ಕುಮಟಾದ ಒಟ್ಟು 41 ಹಳ್ಳಿಗಳು ಅತೀ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿದೆ. ಕಸ್ತೂರಿ ರಂಗನ್ ವರದಿಯ 7ನೇ ತಿದ್ದುಪಡಿಯಲ್ಲಿನ ಅಂಕಿ-ಅoಶಗಳ ಬಗ್ಗೆ ಈ ದಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಮಾಹಿತಿ ಪ್ರಕಟಿಸಿದೆ.
ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ, ತೊರ್ಕೆ, ವಾಲಗಳ್ಳಿ, ಮುರೂರು, ಮಿರ್ಜಾನ್, ಸಂತೆಗುಳಿ, ಹಿರೇಗುತ್ತಿ, ಕೋಡ್ಕಣಿ, ದಿವಗಿ, ಕಾಗಲ್, ದೇವಗಿರಿ, ಸಿದ್ದನಬಾವಿ, ಅಳಕೋಡ, ಕೂಜಳ್ಳಿ, ಬರ್ಗಿ, ಕಲಭಾಗ, ಹೊಲನಗದ್ದೆ, ಹೆಗಡೆ, ಹನೇಹಳ್ಳಿ, ಹೊನ್ಮಾಂವ್, ಕತಗಾಲ, ಬಗ್ಗೋಣ, ಬಳ್ಕೂರು, ಕುಮಟಾ, ಕಲ್ಲಬ್ಬೆ ಸೇರಿ 26 ಗ್ರಾಮ ಪಂಚಾಯತದ ಹೆಸರುಗಳು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲಿನ 41 ಹಳ್ಳಿಗಳ ಜನರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅರಿವು ಮೂಡಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಮಂಗಳವಾರ ಕುಮಟಾಗೆ ಹೋಗಿ ಸಭೆ ನಡೆಸಿದ್ದು, ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ. ಮುಂದಿನ ಹೋರಾಟದ ರೂಪು ರೇಷ ನಿರ್ಧರಿಸಲು ಅವರು ವಿಶೇಷ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ರಾಜೀವ್ ಎಮ್ ಗೌಡ ಅಳಕೋಡ, ಲಲಿತಾ ಮರಾಠಿ ಮಿರ್ಜಾನ್, ಜ್ಯೋತಿ ಗಾವಡಿ ದಿವಗಿ, ಪಾಂಡುರoಗ ನಾಯ್ಕ ದಿವಗಿ, ಸೀತಾರಮ ನಾಯ್ಕ ಬೊರ್ಗಿಬೈಲ, ಮಹೇಂದ್ರ ನಾಯ್ಕ ಅಳಕೋಡ, ರವೀಂದ್ರ ನಾಯ್ಕ ಹೆಬೈಲ್, ಕೆ ಜಿ ಕೊರಿಜಾ ಕೋನ್ ಸೊಪ್ಪಿನಹೊಸಳ್ಳಿ, ಗಣಪತಿ ಮರಾಠಿ ಸೊಪ್ಪಿನಹೊಸಳಿ, ಚಿದಾನಂದ ಮರಾಠಿ ಸೊಪ್ಪಿನಹೊಸಳಿ, ಹಗದೀಶ್ ಹರಿಕಾಂತ್ರ ಹಿರೇಗುತ್ತಿ, ಸುನೀಲ್ ಹರಿಕಂತ್ರ, ಗಣಪತಿ ಮಾಸ್ತಿ ಅಡಿಗುಂಡಿ, ವೆಂಕಟರಮಣ ಪಟಾಗರ, ಗಜಾನನ ಪಟಗಾರ ಹೆಗಡೆ ಇತರರು ಇದ್ದು ಎಲ್ಲರೂ ಆತಂಕವ್ಯಕ್ತಪಡಿಸಿದ್ದಾರೆ.
`ಕಸ್ತೂರಿ ರಂಗನ್ ವರದಿ ಜನ ವಿರೋಧಿ ಯೋಜನೆಯಾಗಿರುವುರಿಂದ ಸಾಂಘಿಕ ಹೋರಾಟ ಮಾಡಲು ನಿರ್ಧರಿಸಲಾಗಿದೆ’ ಎಂದು ಈ ವೇಳೆ ಮಂಜುನಾಥ ಮರಾಠಿ ನಾಗೂರು ಹೇಳಿದ್ದಾರೆ. ಸೆಪ್ಟೆಂಬರ್ 7ರಂದು ಕರಾವಳಿ ಭಾಗದ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿ ಮತ್ತು ಆಕ್ಷೇಪ ಪತ್ರ ಸಲ್ಲಿಸುವ ಕಾರ್ಯಕ್ರಮ ನಡೆಸುವುದಾಗಿ ಅವರು ಘೋಷಿಸಿದ್ದಾರೆ.