ಯಲ್ಲಾಪುರದ ಕಿರವತ್ತಿಯಲ್ಲಿ ತಯಾರಿಸಲಾಗುವ ಹ್ಯಾಂಗ್ಯೋ ಐಸ್ ಕ್ರೀಂ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಮನ ಗೆದ್ದಿದೆ. ಹ್ಯಾಂಗ್ಯೋ ಕಂಪನಿ ಈಚೆಗೆ ಬಿಡುಗಡೆ ಮಾಡಿದ `ಬೆಳಗಾವಿ ಕುಂದಾ’ ಐಸ್ ಕ್ರೀಂ’ನ್ನು ಡಿಕೆ ಶಿವಕುಮಾರ ಅವರು ಸೇವಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಡಿಕೆ ಶಿವಕುಮಾರ ಅವರಿಗೆ ಹ್ಯಾಂಗ್ಯೋ ಕಂಪನಿಯ ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಕೇಶ ಕಾಮತ್ ಅವರು ಐಸ್ ಕ್ರೀಂ ವಿತರಿಸಿದ್ದಾರೆ. ಹೊಸ ಬಗೆಯ ಐಸ್ ಕ್ರೀಂ ನೋಡಿದ ಡಿಕೆ ಶಿವಕುಮಾರ ಅವರು ಅದರ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಸಿದ್ಧ ಬೆಳಗಾವಿ ಕುಂದಾ ಬಳಸಿ ಅದೇ ಪ್ಲೇವರಿನಿಂದ ಹ್ಯಾಂಗ್ಯೋ ಕಂಪನಿ ಐಸ್ ಕ್ರೀಂ ತಯಾರಿಸಿರುವುದಾಗಿ ಕಂಪನಿಯವರು ಮಾಹಿತಿ ನೀಡಿದ್ದಾರೆ.
ಈ ಐಸ್ ಕ್ರೀಂ ಸ್ವಾದ ಅನುಭವಿಸಿದ ಡಿಕೆ ಶಿವಕುಮಾರ ಅವರು ಈ ಐಸ್ ಕ್ರೀಂ ಮೂಲಕ ಬೆಳಗಾವಿ ಕುಂದಾ ಸೇವಿಸಿದ ಅನುಭವಹಂಚಿಕೊAಡಿದ್ದಾರೆ. ಈಚೆಗೆ ಹೊಸದಾಗಿ ಈ ಐಸ್ ಕ್ರೀಂ ಮಾರುಕಟ್ಟೆಗೆ ಬಂದಿದೆ. ಯಲ್ಲಾಪುರದ ಕಿರವತ್ತಿಯ ಜೊತೆ ಇನ್ನಿತರ ಹ್ಯಾಂಗ್ಯೋ ಘಟಕದಲ್ಲಿಯೂ ಈ ಐಸ್ ಕ್ರೀಂ ಉತ್ಪಾದನೆ ನಡೆಯುತ್ತಿದೆ. ದೇಶದ ಎಲ್ಲಡೆ ಈ ಐಸ್ ಕ್ರೀಂ ಸರಬರಾಜು ನಡೆದಿದೆ.