ಅವರು ಇಂದು ಅಗಸ್ಟ 18ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಕಸ್ತೂರಿ ರಂಗನ್ ವರದಿಗೆ ಆಕ್ಷೇಪ ಪತ್ರವನ್ನು ಬಿಡುಗಡೆಗೊಳಿಸಿತ್ತಾ ಮೇಲಿನಂತೆ ಹೇಳಿದರು. ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ ಪರಿಸರ ಸೂಕ್ಷ ಪ್ರದೇಶವೆಂದು ಗುರುತಿಸಲಾದ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ವಿವಿಧ ಹತ್ತು ಜಿಲ್ಲೆಗಳಲ್ಲಿ ಒಟ್ಟು ೧೫೦೨ಹಳ್ಳಿಗಳನ್ನು ಸೇರ್ಪಡಿಸಲಾಗಿದ್ದು, ಅದರಂತೆ ಉತ್ತರ ಕನ್ನಡ ಜಿಲ್ಲೆಯ ೯ ತಾಲೂಕುಗಳಿಂದ ೫೬೭ ಹಳ್ಳಿಗಳು ಸೇರ್ಪಡೆಗೊಂಡಿರುವುದು ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ೫೬೭ ಹಳ್ಳಿಗಳ ಸರ‍್ಪಡೇ ಉತ್ತರಕನ್ನಡ ಜಿಲ್ಲೆಯಲ್ಲಿ ಆಗಿದೆ ಎಂದು ಅವರು ಹೇಳಿದರು.ಅತೀ ಸೂಕ್ಷö್ಮ ಪ್ರದೇಶವೆಂದು ಗುರುತಿಸಲಾದ ಯಾದಿಯಲ್ಲಿ ಶಿರಸಿ ತಾಲೂಕಿನ ೧೧೪ ಹಳ್ಳಿಗಳು ಸೇರಲ್ಪಟ್ಟಿದೆ. ಅದರಂತೆ ಸಿದ್ದಾಪುರ ೧೦೦, ಜೋಯಿಡಾ ೮೮, ಯಲ್ಲಾಪುರ ೮೪, ಹೊನ್ನಾವರ ೪೨, ಕುಮಟಾ ೪೧,
ಅಂಕೋಲ ೩೮, ಕಾರವಾರ ೩೫, ಭಟ್ಕಳ ೨೫ ಹಳ್ಳಿಗಳು ಪಟ್ಟಿಯಲ್ಲಿ ಸೇರಲ್ಟಟ್ಟಿದೆ.ಉಪಗ್ರಹ ಆಧಾರಿತ ಸರ್ವೆ ಆಗಿರುವುದರಿಂದ ಅಡಿಕೆ, ತೆಂಗಿನ ತೋಟ ಹಾಗೂ ಇನ್ನೀತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ವಿರೋಧದ ಕ್ರಮವಾಗಿದೆ. ನೈಸರ್ಗಿಕ ಕಾನೂನಿನ ಪ್ರಮಾಣ ಗುರುತಿಸದೇ ಅವೈಜ್ಞಾನಿಕವಾಗಿ, ಬೌಗೋಳಿಕ ಕ್ಷೇತ್ರ ವಿಂಗಡಣೆಯಲ್ಲಿ ತಾಂತ್ರೀಕ ವಿಧಾನ ಅನುಸರಿಸದೇ ಇರುವುದು. ಘೋಷಿಸಿದ ಹಳ್ಳಿ(ಗ್ರಾಮದ) ನಿರ್ದಿಷ್ಟ ಸರ್ವೇ ನಂಬರ್ ಪ್ರದೇಶ ವ್ಯಾಖ್ಯಾನಿಸದೇ ಇರುವುದು ಅವೈಜ್ಞಾನಿಕ. ಘೋಷಿಸಿದ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಮಾನವ ಮೂಲ ಸೌಕರ್ಯದ ಮೂಲಭೂತ ಹಕ್ಕುಗಳಾದ ನೀರು, ರಸ್ತೆ ಅಭಿವೃದ್ದಿ ಮುಂತಾದ ಹಲವಾರು ಪಾರಂಪರಿಕ ನಾಗರಿಕತೆಯ ಸೌಕರ್ಯ ಅವನತಿಗೆ ಕಾರ್ಯ ನಿರ್ಭಂದನದಿAದ ಮಾನವ ಹಕ್ಕುಗಳ ಮತ್ತು ಜೀವನ ಹಕ್ಕು ಉಲ್ಲಂಘನೆ ಆಗುವುದು ಎಂದು ಅವರು ಹೇಳಿದರು
ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಾಜು ನರೇಬೈಲ್, ವಿನೋಧ ಎಮ್ ಗೌಡ ತಂಡಾಗುAಡಿ, ರಮೇಶ್ ನಾಯ್ಕ ದೊಡ್ನಳ್ಳಿ, ಜೀತೇಂದ್ರ ಕೆ ನರೇಬೈಲ್, ಯಶೋಧ ಬಿ ನೌಟೂರು, ಉಮೇಶ ನಾಯ್ಕ ಶೇಲೂರು ಮುಂತಾದವರು ಉಪಸ್ಥಿತರಿದದರು.
ವರದಿ ಜಾರಿಗೆ ಆಕ್ಷೇಪಣೆಗೆ ಕಾರಣ:
ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿ. ಗ್ರಾಮದ ಶೇ. ೨೦ ಕ್ಕಿಂತ ಹೆಚ್ಚು ಬೌಗೋಳಿಕ ಪ್ರದೇಶವನ್ನು ಜೀವವೈವಿದ್ಯ ಪರಿಸರ ಸೂಕ್ಷö್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಘೋಷಿಸಿದ ಸೂಕ್ಷö್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸರ್ವೇ ಮಾಡಿ ವಿಷಯ ಸಂಗ್ರಹ ಮಾಡಿದ್ದು ಇರುವುದಿಲ್ಲ. ಸೂಕ್ಷö್ಮ ಪ್ರದೇಶ ಘೋಷಿಸಿರುವುದರಿಂದ ಗ್ರಾಮಸ್ಥರ ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದನ್ನ ಅವಲೋಕನ ತೆಗೆದುಕೊಂಡದ್ದು ಇರುವುದಿಲ್ಲ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.
ಹೋರಾಟದ ರೂಪ ರೇಷೆ ೨೦ ಕ್ಕೆ ನಿರ್ಧಾರ:
ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಗೆ ವಿರೋಧಿಸಿ ಹೋರಾಟದ ರೂಪು ರೇಷೆಯನ್ನ ನಿರ್ಧರಿಸಲು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಶಿರಸಿಯಲ್ಲಿ ಅಗಸ್ಟ ೨೦, ಗುರುವಾರ ಮುಂಜಾನೆ ೧೦ ಗಂಟೆಗೆ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.