ಬಿಣಗಾದ ಲಲಿತಾ ತಾಂಡೇಲ್ ಅವರ ಮನೆಗೆ ಅತಿಥಿಯಾಗಿ ಬಂದಿದ್ದ ಹಾರವಾಡದ ಅಶ್ವಥ್ ಹನುಮಟೇಕರ್ ಅವರು ಚಾಕು ತೋರಿಸಿ ಬೆದರಿಸಿದ್ದಾರೆ. ಮನೆಯ ಕಿಟಕಿ-ಬಾಗಿಲು ಮುಚ್ಚಿದ ಅಶ್ವತ್ ಹನುಮಟೇಕರ್ ಅವರು ಲಲಿತಾ ತಾಂಡೇಲ್ ಅವರ ಬಾಯಿಗೆ ಬಟ್ಟೆ ಕಟ್ಟಿ ದೂಡಿದಲ್ಲದೇ, ಅವರ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕಾರವಾರದ ಬಿಣಗಾ ಮೂಡಲಮಕ್ಕಿ ಅಯ್ಯಪ್ಪ ದೇವಸ್ಥಾನ ಬಳಿ ಲಲಿತಾ ಉಮಾಕಾಂತ ತಾಂಡೇಲ್ ಅವರು ವಾಸವಾಗಿದ್ದಾರೆ. ಅಂಕೋಲಾದ ಹಾರವಾಡದಲ್ಲಿ ಅಶ್ವಥ ರಮೇಶ ಹನುಮಟೇಕರ್ ಅವರು ವಾಸವಾಗಿದ್ದಾರೆ. ಅಶ್ವಥ ಹನುಮಟೇಕರ್ ಅವರು ಲಲಿತಾ ತಾಂಡೇಲ್ ಅವರಿಗೆ ದೂರದ ಸಂಬAಧಿಯಾಗಿದ್ದಾರೆ. ಈ ಹಿನ್ನಲೆ ಅವರು ಲಲಿತಾ ತಾಂಡೇಲ್ ಅವರ ಮನೆಗೆ ಆಗಮಿಸಿದ್ದಾರೆ. ಅಕ್ಟೊಬರ್ 4ರಂದು ಲಲಿತಾ ತಾಂಡೇಲ್ ಅವರ ಮನೆಗೆ ಬಂದಿದ್ದ ಅಶ್ವಥ ಹನುಮಟೇಕರ್ ಅವರು ಎರಡು ದಿನ ಅಲ್ಲಿಯೇ ಉಳಿದಿದ್ದಾರೆ.
ಅಕ್ಟೊಬರ್ 6ರಂದು ಲಲಿತಾ ತಾಂಡೇಲ್ ಅವರ ಪತಿ ಉಮಾಕಾಂತ ತಾಂಡೇಲ್ ಅವರು ಅಂಕೋಲಾಗೆ ಹೋಗಿದ್ದಾರೆ. ಉಮಾಕಾಂತ ತಾಂಡೇಲ್ ಅವರು ದೇವಾಲಯಕ್ಕೆ ಹೋಗಿರುವುದನ್ನು ಅರಿತ ಅಶ್ವಥ ಹನುಮಟೇಕರ್ ಅವರು ಮನೆಯ ಬಾಗಿಲು-ಕಿಟಕಿ ಹಾಕಿದ್ದಾರೆ. ಅದಾದ ನಂತರ ಲಲಿತಾ ತಾಂಡೇಲ್ ಅವರ ಬಾಯಿಗೆ ಬಟ್ಟೆ ತುರುಕಿ ಅವರನ್ನು ಅಲ್ಲಿದ್ದ ಹಾಸಿಗೆ ಮೇಲೆ ಬೀಳಿಸಿದ್ದಾರೆ. ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. `ಕತ್ತಿನಲ್ಲಿದ್ದ ಮಂಗಲಸೂತ್ರ ಹಾಗೂ ಕಿವಿಯೋಲೆ ಕೊಡಡಿದ್ದರೆ ಸಾಯಿಸುವೆ’ ಎಂದು ಹೆದರಿಸಿದ್ದಾರೆ. ಕುತ್ತಿಗೆ ಬಳಿ ಚಾಕು ಬಂದ ಕಾರಣ ಬೆದರಿದ ಲಲಿತಾ ತಾಂಡೇಲ್ ಅವರು ತಕ್ಷಣ ಮೈಮೇಲಿದ್ದ ಆಭರಣ ತೆಗೆದು ಕೊಟ್ಟಿದ್ದಾರೆ.
ಈ ಅವಧಿಯಲ್ಲಿ ಲಲಿತಾ ತಾಂಡೇಲ್ ಅವರ ಎರಡು ದವಡೆ ಹಲ್ಲು ಮರಿದಿದೆ. ಅದಾದ ನಂತರ ಅಶ್ವಥ ಹನುಮಟೇಕರ್ ಅಲ್ಲಿಂದ ಪರಾರಿಯಾಗಿದ್ದಾರೆ. ದೇವಾಲಯಕ್ಕೆ ಹೋಗಿದ್ದ ಉಮಾಕಾಂತ ತಾಂಡೇಲ್ ಅವರು ಪತ್ನಿಯ ಪರಿಸ್ಥಿತಿ ನೋಡಿ ಕಂಗಾಲಾಗಿದ್ದಾರೆ. ನಡೆದ ವಿಷಯಗಳ ಬಗ್ಗೆ ಅರಿತು ಕುಟುಂಬದವರು ಪೊಲೀಸರ ಸಹಾಯ ಕೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.