ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಮಗುವಿನ ಚಪ್ಪಲಿ ರಸ್ತೆಗೆ ಬಿದ್ದಿದ್ದು, ಅದನ್ನು ಹೆಕ್ಕುವ ಗಡಬಿಡಿಯಲ್ಲಿ ಹನೀಪಾಬಾದ್’ನ ಅಬ್ದುಲ್ ರವುಪ್ ಅವರು ವಿರುದ್ಧ ದಿಕ್ಕಿನಲ್ಲಿ ಸ್ಕೂಟಿ ಓಡಿಸಿದ್ದಾರೆ. ಆಗ, ಆ ಸ್ಕೂಟಿ ಮುಗ್ದುಂ ಕಾಲೋನಿಯ ಉಸ್ಮಾನ್ ಘನಿ ಅವರ ಬೈಕಿಗೆ ಡಿಕ್ಕಿಯಾಗಿ ಅವರ ಪತ್ನಿ ಬಿ ಬಿ ಜರೀನಾ ಅವರ ಕಾಲು ಮುರಿದಿದೆ.
ಭಟ್ಕಳದ ಮುಗ್ದುಂ ಕಾಲೋನಿಯಲ್ಲಿ ಉಸ್ಮಾನ್ ಘನಿ ಅವರು ವಾಸವಾಗಿದ್ದಾರೆ. ರಿಕ್ಷಾ ಚಾಲಕರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹನೀಪಾಬಾದ್ ಮೊದಲ ಕ್ರಾಸಿನ ಬಳಿ ಅಬ್ದುಲ್ ರವುಪ್ ಅವರು ವಾಸವಾಗಿದ್ದಾರೆ. ಅಕ್ಟೊಬರ್ 18ರ ಸಂಜೆ ಅವರಿಬ್ಬರು ಬೇರೆ ಬೇರೆ ವಾಹನದಲ್ಲಿ ಕುಟುಂಬದವರ ಜೊತೆ ಸವಾರಿ ಹೊರಟಿದ್ದು, ಆ ವೇಳೆ ಆ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಅಬ್ದುಲ್ ರವೂಪ್ ಅವರು ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸಂಚಾರ ಮಾಡಿದ್ದಾರೆ. ಆ ವೇಳೆ ಸ್ಕೂಟಿಯಲ್ಲಿದ್ದ ಮಗುವಿನ ಚಪ್ಪಲಿ ರಸ್ತೆಗೆ ಹಾರಿ ಬಿದ್ದಿದೆ. ಇದನ್ನು ನೋಡಿದ ಅಬ್ದುಲ್ ರವೂಪ್ ಅವರು ಕೊಂಚ ಮುಂದೆ ಹೋಗಿ, ಅದೇ ಮಾರ್ಗವಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ್ದಾರೆ. ಮಗುವಿನ ಚಪ್ಪಲಿ ಹೆಕ್ಕುವುದಕ್ಕಾಗಿ ಅವರು ತಮ್ಮ ಸ್ಕೂಟಿಯನ್ನು ವಿರುದ್ಧ ದಿಕ್ಕಿನಲ್ಲಿ ಚಲಿಸಿದ್ದಾರೆ.
ಈ ವೇಳೆ ಉಸ್ಮಾನ್ ಘನಿ ಅವರು ತಮ್ಮ ಪತ್ನಿ ಜೊತೆ ಬೈಕಿನಲ್ಲಿ ಸಂಶುದ್ದೀನ್ ಸರ್ಕಲ್ ಕಡೆಯಿಂದ ಬಂದರು ಕಡೆ ಹೋಗುತ್ತಿದ್ದು, ಅಬ್ದುಲ್ ರವುಪ್ ಅವರ ಸ್ಕೂಟಿ ಗುದ್ದಿದೆ. ಆ ಅಪಘಾತದ ರಭಸಕ್ಕೆ ಉಸ್ಮಾನ್ ಘನಿ ಅವರ ಪತ್ನಿ ಗಾಯಗೊಂಡಿದ್ದಾರೆ. ಬಿ ಬಿ ಜರೀನಾ ಅವರ ಎಡಗಾಲಿಗೆ ಸ್ಕೂಟಿ ರಭಸವಾಗಿ ಗುದ್ದಿದ್ದರಿಂದ ಅವರಿಗೆ ನೋವಾಗಿದೆ. ಕಾಲು ಮುರಿದಿದೆ. ಸದ್ಯ ಬಿ ಬಿ ಜರೀನಾ ಅವರು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
`ಸಂಚಾರಿ ನಿಯಮ ಪಾಲಿಸಿ. ನಿಧಾನವಾಗಿ ವಾಹನ ಓಡಿಸಿ’