ಶಿರಸಿ-ಯಲ್ಲಾಪುರ ರಸ್ತೆ ಹದಗೆಟ್ಟಿರುವುದನ್ನು ಖಂಡಿಸಿ ಬಿಜೆಪಿಗರು ಹೋರಾಟ ನಡೆಸಿದ್ದಾರೆ. ಕಂಪ್ಲಿ ಹಾಗೂ ಹಾಸಣಗಿಯ ಬಿಜೆಪಿ ಶಕ್ತಿಕೇಂದ್ರದ ಸದಸ್ಯರು ಮಂಚಿಕೇರಿ ಬಸ್ ನಿಲ್ದಾಣದ ಎದುರು ಬಾಳೆಗಿಡ ನೆಟ್ಟು ಆಕ್ರೋಶವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಪ್ರತಿಭಟನೆ ವೇಳೆ ಮಾತನಾಡಿದ್ದು, `ಹೊಂಡ ಮುಚ್ಚದೇ ಇದ್ದರೆ ಪ್ರತಿ ಹೊಂಡಕ್ಕೂ ಒಂದೊAದು ಸಚಿವರ ಹೆಸರಿಟ್ಟು ಮತ್ತೆ ಪ್ರತಿಭಟಿಸಲಾಗುತ್ತದೆ’ ಎಂದು ಎಚ್ಚರಿಸಿದರು. ಹೊಂಡಗಳನ್ನು ಮುಚ್ಚಿ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡುವವರೆಗೂ ಹೋರಾಟ ನಡೆಸುವುದಾಗಿ ಘೋಷಿಸಿದರು. `ಶಿರಸಿ -ಯಲ್ಲಾಪುರ ಮುಖ್ಯ ರಸ್ತೆಯ ಸಂಪೂರ್ಣ ದುರಸ್ತಿ ಮಾಡಲು ಯಾವ ಕ್ರಮಗೊಳುತ್ತಿರಿ?’ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಗಮಿಸಿ, `ಒಂದು ವಾರದ ಒಳಗೆ ಹೊಂಡ ಮುಚ್ಚಲಾಗುತ್ತದೆ. ಮಳೆ ಮುಗಿದ ನಂತರ ಈಗಾಗಲೇ ಮಂಜೂರಾದ ರಸ್ತೆಯ ಕೋಟಿಂಗ್ ಕೆಲಸ ಶುರು ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಪ್ರಮುಖರಾದ ವಿನೇಶ್ ಭಟ್ ಅವರು ಮಾತನಾಡಿ, `ರಸ್ತೆ ಸಮಸ್ಯೆ ಸರಿಯಾಗುವ ಬಗ್ಗೆ ಸಾಕಷ್ಟು ಕಾದು ನಂತರ ಪ್ರತಿಭಟನೆ ನಡೆಸತ್ತಿದ್ದೇವೆ. ಭರವಸೆ ಈಡೇರದಿದ್ದರೆ ಉಗ್ರ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು. ಹರಿಪ್ರಕಾಶ ಕೋಣೆಮನೆ ಅವರು ಮಾತನಾಡಿ `ಮೂರು ವರ್ಷದಲ್ಲಿ ಯಲ್ಲಾಪುರಕ್ಕೆ ಎಷ್ಟು ಅನುದಾನ ಬಂದಿದೆ?’ ಎಂದು ಪ್ರಶ್ನಿಸಿದರು. ಪ್ರಮುಖರಾದ ನಟರಾಜ್ ಗೌಡರ್, ದಿವಾಕರ ಪೂಜಾರಿ ಗಣಪತಿ ಹೆಗಡೆ ಇತರರು ಪ್ರತಿಭಟನೆಯಲ್ಲಿದ್ದರು.