ರಾಮನಗುಳಿಯ ಚಂದ್ರಶೇಖರ ನಾಯ್ಕ, ಕೊಡ್ಲಗದ್ದೆಯ ಸುಧಾಕರ ನಾಯ್ಕ ಸೇರಿ ಅನೇಕರು ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಾಗುವ ಟ್ಯಾಂಕರ್’ಗಳನ್ನು ಅಡ್ಡ ಹಾಕಿ ಅದರಲ್ಲಿದ್ದ ಪೆಟ್ರೋಲ್-ಡೀಸೆಲ್ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅನಾಧಿಕಾಲದಿಂದಲೂ ಅವರು ಯಾರ ಅಡ್ಡಿ-ಆತಂಕವೂ ಇಲ್ಲದೇ ಈ ದಂಧೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಮಾರ್ಗವಾಗಿ ಅನೇಕ ಕಡೆ ಪೆಟ್ರೋಲ್-ಡೀಸೆಲ್ ಮಾರಾಟ ನಡೆಯುತ್ತದೆ. ಅದರಲ್ಲಿಯೂ ಮುಖ್ಯವಾಗಿ ಕೊಡ್ಲಗದ್ದೆ ಕ್ರಾಸ್, ರಾಮನಗುಳಿ, ವಜ್ರಳ್ಳಿಯ ವಿವಿಧ ಭಾಗಗಳಲ್ಲಿ ಇಂಧನ ಮಾರಾಟ ಜೋರಾಗಿದೆ. ಹೆದ್ದಾರಿ ಮಾರ್ಗವಾಗಿ ಚಲಿಸುವ ಟ್ಯಾಂಕರುಗಳನ್ನು ಅಡ್ಡ ಹಾಕುವ ದಂಧೆಕೋರರು ಚಾಲಕರಿಗೆ ಆಮೀಷ ಒಡ್ಡಿ ಪೆಟ್ರೋಲ್ ಹಾಗೂ ಡೀಸೆಲ್ ಕದಿಯುತ್ತಾರೆ. ಕದ್ದ ಪೆಟ್ರೋಲ್-ಡೀಸೆಲ್’ಗೆ ಸರಿಸಮನಾಗಿ ಎಥನಾಲ್ ಹಾಗೂ ಬಯೋ ಡೀಸೆಲ್ ಮಿಕ್ಸ್ ಮಾಡಿ ಕಳುಹಿಸುತ್ತಾರೆ. ಸಾವಿರಾರು ಲೀಟರ್ ಇಂಧನ ಹೊತ್ತ ಟ್ಯಾಂಕರುಗಳಿAದ 50-100 ಲೀಟರ್ ಪೆಟ್ರೋಲ್-ಡೀಸೆಲ್ ತೆಗೆದು ಅದಕ್ಕೆ ಬಯೋ ಡೀಸೆಲ್ ಹಾಕಿದ ವಿಷಯ ಇಂಧನ ಸರಬರಾಜುದಾರರಿಗೂ ಗೊತ್ತಾಗುತ್ತಿಲ್ಲ. ಹೀಗಾಗಿ ಸೂಚಿಸಿದ ಪ್ರಮಾಣಕ್ಕಿಂತಲೂ ಹೆಚ್ಚಿನ ಎಥನಾಲ್ ಅಂಶಹೊAದಿದ ಪೆಟ್ರೋಲ್ ಹಾಗೂ ಡೀಸೆಲ್ ಬಂಕುಗಳಿಗೆ ಬರುತ್ತಿದ್ದು, ಈ ಬಗ್ಗೆ ಅರಿವಿಲ್ಲದ ಜನ ತಮ್ಮ ಕಾರು-ಬೈಕುಗಳಿಗೆ ಅದನ್ನೇ ಹಾಕಿಸುತ್ತಿದ್ದಾರೆ. ಆ ಇಂಧನ ಬಳಕೆ ಮಾಡಿದ ವಾಹನಗಳು ಬಹುಬೇಗ ಹಾಳಾಗುತ್ತಿವೆ.
ಈ ದಂಧೆಕೋರರು ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ಬೆಲೆ ಪೆಟ್ರೋಲ್-ಡೀಸೆಲ್ ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅನೇಕರು ಖಾಯಂ ಗ್ರಾಹಕರಿದ್ದು, ವಿವಿಧ ಕಿರಾಣಿ ಅಂಗಡಿಯವರು ಇಲ್ಲಿಂದಲೇ ಪೆಟ್ರೋಲ್-ಡೀಸಲ್ ಖರೀದಿಸಿ ಅದನ್ನು ತಮ್ಮ ಮಳಿಗೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರಾಮನಗುಳಿ ದುಗ್ಗನಬೈಲ್ ಬಳಿಯ ಚಂದ್ರಶೇಖರ ಪಾಂಡುರoಗ ನಾಯ್ಕ ಅವರು ಟ್ರಾನ್ಸಪೋರ್ಟ ಬ್ಯುಸಿನೆಸ್ ಮಾಡಿಕೊಂಡಿದ್ದು, ಅದರೊಂದಿಗೆ ಈ ಪೆಟ್ರೋಲ್-ಡೀಸೆಲ್ ಕದಿಯುವ ಕೆಲಸದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆದ್ದಾರಿ ಮೇಲೆ ಸಂಚರಿಸುವ ಟ್ಯಾಂಕರ್ ನಿಲ್ಲಿಸಿ, ಅದರಿಂದ ಡೀಸೆಲ್ ಕದಿಯುವವ ಚಂದ್ರಶೇಖರ ನಾಯ್ಕ ಅವರು ಡೀಸೆಲ್ ಹೊತ್ತಿ ಉರಿಯುವ ಬಗ್ಗೆ ಅರಿವಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಅದನ್ನು ಸಂಗ್ರಹಿಸಿಕೊಳ್ಳುತ್ತಾರೆ.
2025ರ ಏಪ್ರಿಲ್ 19ರಂದು ಕೊಡ್ಲಗದ್ದೆ ಕ್ರಾಸಿನ ಬಳಿ ಪೆಟ್ರೋಲ್ ಮಾರುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದರು. ಆಗ, ಅಲ್ಲಿನ ಸುಧಾಕರ ನಾಯ್ಕ ಅವರು ಅಪಾರ ಪ್ರಮಾಣದಲ್ಲಿ ಇಂಧನ ದಾಸ್ತಾನು ಮಾಡಿರುವುದು ಪತ್ತೆಯಾಗಿತ್ತು. ಅತ್ಯಂತ ಅಪಾಯಕಾರಿ ರೀತಿಯಲ್ಲಿ ಕಾಡಿನ ಗಿಡ-ಮರಗಳ ಕೆಳಗೆ ದಾಸ್ತಾನು ಮಾಡಿದ್ದ ಪೆಟ್ರೋಲಿಯಂ ಉತ್ಪನ್ನಗಳನ್ನು ಜಪ್ತು ಮಾಡಿದ್ದರು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ, ಅದರಿಂದ ದಂಧೆಗೆ ಮಾತ್ರ ಕಡಿವಾಣ ಬಿದ್ದಿರಲಿಲ್ಲ. ಸದ್ಯ ರಾಮನಗುಳಿಯ ಚಂದ್ರಶೇಖರ ನಾಯ್ಕ ಅವರು ಅಪಾಯಕಾರಿ ರೀತಿ ಡೀಸೆಲ್ ಸಂಗ್ರಹ ಮಾಡಿದ್ದು, ಅವರ ಮೇಲೆ ಅಂಕೋಲಾ ಪೊಲೀಸರು ದಾಳಿ ಮಾಡಿದ್ದಾರೆ. ಸಿಕ್ಕಿದ ಡೀಸೆಲ್ ವಶಕ್ಕೆಪಡೆದು ಕೇಸು ದಾಖಲಿಸಿದ್ದಾರೆ.