ಉತ್ತರಕನ್ನಡ ಜಿಲ್ಲೆಯಲ್ಲಿ 567 ಹಳ್ಳಿಗಳನ್ನ ಅತೀ ಸೂಕ್ಷ ಪ್ರದೇಶವೆಂದು ಗುರುತಿಸಿದ ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಗೆ 1 ಲಕ್ಷ ಜನ ಆಕ್ಷೇಪವ್ಯಕ್ತಪಡಿಸಲು ಸಿದ್ಧರಾಗಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಈ ವಿಷಯದಲ್ಲಿ ಒಟ್ಟಾಗಿ ಪತ್ರ ಬರೆಯುವ ಅಭಿಯಾನ ನಡೆಸಿದ್ದಾರೆ.
`ಸೂಕ್ಷ ಪ್ರದೇಶ ಗುರುತಿಸುವಿಕೆಯಿಂದ ಕೃಷಿಕರಿಗೆ ಮತ್ತು ಜನ ಜೀವನದ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ. ವಸತಿ ಪ್ರದೇಶವನ್ನು ಸೂಕ್ಷö ಪ್ರದೇಶವೆಂದು ಗುರುತಿಸಿರುವುದರಿಂದ ವರದಿಯನ್ನು ವಿರೋಧಿಸುವುದು ಅನಿವಾರ್ಯ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ 10 ಪ್ರಮುಖ ಅಂಶಗಳು ಆಕ್ಷೇಪ ಪತ್ರದಲ್ಲಿ ಅಡಕವಾಗಿದೆ. ಅದರಂತೆ, ಈ ಹಂತದಲ್ಲಿ ಕೇಂದ್ರ ಪರಿಸರ ಇಲಾಖೆಗೆ ವರದಿ ವಿರೋಧಕ್ಕೆ ಸಂಬAಧಿಸಿದ ರಾಜ್ಯ ಸರ್ಕಾರವು ಸಕ್ರಿಯವಾಗಿ 43 ಅಂಶಗಳ ಹಕ್ಕೊತ್ತಾಯಿಸಲು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಕೈಪಿಡಿ ಹೋರಾಟಗಾರರ ವೇದಿಕೆಯು ರೂಪಿಸಿದೆ’ ಎಂದು ಅವರು ತಿಳಿಸಿದ್ದಾರೆ.
`ಆಕ್ಷೇಪ ಪತ್ರದಲ್ಲಿ ಪ್ರಸ್ತಾಪಿಸಿದ ಕಸ್ತೂರಿ ರಂಗನ್ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೆಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಗ್ರಾಮದ ಶೇ 20ಕ್ಕಿಂತ ಹೆಚ್ಚು ಬೌಗೋಳಿಕ ಪ್ರದೇಶವನ್ನು ಜೀವ ವೈವಿದ್ಯ ಪರಿಸರ ಸೂಕ್ಷö ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಘೊಷಿಸಿದ ಸೂಕ್ಷö ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಬೌಥಿಕ ಸರ್ವೆಮಾಡಿ ವಿಷಯ ಸಂಗ್ರಹ ಮಾಡಿದ್ದು ಇರುವುದಿಲ’ ಎಂದು ತಿಳಿಸಲಾಗಿದೆ. `ಘೋಷಿಸಿದ ಹಳ್ಳಿ ನಿರ್ದಿಷ್ಟ ಸರ್ವೆ ನಂ ಪ್ರದೇಶ ವ್ಯಾಖ್ಯಾಯಿಸದೇ ಇರುವುದು ಅವೈಜ್ಞಾನಿಕ ಉಪಗ್ರಹ ಆಧಾರಿತ ಸರ್ವೆ ಆಗಿರುವುದರಿಂದ ಕೃಷಿ, ತೆಂಗಿನ ತೋಟ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸಗಿಕ ವಿರೋಧವಾದ ಕ್ರಮ’ ಎಂದು ವಿವರಿಸಲಾಗಿದೆ.
ಈ ವಿಷಯವಾಗಿ ಜನ ಜಾಗೃತಿ ಮೂಡಿಸಲು ಸೆಪ್ಟೆಂಬರ್ 5ರಂದು ಶಿರಸಿಯಲ್ಲಿ ಸಭೆ ನಡೆಯಲಿದೆ. ಸೆ 7 ಹೊನ್ನಾವರ, ಸೆ 9ಕ್ಕೆ ಅಂಕೋಲದಲ್ಲಿಯೂ ಸಭೆ ಆಯೋಜಿಸಲಾಗಿದೆ.