ಜೀವನದಲ್ಲಿನ ಎಲ್ಲಾ ಕಷ್ಟಗಳನ್ನು ಧೈರ್ಯವಾಗಿ ಸಹಿಸಿಕೊಂಡು 80 ವರ್ಷ ಬದುಕಿದ್ದ ತುಂಗಾ ಭಟ್ಟ ಅವರು ಇಳಿವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ವಿವೇಕಾನಂದ ನಗರದ ಬಾಡಿಗೆ ಮನೆಯಲ್ಲಿ ಅವರು ಶವವಾಗಿದ್ದಾರೆ.
ಶಿರಸಿಯ ವಿವೇಕಾನಂದ ನಗರದಲ್ಲಿ ತುಂಗಾ ಸತ್ಯನಾರಾಯಣ ಭಟ್ಟ ಅವರು ವಾಸವಾಗಿದ್ದರು. ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದ ಅವರು ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಜೀವನ ನಡೆಸುತ್ತಿದ್ದರು. ತುಂಗಾ ಭಟ್ಟ ಅವರ ಪತಿ, ಮಗಳು, ಅಳಿಯ ಎಲ್ಲರೂ ಅವರಿಗಿಂತ ಮೊದಲೇ ಸಾವನಪ್ಪಿದ್ದರು. ಮತ್ತೊಬ್ಬ ಅಂಗವಿಕಲ ಪುತ್ರಿ ಸುವರ್ಣ ಎಂಬಾತರ ಜೊತೆ ತುಂಗಾ ಭಟ್ಟ ಅವರು ಬದುಕು ನಡೆಸುತ್ತಿದ್ದರು.
ಹೀಗಿರುವಾಗ, `ತನ್ನ ನಂತರ ಅಂಗವಿಕಲ ಮಗಳಿಗೆ ಯಾರು ದಿಕ್ಕು?’ ಎಂಬ ಯೋಜನೆ ತುಂಗಾ ಭಟ್ಟ ಅವರಿಗೆ ಕಾಡಿತು. ಅದೇ ಯೋಚನೆ ತುಂಬಾ ಗಾಡವಾಗಿದ್ದು, ಅದರಲ್ಲಿಯೇ ಅವರು ಕೊರಗಲು ಶುರು ಮಾಡಿದರು. `ನನ್ನ ಮಗಳನ್ನು ನೋಡಿಕೊಳ್ಳುವವರು ಯಾರು?’ ಎಂದು ಭಾವಿಸಿ ಆ ವಿಷಯ ಸಹಿಸಿಕೊಳ್ಳಲಾಗದೇ ಅವರು ಚಡಪಡಿಸಿದರು. ಆ ಚಡಪಡಿಕೆ ಸಹಿಸಲಾಗದೇ ಸಾವನಪ್ಪುವ ನಿರ್ಧಾರ ಮಾಡಿದರು.
ತಾವು ವಾಸವಿದ್ದ ಬಾಡಿಗೆ ಮನೆ ಹಿಂದೆ ಹೋದ ಅವರು ಅಲ್ಲಿನ ಕೋಣೆಯಲ್ಲಿ ಹಗ್ಗ ಕಟ್ಟಿದರು. ಆ ಹಗ್ಗಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದರು. ಶಿರಸಿ ಹಂಚಿನಕೇರಿಯ ಸುಧಾ ಪ್ರಭಾಕರ ಹೆಗಡೆ ಅವರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದರು.