ಸ್ನೇಹಿತರ ಜೊತೆ ಈಜಲು ಹೋಗಿದ್ದ ಪ್ರಶಾಂತ ಮುಕ್ರಿ ಅವರು ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಕೆರೆಯಿಂದ ಮೇಲೆ ಬರಲಾಗದೇ ಸಮಸ್ಯೆ ಅನುಭವಿಸಿದ ಅವರು ಅಲ್ಲಿಯೇ ಶವವಾಗಿದ್ದಾರೆ.
ಕುಮಟಾ ಹೆಗಡೆಕೇರಿಯ ಗುನಗಕೇರಿಯಲ್ಲಿ ಪ್ರಶಾಂತ ಕೇಶವ ಮುಕ್ರಿ ಅವರು ವಾಸವಾಗಿದ್ದರು. 18 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಭಾನುವಾರ ಸ್ನೇಹಿತರ ಜೊತೆ ಈಜಲು ಹೋಗಿದ್ದರು. ವಾಲಗಳ್ಳಿ ಸಮೀಪದ ಜಡ್ಡಿಕೆರೆಯಲ್ಲಿ ಈಜುತ್ತಿದ್ದ ಅವರು ನೀರಿನ ಆಳಕ್ಕೆ ತಲುಪಿದರು. ಅಲ್ಲಿಂದ ಮೇಲೆ ಬರಲಾಗದೇ ಕೊನೆಯುಸಿರೆಳೆದರು.
ಜೊತೆಗಿದ್ದ ಸ್ನೇಹಿತರು ಪ್ರಶಾಂತ ಮುಕ್ರಿ ಅವರನ್ನು ಬದುಕಿಸುವ ಪ್ರಯತ್ನ ಮಾಡಿದರು. ಆದರೆ, ನೀರಿನಿಂದ ಅವರನ್ನು ಜೀವಂತವಾಗಿ ಹೊರ ತೆಗೆಯಲು ಸ್ನೇಹಿತರ ಬಳಿಯೂ ಸಾಧ್ಯವಾಗಲಿಲ್ಲ. ನೀರಿನ ಆಳ ಹಾಗೂ ಸೆಳೆತದ ಅರಿವಿಲ್ಲದೇ ಮುನ್ನುಗ್ಗಿದ ಪರಿಣಾಮ ಪ್ರಶಾಂತ ಮುಕ್ರಿ ಅವರು ಜೀವ ಕಳೆದುಕೊಂಡರು. ಪ್ರಶಾಂತ ಮುಕ್ರಿ ಅವರು ನೀರಿನಲ್ಲಿ ನಾಪತ್ತೆಯಾದ ತಕ್ಷಣ ಶೋಧ ಕಾರ್ಯ ನಡೆಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರು. ಶೋಧ ಕಾರ್ಯದ ಕುರಿತಾಗಿ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಈ ವೇಳೆ ಅಲ್ಲಿದ್ದ ಪಿಸೈ ಖಾದರ್ ಭಾಷಾ ಅವರು ತಾವೇ ಕೆರೆಗೆ ಹಾರಿ ಶವ ಶೋಧ ಶುರು ಮಾಡಿದರು. ಅದಾದ ನಂತರ ಕಾರ್ಯಾಚರಣೆ ಇನ್ನಷ್ಟು ವೇಗಪಡೆದಿದ್ದು, ತಾಸುಗಳ ನಂತರ ಪ್ರಶಾಂತ ಮುಕ್ರಿ ಅವರ ಶವ ಸಿಕ್ಕಿತು.
`ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ’