ಗುಜರಾತಿಗೆ ಅಡಿಕೆ ಕಳುಹಿಸಿದ್ದ ಭಾಗೀರಥಿ ಟ್ರೆಡಿಂಗ್ ಕಂಪನಿಯ ರಾಘವೇಂದ್ರ ಹೆಗಡೆ ಅವರಿಗೆ 28.53 ಲಕ್ಷ ರೂ ಮೋಸವಾಗಿದೆ. ಹಣ ನೀಡುವುದಾಗಿ ಹೇಳಿ ಅಡಿಕೆ ಒಯ್ದಿದ್ದ ಮೂವರು ಇದೀಗ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.
ADVERTISEMENT
ಶಿರಸಿಯ ಎಪಿಎಂಸಿ ಬಳಿ ಭಾಗೀರಥಿ ಟ್ರೇಡಿಂಗ್ ಕಂಪನಿ ಇದೆ. ಪ್ರಗತಿ ನಗರದ ರಾಘವೇಂದ್ರ ವೆಂಕಟ್ರಮಣ ಹೆಗಡೆ ಅವರು ಕಳೆದ 26 ವರ್ಷಗಳಿಂದ ಈ ಕಂಪನಿ ನಡೆಸಿಕೊಂಡು ಬರುತ್ತಿದ್ದಾರೆ. ನಂಬಿಕೆಯ ಆಧಾರದ ಮೇಲೆ ಅವರು ಅಡಿಕೆ ವ್ಯವಹಾರ ಮಾಡಿಕೊಂಡಿದ್ದು, ಗುಜರಾತಿನ ರಿಷಿ ಸಾಹಾ ಮೋಹನ್ ಸಾಹಾ, ಬಾಬುಲಾಲ್ ಹಡಿಯಾಳ ಹಾಗೂ ಮಹೇಶ ಅಯ್ಯೀರ್ ಎಂಬಾತರು ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ADVERTISEMENT
2026ರ ಜೂನ್ 24ರಂದು ಶಿರಸಿಗೆ ಆಗಮಿಸಿದ್ದ ರಿಷಿ ಸಾಹಾ ಮೋಹನ್ ಸಾಹಾ, ಬಾಬುಲಾಲ್ ಹಡಿಯಾಳ ಹಾಗೂ ಮಹೇಶ ಅಯ್ಯೀರ್ ಅವರು ಅಡಿಕೆ ಖರೀದಿ ಬಗ್ಗೆ ಮಾತುಕಥೆ ನಡೆಸಿದ್ದಾರೆ. ಅದರ ಪ್ರಕಾರ ಜುಲೈ 26ರಂದು ಗುಜರಾತಿನ ಜೈ ಮಾತಾಜಿ ಟ್ರೆಡಿಂಗ್ ಕಂಪನಿಗೆ ರಾಘವೇಂದ್ರ ಹೆಗಡೆ ಅವರು 8.92 ಲಕ್ಷ ರೂ ಮೌಲ್ಯದ ಅಡಿಕೆ ರವಾನಿಸಿದ್ದಾರೆ. ಮತ್ತೆ ವಿ ಆರ್ ಎಲ್ ನೆರವಿನಿಂದ 3399170ರೂ ಮೌಲ್ಯದ ಅಡಿಕೆ ಸಾಗಾಟ ಮಾಡಿದ್ದಾರೆ. ಅಡಿಕೆ ಮಾರಾಟದ ಹಣ ಪ್ರಶ್ನಿಸಿದಾಗ ಅವರಿಗೆ 545915ರೂ ಆರ್ ಟಿ ಜಿ ಎಸ್ ಮೂಲಕ ಬಂದಿದೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ಇನ್ನೂ 2853975ರೂ ಪಾವತಿ ಆಗಬೇಕಿದ್ದು, ಆ ಬಗ್ಗೆ ಪ್ರಶ್ನಿಸಿದಾಗ ಆ ಮೂವರು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ನಂಬಿಕೆಯ ಆಧಾರದ ಮೇರೆಗೆ ಅಡಿಕೆ ರವಾನಿಸಿದ್ದ ರಾಘವೇಂದ್ರ ಹೆಗಡೆ ಅವರಿಗೆ ಮೋಸವಾಗಿದ್ದು, ಆ ಮೂವರನ್ನು ಹುಡುಕಿ ಹಣ ವಸೂಲಿ ಮಾಡಲು ಅವರು ಕಾನೂನು ಮೊರೆ ಹೋಗಿದ್ದಾರೆ.