ಅಂಕೋಲಾ ಹಳವಳ್ಳಿಯ ಸುರೇಶ ನಾಯ್ಕ ಅವರ ತೋಟದ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಕಲಾಲ್ ಅವರು ಸರಾಯಿಯಲ್ಲಿ ಕಳೆನಾಶಕ ಮಿಶ್ರಣ ಮಾಡಿ ಸೇವಿಸಿದ್ದಾರೆ. ಕಾರವಾರದ ಕಿಮ್ಸ್’ಗೆ ದಾಖಲಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ.
ಅಂಕೋಲಾದ ಹಳವಳ್ಳಿಯಲ್ಲಿ ಶಯನ ಸುರೇಶ ನಾಯ್ಕ ಅವರು ವಾಸವಾಗಿದ್ದಾರೆ. ತಮ್ಮ ತೋಟದ ಕೆಲಸಕ್ಕಾಗಿ ಅವರು ಕಾರ್ಮಿಕರನ್ನು ಹುಡುಕುತ್ತಿದ್ದು, ಗದಗದ ಮಂಜುನಾಥ ದುರ್ಗಪ್ಪ ಕಲಾಲ್ ಅವರು ಪರಿಚಿತರಾಗಿದ್ದಾರೆ. ಮಂಜುನಾಥ ಕಲಾಲ್ ಅವರು ಶಯನ ನಾಯ್ಕ ಅವರ ಮನೆಯಲ್ಲಿಯೇ ಉಳಿದು ತೋಟದ ಕೆಲಸ ಮಾಡಿಕೊಂಡಿದ್ದು, ಕೌಟುಂಬಿಕ ಕಲಹದಿಂದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಪತ್ನಿ ಜೊತೆ ಜಗಳ ಮಾಡಿದ ಮಂಜುನಾಥ ಕಲಾಲ್ ಅವರು ಸೆಪ್ಟೆಂಬರ್ 16ರಂದು ಸರಾಯಿ ಜೊತೆ ಕೊಳೆನಾಶಕ ಸೇವಿಸಿದ್ದಾರೆ.
ಅಸ್ವಸ್ಥಗೊಂಡ ಮಂಜುನಾಥ ಕಲಾಲ್ ಅವರನ್ನು ನೋಡಿದ ಜನ ಅವರನ್ನು ಕಾರವಾರಕ್ಕೆ ಕರೆದೊಯ್ದಿದ್ದಾರೆ. ಕಿಮ್ಸ್’ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಂಜುನಾಥ ಕಲಾಲ್ ಅವರು ಆರೋಗ್ಯದಲ್ಲಿ ಚೇತರಿಕೆ ಕಾಣದೇ ಸಾವನಪ್ಪಿದ್ದಾರೆ. ಸೆಪ್ಟೆಂಬರ್ 19ರಂದು ಅವರು ಸಾವನಪ್ಪಿದ ಬಗ್ಗೆ ಶಯನ್ ನಾಯ್ಕ ಅವರು ಮಾಹಿತಿ ನೀಡಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.