ಶಿರಸಿ-ಹುಬ್ಬಳ್ಳಿ ರಸ್ತೆಯ ಲಂಡಕನಳ್ಳಿ ಜಮೀನು ವಿವಾದ ಇನ್ನೊಂದು ಸ್ವರೂಪಪಡೆದಿದೆ. ರಾಜಕೀಯವಾಗಿ ಪ್ರಭಾವಿಯಾಗಿರುವ ಪರಶುರಾಮ ಗುಡಿಗಾರ ಅವರು ತಾವು ಖರೀದಿಸಿದ ಆಸ್ತಿಯ ಮೇಲೆ ಕಣ್ಣು ಹಾಕಿರುವುದಾಗಿ ಜೀನತ್ ರಫೀಕ್ ಭೇಸಾನಿಯಾ ಅವರು ದೂರಿದ್ದಾರೆ.
ADVERTISEMENT
ನಕಲಿ ಆಸ್ತಿಗೆ ಅಧಿಕೃತ ಮುದ್ರೆ: ಪಾಳು ಬಿದ್ದ ಆಸ್ತಿಗೆ ಅಜ್ಜಿಯೇ ಒಡತಿ ಎಂಬ ಶೀರ್ಷಿಕೆಯ ಅಡಿ ಪೊಲೀಸ್ ಪ್ರಕರಣ ಆಧರಿಸಿ mobiletime.in ವರದಿ ಪ್ರಸಾರ ಮಾಡಿದ್ದು, ಈ ವರದಿಯಲ್ಲಿ ಪ್ರಸಾರವಾದ ಅಂಶಗಳಿಗೆ ಆಕ್ಷೇಪಿಸಿ ಜೀನತ್ ರಫೀಕ್ ಭೇಸಾನಿಯಾ ಅವರು ವಿವಿಧ ದಾಖಲೆ ಒದಗಿಸಿದ್ದಾರೆ. ತಮಗಾದ ಅನ್ಯಾಯದ ಬಗ್ಗೆಯೂ ಅವರು ವಿವರಿಸಿದ್ದಾರೆ. `ಲಂಡಕನಳ್ಳಿ ಸರ್ವೇ ನಂ45* ಬ 1ರ ಪೈಕಿ 04-09.36 ಕ್ಷೇತ್ರದಲ್ಲಿ ವಸತಿ ನಿವೇಶನವಿದ್ದು, ಅದು ಖರೀದಿಸಿದ ಆಸ್ತಿಯಾಗಿದೆ. ಸರ್ಕಾರ ಹಾಗೂ ನಗರಸಭೆಗೆ ತೆರಿಗೆ ಪಾವತಿಸಿ ಅದನ್ನು ಖರೀದಿಸಲಾಗಿದ್ದು, ಪರಶುರಾಮ ಗುಡಿಗಾರ, ಪುಷ್ಪಾ ಗುಡಿಗಾರ ಹಾಗೂ ಯಮೂನಾ ಗುಡಿಗಾರ ಅವರಿಗೆ ಆ ಆಸ್ತಿ ಮೇಲೆ ಯಾವ ಹಕ್ಕು ಇಲ್ಲ’ ಎಂದವರು ಹೇಳಿದ್ದಾರೆ.
ADVERTISEMENT
`ಬಾಡಿಗೆ ನೀಡುವ ಉದ್ದೇಶಕ್ಕಾಗಿ ಈ ಆಸ್ತಿಯಲ್ಲಿ ಶೆಡ್ ನಿರ್ಮಿಸಲು ಉದ್ದೇಶಿಸಿದ್ದು, ರಾಜಕೀಯವಾಗಿ ಪ್ರಭಾವಿಯಾಗಿರುವ ಸಿವಿಲ್ ಇಂಜಿನಿಯರ್ ಪರಶುರಾಮ ಗುಡಿಗಾರ ಅವರು ತೊಂದರೆ ಮಾಡುತ್ತಿದ್ದಾರೆ. ಅಲ್ಲಿ ಸ್ವಚ್ಚತೆ ಮಾಡಿಸಿ ಕೆಲಸ ಮಾಡಿಸಲು ಸಮಸ್ಯೆ ಮಾಡಿದ್ದಾರೆ. ನೈಜ ದಾಖಲೆ ತೋರಿಸಿದರೂ ಯಾವುದೇ ಕಾರಣವಿಲ್ಲದೇ ಕೆಲಸಕ್ಕೆ ತಡೆ ಒಡ್ಡುತ್ತಿದ್ದಾರೆ. ಆಸ್ತಿಗೆ ರಕ್ಷಣೆ ಕೋರುವಂತೆ ಪೊಲೀಸರ ಬಳಿ ಹೋದಾಗ, ಅದು ಸಿವಿಲ್ ಪ್ರಕರಣವಾಗಿದ್ದು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಲಾಗಿತ್ತು’ ಎಂಬ ಸಂಗತಿಯನ್ನು ಅವರು ವಿವರಿಸಿದ್ದಾರೆ. `ಆ ಆಸ್ತಿ ಖರೀದಿ ಹಾಗೂ ನಮೂನೆ-3ಪಡೆಯುವ ವಿಷಯದಲ್ಲಿ ಅಕ್ರಮ ನಡೆದಿಲ್ಲ. ನಕಲಿ ದಾಖಲೆಗಳು ಸಲ್ಲಿಕೆಯಾಗಿಲ್ಲ. ಅದಾಗಿಯೂ, ತಮ್ಮ ವಿರುದ್ಧ ದೂರಲಾಗಿದ್ದು, ಈ ಕುರಿತು ವಿವಿಧ ದಾಖಲೆಗಳ ಜೊತೆ ಕಾನೂನು ಹೋರಾಟ ನಡೆಸುವುದಾಗಿ ಜೀನಿತ್ ರಫೀಕ್ ಬೇಸಾನಿಯಾ ಅವರು ಹೇಳಿದ್ದಾರೆ.