ಮೊಬೈಲ್ ದುರಸ್ಥಿ, ಯಂತ್ರೋಪಕರಣಗಳ ನಿರ್ವಹಣೆ, ಕಂಪ್ಯುಟರ್ ರಿಪೇರಿ, CC TV ಸೇವೆ, ಎಲೆಕ್ಟ್ರಿಷಿಯನ್, ಪ್ಲಂಬರ್, ಕಾರ್ಪೆಂಟರ್, ಡ್ರೈವರ್, ಪೇಂಟರ್ ಹಾಗೂ ಗೃಹೋಪಯೋಗಿ ವಸ್ತುಗಳ ದುರಸ್ತಿ ಮಾಡುವವರನ್ನು ಸೇರಿ ಎಲ್ಲಾ ಬಗೆಯ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಒಂದು ಸಿದ್ಧವಾಗಿದೆ. ಕೌಶಲ್ಯವಿದ್ದರೂ ಸೂಕ್ತ ಕೆಲಸ ಸಿಗದೇ ಸಮಸ್ಯೆ ಅನುಭವಿಸುತ್ತಿರುವವರಿಗೆ Unitefix ಎಂಬ ಮೊಬೈಲ್ ಆಫ್ ಉದ್ಯೋಗ ನೀಡುತ್ತಿದೆ. ಅಗತ್ಯವಿರುವವರಿಗೆ ಕೆಲಸ ಕೊಡುವುದರೊಂದಿಗೆ ಅವಶ್ಯಕತೆಯಿದ್ದವರಿಗೆ ಕೆಲಸ ಮಾಡಿಕೊಡುವ ಕಾಯಕ ಮಾಡಲು ಈ ಆಫ್ ಸಜ್ಜಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜನಜೀವನ ಅಭಿವೃದ್ಧಿಗೆ ಪೂರಕವಾಗಿರುವ ಮೊಬೈಲ್ ಆಫ್ ಈಚೆಗೆ ಬಿಡುಗಡೆಯಾಗಿದೆ. ಮಹಾನಗರಗಳಲ್ಲಿರುವ ಸೇವಾ ಸೌಕರ್ಯವನ್ನು ಗ್ರಾಮೀಣ ಮಟ್ಟಕ್ಕೂ ಪರಿಚಯಿಸಬೇಕು ಎನ್ನುವುದರ ಜೊತೆ ಬೆರಳ ತುದಿಯಲ್ಲಿಯೇ ಸೇವೆ ಒದಗಿಸುವ ಉದ್ದೇಶದಿಂದ ಈ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಮೊಬೈಲ್ ಆಪ್ಲಿಕೇಶನಿನಲ್ಲಿ ಉಚಿತ ನೋಂದಣಿಗೆ ಅವಕಾಶ ನೀಡಲಾಗಿದ್ದು, ಎಲ್ಲಾ ಬಗೆಯ ಕಾರ್ಮಿಕರು ಹಾಗೂ ಕುಶಲಕರ್ಮಿಗಳು ತಾವು ನೀಡುವ ಸೇವೆಯ ಬಗ್ಗೆ ಅಪ್ಲಿಕೇಶನ್ ಮೂಲಕ ಉಚಿತವಾಗಿ ವಿವರ ದಾಖಲಿಸುವ ಅವಕಾಶ ಕಲ್ಪಿಸಗಿದೆ. ಸೇವೆ, ವೃತ್ತಿಪರ ನೈಪುಣ್ಯಗಳನ್ನು ಆಧರಿಸಿ ಈ ಮೊಬೈಲ್ ಅಪ್ಲಿಕೇಶನ್ ಅಗತ್ಯವಿದ್ದವರಿಗೆ ಕೆಲಸ ಹಾಗೂ ಅವಶ್ಯಕತೆಯಿದ್ದವರಿಗೆ ಸೇವೆ ನೀಡಲು ಆಸಕ್ತಿವಹಿಸಿದೆ.
ಕುಶಲಕರ್ಮಿ ಕಾರ್ಮಿಕರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯ ಅಡಿ ಜೋಡಿಸುವ ಉದ್ದೇಶದಂದ `Unitefix Services Pvt Ltd’ ಎಂಬ ಕಂಪನಿ ಹುಟ್ಟಿದೆ. ಈ ಕಂಪನಿಯೇ ಇದೀಗ Unitefix ಎಂಬ ಮೊಬೈಲ್ ಅಪ್ಲಿಕೇಶನ್’ನ್ನು ವಿನ್ಯಾಸಗೊಳಿಸಿದೆ. ಜಿಲ್ಲೆಯ ಜನರ ನಿರುದ್ಯೋಗ ನಿವಾರಣೆ ಜೊತೆ ಸಾರ್ವಜನಿಕರ ದೈನಿಂದಿನ ಕೆಲಸಗಳನ್ನು ಸುಲಭಗೊಳಿಸುವ ರೀತಿ ಈ ಅಪ್ಲಿಕೇಶನ್ ವಿನ್ಯಾಸ ನಡೆದಿದೆ. ಅತ್ಯಂತ ಪಾರದರ್ಶಕ ಹಾಗೂ ಡಿಜಿಟಲ್ ವೇದಿಕೆಯಾಗಿ ಈ ಮೊಬೈಲ್ ಅಪ್ಲಿಕೇಶನ್ ಕೆಲಸ ಮಾಡುತ್ತಿದೆ. ಸುರಕ್ಷತೆಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಈ ಆಪ್ ಮೂಲಕ ಕುಶಲಕರ್ಮಿ ಕಾರ್ಮಿಕರ ನೋಂದಣಿ ಶುರುವಾಗಿದೆ. ಪ್ಲೇ ಸ್ಟೋರ್ ಮೂಲಕ ಆಪ್ ಡೌನ್ಲೋಡ್ ಮಾಡಿಕೊಂಡು, ಹೆಸರು, ಊರು, ತಾವು ಮಾಡುವ ವೃತ್ತಿ, ಯಾವ ವಿಷಯದಲ್ಲಿ ಪರಿಣಿತರಾಗಿದ್ದೀರಿ? ಎಂಬುದನ್ನು ನಮೂದಿಸಿ ಅಗತ್ಯ ಮಾಹಿತಿ ನೀಡಿದರೆ ನೋಂದಣಿ ಕಾರ್ಯ ಮುಕ್ತಾಯವಾಗಲಿದೆ. ಅದಾದ ನಂತರ ಜನರ ಬೇಡಿಕೆಗೆ ಅನುಗುಣವಾಗಿ ಕುಶಲಕರ್ಮಿ ಕಾರ್ಮಿಕರಿಗೆ ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಉದ್ಯೋಗ ಹಂಚಿಕೆ ಆಗಲಿದೆ. ಮಾಡಿದ ಕೆಲಸಕ್ಕೆ ತಕ್ಕ ವೇತನವೂ ಸಿಗಲಿದೆ.
ಪ್ರಸ್ತುತ ಕಾರ್ಮಿಕರ ನೋಂದಣಿಗೆ ಮಾತ್ರ ಈ ಮೊಬೈಲ್ ಅಪ್ಲಿಕೇಶನ್ ಒತ್ತು ನೀಡುತ್ತಿದ್ದು, ಹೊನ್ನಾವರ ಹಾಗೂ ಯಲ್ಲಾಪುರದಲ್ಲಿ ಅಪ್ಲಿಕೇಶನ್’ನ ಪ್ರಾಯೋಗಿಕ ಕೆಲಸ ನಡೆಯುತ್ತಿದೆ. ಸಾರ್ವಜನಿಕರು ಸಹ ತಮಗೆ ಅಗತ್ಯವಿರುವ ಸೇವೆಗಳ ಬಗ್ಗೆ ಹಿತವಾದ ಅನುಭವಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಮೊಬೈಲ್ ಅಪ್ಲಿಕೇಶನ್’ನಲ್ಲಿ ವಿಭಾಗಗಳಿವೆ. ಈ ಸ್ವದೇಶಿ ಮೊಬೈಲ್ ಅಪ್ಲಿಕೇಶನ್ ಮೂಲಕ ಭವಿಷ್ಯದಲ್ಲಿ ವಿವಿಧ ಸರಕು-ಸಾಮಗ್ರಿಗಳ ಮಾರಾಟ-ಖರೀದಿಯೂ ನಡೆಯಲಿದ್ದು, ಮನೆಯಲ್ಲಿಯೇ ಕುಳಿತು ಅಗತ್ಯ ಸೇವೆಪಡೆಯುವವರಿಗೆ ಹಾಗೂ ಅಲ್ಲಿಂದಲೇ ವಿವಿಧ ಉತ್ಪನ್ನ ಮಾರಾಟಗಾರರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಇಲ್ಲಿ ಕ್ಲಿಕ್ ಮಾಡಿ- ಮೊಬೈಲ್ ಅಪ್ಲಿಕೇಶನ್ ಡೌನ್ಲೋಡಿ ಮಾಡಿ👇 Unitefix – https://play.google.com/store/apps/details?id=com.unitefix.app