೆಗೆ ಸಾವು ಸೋಮು ಸಿದ್ದಿ ಅವರು ಕೊನೆಯುಸಿರೆಳೆದರು. ಭಾವನ ಆರೈಕೆಯಲ್ಲಿದ್ದ ಉಮ್ಮಚ್ಗಿ ಹುಲ್ಲರಮನೆಯ ಗೋವಿಂದ ಸೋಮು ಸಿದ್ದಿ ಅವರು ಮರಣದ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಪೊಲೀಸ್ ಪ್ರಕರಣ ದಾಖಲಿಸಿ, ಆ ದಾಖಲೆ ಆಧಾರದಲ್ಲಿ ಅವರು ಆಸ್ಪತ್ರೆಯಲ್ಲಿದ್ದ ಶವ ಬಿಡಿಸಿಕೊಂಡರು.
`ನಿಧಾನವಾಗಿ ವಾಹನ ಓಡಿಸಿ’