ಗಣೇಶ ವಿಸರ್ಜನೆ ವೇಳೆ ಗಲಾಟೆ ಮಾಡಿದ ಕಾರಣ ಬುದ್ದಿವಾದ ಹೇಳಲು ಹೋದವರ ಮೇಲೆ ಕತ್ತಿ ಬೀಸಿದ ಪ್ರಕರಣದ ಪ್ರಮುಖ ಆರೋಪಿ ದೀಪಕ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ತಾಕುಲದ ಅಸ್ನೋಟಿ ಭಗವತವಾಡದಲ್ಲಿ ನಡೆದ ಗಲಾಟೆ ವಿಷಯವಾಗಿ ರೋಷನ್ ನಾಯ್ಕ ಅವರು ನೀಡಿದ ದೂರಿನ ಅನ್ವಯ ಈ ಕ್ರಮ ಜರುಗಿಸಿದ್ದಾರೆ.
ಸೆಪ್ಟೆಂಬರ್ 26ರಂದು ಸಂಜೆ 5.45ರ ಸುಮಾರಿಗೆ ಅಂಗಡಿ ಗ್ರಾಮದ ಗಣೇಶ ಮೂರ್ತಿ ವಿಸರ್ಜನಾ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಈ ವಿಷಯವಾಗಿ ದೂರಲು ಹೋಗಿದ್ದ ರೋಷನ ನಾಯ್ಕ ಹಾಗೂ ಸಿದ್ಧಾರ್ಥ ಗೋಸಾವಿ ಅವರ ಮೇಲೆ ಶರತ ನಾಯ್ಕ ಹಾಗೂ ದೀಪಕ ನಾಯ್ಕ ಅವರು ದಾಳಿ ಮಾಡಿದ್ದರು. ಅದಕ್ಕೂ ಮುನ್ನ ಸಿದ್ಧಾರ್ಥ ನಾಯ್ಕ ಅವರ ಸ್ನೇಹಿತ ಸಾಯಿಸನತ್ ಎಂಬಾತರ ಜೊತೆಯೂ ಶರತ್ ನಾಯ್ಕ ಅವರು ಜಗಳ ಮಾಡಿದ್ದರು.
ಈ ವಿಷಯದ ಬಗ್ಗೆ ದೂರಲು ಹೋದಾಗ ಶರತ್ ನಾಯ್ಕ ಅವರ ದೀಪಕ ಬಾಳಾ ನಾಯ್ಕ ಹಾಗೂ ಶರತ್ ನಾಯ್ಕ ಸೇರಿ ರೋಷನ್ ದೀಪಕ ನಾಯ್ಕ ಮತ್ತು ಸಿದ್ದಾರ್ಥ ಸತೀಶ ಗೋಸಾವಿ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದರು. ಪ್ರಕರಣದ ಆರೋಪಿತ ದೀಪಕ ಬಾಳಾ ನಾಯ್ಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.