ಕಾರವಾರದ ಕೋಡಿಬೀರ ದೇವಸ್ಥಾನ ಬಳಿ ಬಾಲಚಂದ್ರ ಹರಿಕಂತ್ರ ಅವರು ಕದ್ದು ಮುಚ್ಚಿ ಸರಾಯಿ ಮಾರುತ್ತಿದ್ದಾರೆ. ಗೋವಾದಲ್ಲಿ ಕಡಿಮೆ ಬೆಲೆಗೆ ಸಿಗುವ ಸರಾಯಿ ತರುವ ಅವರು ಇಲ್ಲಿ ಅದನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾರೆ.
ಕೋಡಿಬೀರ ದೇವಸ್ಥಾನದ ಬಳಿ ಕೋಣೆವಾಡದಲ್ಲಿ ಬಾಲಚಂದ್ರ ಪಾಂಡುರoಗ ಹರಿಕಂತ್ರ ಅವರು ವಾಸವಾಗಿದ್ದಾರೆ. 58 ವರ್ಷದ ಅವರು ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಅದರೊಂದಿಗೆ ಅಕ್ರಮ ಸರಾಯಿ ಮಾರಾಟವನ್ನೇ ಮುಖ್ಯ ಕಸುಬು ಮಾಡಿಕೊಂಡಿದ್ದಾರೆ. ಈ ದಿನವೂ ಅವರು 13050ರೂಪಾಯಿ ಮೌಲ್ಯದ 38 ಲೀಟರ್ ಗೋವಾ ಸರಾಯಿಯನ್ನು ತಮ್ಮ ದಾಬಾ ದಾಸ್ತಾನು ಮಾಡಿಕೊಂಡಿದ್ದು, ಪೊಲೀಸರು ಅದನ್ನು ಜಪ್ತು ಮಾಡಿದ್ದಾರೆ.
ಗೋವಾದಲ್ಲಿ ಮಾತ್ರ ಮಾರಾಟಕ್ಕೆ ಅನುಮತಿಯಿರುವ ಬಗೆ ಬಗೆಯ ಮದ್ಯವನ್ನು ಬಾಲಚಂದ್ರ ಹರಿಕಂತ್ರ ಅವರು ಶೇಖರಿಸಿಕೊಂಡಿರುವ ಬಗ್ಗೆ ಕಾರವಾರ ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೇ ಅವರಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದ್ದಾರೆ. ಆಗ, ಬಾಲಚಂದ್ರ ಹರಿಕಂತ್ರ ಅವರು ವಿಸ್ಕಿ, ಫೆನ್ನಿ, ಓಲ್ಡ್ಮಂಕ್ ಸೇರಿ ಬೇರೆ ಬೇರೆ ಬಾಟಲಿಗಳ ಜೊತೆ ಸಿಕ್ಕಿ ಬಿದ್ದಿದ್ದಾರೆ. ಸರ್ಕಾರಕ್ಕೆ ವಂಚಿಸಿ ಅದನ್ನು ಮಾರಾಟ ಮಾಡಿದ ಕಾರಣ ಬಾಲಚಂದ್ರ ಹರಿಕಂತ್ರ ಅವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.