• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

August 18, 2026
Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ!

August 18, 2026
ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

August 18, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

August 18, 2026
Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ!

August 18, 2026
ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

August 18, 2026
  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

Achyutkumar by Achyutkumar
August 18, 2026
Share on FacebookShare on WhatsappShare on Twitter
ADVERTISEMENT

ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಶಾಸಕ, ಮಾಜಿ ಸಚಿವ ಮಂಕಾಳ ಸುಬ್ಬಾ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಮಂಕಾಳು ವೈದ್ಯರನ್ನು ಸಮಾಧಾನ ಮಾಡಲು ತುಸು ಕಷ್ಟವಾಯಿತು’ ಎಂದು ಸ್ವತಃ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಹೇಳಿದ್ದಾರೆ. ‘ನೀವು ಉಪ ಸಭಾಧ್ಯಕ್ಷ ಸ್ಥಾನ ದೊರೆಯಿತು ಎಂದು ಬೇಸರಿಸಿಕೊಳ್ಳಬೇಡಿ. ರುದ್ರಪ್ಪ ಲಮಾಣಿ ಅವರು ಇದೇ ಸ್ಥಾನದಲ್ಲಿ ಕುಳಿತು ಈಗ ಸಚಿವರಾಗಿದ್ದಾರೆ. ಆ ಸ್ಥಾನದಲ್ಲಿ ಕುಳಿತ ಎಸ್ ಎಂ ಕೃಷ್ಣ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದರು. ಅದಕ್ಕೆ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ’ ಎಂದು ಮಂಕಾಳು ವೈದ್ಯ ಅವರನ್ನು ಡಿಕೆ ಶಿವಕುಮಾರ ಅವರು ಸಮಾಧಾನ ಮಾಡಿದರು.

‘ಮೀನುಗಾರ ಕುಟುಂಬದಿಂದ ಬಂದು. ಈಗಲೂ ತಮ್ಮ ವೃತ್ತಿಯಲ್ಲಿ ತೊಡಗಿರುವ ಸಜ್ಜನ ವ್ಯಕ್ತಿಯಾದ ಮಂಕಾಳ್ ವೈದ್ಯ ಅವರನ್ನು ಉಪ ಸಭಾದ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ನೋಡಿ ಸಂತಸವಾಗಿದೆ’ ಎಂದು‌ ಸಹ ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಸಿಎಂ‌ ಮಾತಿನ ಮಧ್ಯೆ ‘ಉಪಸಭಾಧ್ಯಕ್ಷರ ಆಯ್ಕೆ ಟೈಪಿಂಗ್ ತಪ್ಪಿನಿಂದ ಉಂಟಾಗಿದೆ’ ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದಾಗ ‘ಆಯಿತು, ನಿಮ್ಮ‌ ಮಾತನ್ನೂ ಒಪ್ಪೋಣ. ಆದರೆ ನಾವೆಲ್ಲರೂ ಸೇರಿ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದೇವೆ. ರಾಜಕೀಯದಲ್ಲಿ ಹಗ್ಗ ಜಗ್ಗಾಟ ನಿಮ್ಮಲ್ಲಿ, ನಮ್ಮಲ್ಲಿ ಎಲ್ಲಾಕಡೆಯೂ ನಡೆಯುತ್ತದೆ. ಆದರೆ ನಮ್ಮಲ್ಲಿ ಯಾವುದೇ ಜಗ್ಗಾಟ ಉಂಟಾಗಲಿಲ್ಲ. ಈ ಸ್ಥಾನಕ್ಕೆ ಮಂಕಾಳ್ ವೈದ್ಯ ಅವರನ್ನು ಮನವೊಲಿಸಲು ನಮಗೆ ಕಷ್ಟವಾಯಿತು’ ಎಂದರು. ‘ವಿರೋಧ ಪಕ್ಷದವರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಸಂಪ್ರದಾಯವಿದೆ. ಆದರೆ ಲೋಕಸಭೆಯಲ್ಲಿ ಇನ್ನೂ ಆ ಸ್ಥಾನ ಖಾಲಿ ಬಿಡಲಾಗಿದೆ. ನಾವೂ ಇದರ ಬಗ್ಗೆಯೂ ಆಲೋಚನೆ ಮಾಡಿದೆವು.‌ ಆದರೆ ಹೆಚ್ಚು ಒತ್ತಡವಿದ್ದ ಕಾರಣಕ್ಕೆ ಮಂಕಾಳ್‌ ವೈದ್ಯ ಅವರಿಗೆ ಜವಾಬ್ದಾರಿ ನೀಡಲಾಯಿತು. ಅವರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿತ್ತು. ನಾನೇ ಅವರ ಬಳಿ ಮನವಿ ಮಾಡಿ ಈ ಉಪಸಭಾಧ್ಯಕ್ಷರ ಸ್ಥಾನ ಪಡೆಯುವಂತೆ ಕೇಳಿಕೊಂಡೆ’ ಎಂದರು. ‘ಉಪ ಸಭಾದ್ಯಕ್ಷರ ಆಯ್ಕೆ ಸಂಬಂಧ ವಿರೋಧ ಪಕ್ಷದವರಿಗೂ ಅಭಿನಂದನೆ ತಿಳಿಸುತ್ತೇನೆ. ನಮ್ಮ ಪಕ್ಷದ ಲೆಡರ್ ಹೆಡ್ ನಲ್ಲಿ ಸಭಾಪತಿ, ಉಪಸಭಾಪತಿಗಳ ಹೆಸರನ್ನು ಸೂಚಿಸಲಾಗಿತ್ತು ಎಂದು ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ’ ಎಂದರು.

‘ಇದು ಅಪರೂಪದ ಸಂದರ್ಭ. ನನಗೆ ಅತ್ಮೀಯ ಮಿತ್ರರು. ಅವರ ನಡತೆ, ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಪಯಣ ಬಹಳ ವಿಶೇಷವಾಗಿದೆ. ಪಕ್ಷೇತರ ಶಾಸಕರಾಗಿ ಆಯ್ಕೆಯಾದವರು. ನಂತರ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಯಿತು. ಬಂದರು, ಮೀನುಗಾರಿಕೆ ಸಚಿವರಾಗಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಿದವರು’ ಎಂದು ಡಿಕೆ ಶಿವಕುಮಾರ ಅವರು ಸ್ಮರಿಸಿದರು.

‘ಮಂಕಾಳು ವೈದ್ಯ ಅವರು ಈಗಲೂ ತಮ್ಮ ವೃತ್ತಿ ಮಾಡುತ್ತಿದ್ದಾರೆ. ಅದರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. 2005 ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. ಅಂದರೆ ತಳಮಟ್ಟದ ರಾಜಕೀಯದಿಂದ ಮೇಲೆ ಬಂದವರು. 2013 ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. 2018 ರಲ್ಲಿ ಕಾರಣಾಂತರಗಳಿಂದ ಸೋಲಬೇಕಾಯಿತು. 2023 ರಲ್ಲಿ ಮತ್ತೆ ಗೆದ್ದು ಅತ್ಯುತ್ತಮವಾಗಿ ಕೆಲಸ ಮಾಡಿದರು’ ಎಂದರು.

ಬಿಜೆಪಿಯ ಅರವಿಂದ ಬೆಲ್ಲದ ಅವರು ‘ವೈದ್ಯ ಅವರ ಮನವೊಲಿಸಲು ನಿಮಗೆ ಸಮಯ ವ್ಯರ್ಥವಾಗಿದೆ. ಅವರಿಗೆ ತಯಾರಿರಲಿಲ್ಲ’ ಎಂದಾಗ, ಪ್ರತಿಕ್ರಿಯಿಸಿದ ಸಿಎಂ ‘ನಿನಗೂ ಪರಿಸ್ಥಿತಿ ಆ ಬರುತ್ತದೆ. ನಿನ್ನ ಮನವೊಲಿಸಲಿಲ್ಲವೇ? ಯಾವುದೇ ಫೈಲ್ ಗೆ ಸಹಿ ಹಾಕಬೇಡಿ ಹುಷಾರಪ್ಪ ಎಂದು ನೀವು ಹೇಳಿರಲಿಲ್ಲವೇ? ನನಗೂ ಎಲ್ಲವೂ ಗೊತ್ತಿದೆ. ನಾಳೆ ನೀವು ಪಕ್ಕದ ಚೇರಿನಿಂದ ಈ ಕಡೆ ಇರುವ ಚೇರಿಗೂ ಬರಬಹುದು. ಹಿಂದೆ, ಮುಂದೆಯೂ ಆಗಬಹುದು. ‌ರಾಜಕೀಯ ಎಂಬುದು ಸಾಧ್ಯತೆಗಳ ಕಲೆ.‌ ಯಾರು ಏನು ಬೇಕಾದರೂ ಆಗಬಹುದು, ಬರಬಹುದು’ ಎಂದರು.

‘ನನಗೆ ಅಶ್ವಥ್ ನಾರಾಯಣ್, ವಿಜಯೇಂದ್ರ ಅವರ ತಂಡದ ಮೇಲೆ ಬಹಳ ಬೇಜಾರಾಗಿದೆ. ಎರಡು ಮೂರು ದಿನ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ ಎಂದು ಹೇಳಿದ್ದೇನೆ. ಆದರೂ ಸದನಕ್ಕೆ ಬರುತ್ತಿದ್ದಂತೆ ದಿಕ್ಕಾರ ಎಂದು ಕೂಗಿ ನನ್ನ ಮನಸ್ಸಿಗೆ ಆಳವಾದ ಗಾಯ ಮಾಡಿದ್ದೀರಿ. ಈ ವಿಚಾರ ನನಗೆ ನಾಟಿದೆ’ ಎಂದು ಬೇಸರಿಸಿದರು. ‘ನಾನು ಇರೋದನ್ನು ಹೇಳುತಿರುವೆ. ನನಗೆ ಆದ ನೋವು ನನಗೆ ಮಾತ್ರ ಗೊತ್ತು. ನಾವು ಯಾರೂ ಶಾಶ್ವತವಲ್ಲ. ಬೇರೆ ಪಕ್ಷದಿಂದ ಬಂದವರನ್ನು ಮಂತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರೂ ಮಾಡಿಕೊಂಡಿದ್ದರು. ಕೇಂದ್ರ‌ ಸರ್ಕಾರದಲ್ಲಿ ಎಷ್ಟು ‌ಜನರನ್ನು ಮಂತ್ರಿ ಮಾಡಿಲ್ಲ? ಯಡಿಯೂರಪ್ಪ ‌ಅವರು ಬೇರೆ ಪಕ್ಷವನ್ನೇ ಕಟ್ಟಿದರು. ನಂತರ ಬಿಜೆಪಿಗೆ ಬಂದು ಮತ್ತೆ ಸಿಎಂ ಆದರು.‌ ಅವರು ಆಗ ಏನೇನು ಹೇಳಿದ್ದರು ಎಂದು ಎಲ್ಲಾ ದಾಖಲೆಯಾಗಿ ಉಳಿದಿದೆ. ಯಡಿಯೂರಪ್ಪ ಅವರನ್ನು ಮತ್ತೆ ಅನಿವಾರ್ಯವಾಗಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲಾಯಿತು’ ಎಂದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

August 18, 2026
Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ!

August 18, 2026
ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

ಮಂಕಾಳು ವೈದ್ಯರ ಮನವೊಲೈಸಿದ ಮುಖ್ಯಮಂತ್ರಿ

August 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!