ಸಕ್ಕರೆ ಸಾಗಿಸುತ್ತಿದ್ದ ಲಾರಿಯೊಂದು ಮಾದನಗೇರಿ ಸಮೀಪದ ಹಿಲ್ಲೂರು ಕ್ರಾಸಿನ ಬಳಿ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಹಿರೇಗುತ್ತಿಯ ಗೋಪಾಲ ಹಳ್ಳೇರ ಅವರ ರಿಕ್ಷಾ ಪುಡಿಪುಡಿಯಾಗಿದೆ.
ಶನಿವಾರ ಬೆಳಗ್ಗೆ ಗೋಪಾಲ ಹಳ್ಳೇರ್ ಅವರು ಎಂದಿನoತೆ ಮನೆಯಿಂದ ಹೊರೆಟಿದ್ದರು. ತಮ್ಮ ರಿಕ್ಷಾವನ್ನು ನಿಲ್ದಾಣದಲ್ಲಿ ನಿಲ್ಲಿಸಿ ಅವರು ದೇವಾಲಯಕ್ಕೆ ಹೋಗಿದ್ದರು. ಸಮೀಪದ ಆಂಜನೇಯ ದೇಗುಲಕ್ಕೆ ಹೋಗಿದ್ದರು. ಅವರು ದೇವರಿಗೆ ಕೈ ಮುಗಿದು ಮರಳುವಷ್ಟರಲ್ಲಿ ಅವರ ರಿಕ್ಷಾ ಪುಡಿಪುಡಿಯಾಗಿತ್ತು. ಸಕ್ಕರೆ ತುಂಬಿದ್ದ ಲಾರಿಯೊಂದುಧಾವಿಸಿ ಬಂದಿದ್ದು, ರಿಕ್ಷಾಗೆ ಡಿಕ್ಕಿ ಹೊಡೆದಿದ್ದರಿಂದ ಲಾರಿ ಕ್ಲಿನರ್’ನ ಕಾಲು ಮುರಿಯಿತು.
.
ಗೋಪಾಲ ಹಳ್ಳೇರ್ ಅವರು ಪ್ರತಿ ಶನಿವಾರ ಆಂಜಿನೇಯ ದೇಗುಲಕ್ಕೆ ಭೇಟಿ ನೀಡುತ್ತಾರೆ. ಹತ್ತಿರದ ಗುಡಿಗೆ ಹೋಗಿ ಅವರು ದೀಪ ಹಚ್ಚುವುದನ್ನು ರೂಢಿಸಿಕೊಂಡಿದ್ದಾರೆ. ಯಾವಾಗಲೂ ರಿಕ್ಷಾದಲ್ಲಿಯೇ ಕುಳಿತು ಪ್ರಯಾಣಿಕರಿಗೆ ಕಾಯುತ್ತಿದ್ದರು. ಆ ಅವಧಿಯಲ್ಲಿ ಈ ಅಪಘಾತ ನಡೆದಿದ್ದರೆ ಗೋಪಾಲ ಹಳ್ಳೇರ್ ಅವರು ಅಪಾಯಕ್ಕೆ ಸಿಲುಕುತ್ತಿದ್ದರು. ಈ ದಿನ ದೇವರಿಗೆ ದೀಪ ಹಚ್ಚಲು ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾದರು
ಅಂಕೋಲಾದಿoದ ಕುಮಟಾ ಕಡೆ ತೆರಳುತ್ತಿದ್ದ ಲಾರಿ ಇಳಿಜಾರಿನ ಈ ಮಾರ್ಗದಲ್ಲಿ ವೇಗವಾಗಿ ಬಂದಿದ್ದು, ಗೋಕರ್ಣದಿಂದ ಹೆದ್ದಾರಿಗೆ ಬಂದ ಟಿಪ್ಪರ್ ತಪ್ಪಿಸಲು ಹೋಗಿ ಈ ಅಪಘಾತ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.