ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬೆಕಾಯಿ ಅವರ ಗೆಲುವಿಗಾಗಿ ಅಹಿಂದ್ ಪಡೆ ಕೆಲಸ ಮಾಡುತ್ತಿದೆ. ಅಹಿಂದ್ ಮುಖಂಡ ಆರ್ ಎಂ ಕುಬೇರಪ್ಪ ಅವರು ಮೋಹನ ಲಿಂಬೆಕಾಯಿ ಅವರ ಪರ ಶ್ರಮಿಸುತ್ತಿದ್ದಾರೆ.
ಪದವೀಧರ ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ, ಅಹಿಂದ್ ನಾಯಕ ಸತೀಶ ಜಾರಕಿಹೊಳಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ ಅವರ ಮಾರ್ಗದರ್ಶನಪಡೆದ ಆರ್ ಎಂ ಕುಬೇರಪ್ಪ ಅವರು ಮೋಹನ ಲಿಂಬೆಕಾಯಿ ಅವರ ಪರ ಮತ ಯಾಚನೆ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಅವರು ಮತ ಯಾಚನೆ ನಡೆಸಿದ್ದಾರೆ. ಧಾರವಾಡ, ಗದಗ,ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪದವೀಧರರ ಸಮಾವೇಶದಲ್ಲಿ ಅಹಿಂದ ನಾಯಕರು ಹಾಗೂ ಕೆಪಿಸಿಸಿ ಶಿಕ್ಷಕರು ಮತ್ತು ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಆರ್ ಎಂ. ಕುಬೇರಪ್ಪ ಅವರು ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
`ಮೋಹನ ಲಿಂಬಿಕಾಯಿ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಪದವೀಧರರ, ಶಿಕ್ಷಕರ, ಅತಿಥಿ ಉಪನ್ಯಾಸಕರ ಪರ ಹೋರಾಟ ಮಾಡಿದ್ದಾರೆ. ಈಗಿನ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಅವರ ಗೆಲುವು ಅನಿವಾರ್ಯವಾಗಿದೆ’ ಎಂದು ಆರ್ ಎಂ ಕುಬೇರಪ್ಪ ಅವರು ಭಾಷಣ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರ ಖಾಯಂ ಮಾಡುವಿಕೆ ಸೇರಿ ಅನೇಕ ಭರವಸೆಗಳನ್ನು ನೀಡಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆ, ಬ್ಯಾಂಕಿAಗ್ ವಲಯಗಳಲ್ಲಿ ಕೆಲಸ ಮಾಡುವವರನ್ನು ಭೇಟಿ ಮಾಡಿ ಅಭ್ಯರ್ಥಿ ಪರ ಮತ ಯಾಚನೆ ಶುರುವಾಗಿದೆ.