ಕಾರವಾರದಿಂದ ಮಾಜಾಳಿ ಕಡೆ ಹೊರಟಿದ್ದ ಡಾ ಸುಭಾಷ್ ತಾಂಡೇಲ್ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅವರು ಬೈಕಿನಲ್ಲಿ ಬರುವಾಗ ಏಕಾಏಕಿ ದನ ಅಡ್ಡ ಬಂದಿದ್ದು ಅವಘಡಕ್ಕೆ ಮುಖ್ಯ ಕಾರಣವಾಗಿದೆ.
ಡಾ ಸುಭಾಷ್ ಸತ್ಯಾ ತಾಂಡೇಲ್ ಅವರು ಕಾರವಾರದ ಬಿಣಗಾ ಚರ್ಚ ರಸ್ತೆ ಅಂಚಿನ ನಿವಾಸಿಯಾಗಿದ್ದರು. ಸದ್ಯ ಕಾರವಾರ ನಗರದ ಕೆಂಚಾ ರಸ್ತೆಯಲ್ಲಿ ಅವರು ವಾಸವಾಗಿದ್ದರು. ವೈದ್ಯಕೀಯ ರಂಗದಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದು, ಈಚೆಗೆ ನಿವೃತ್ತರಾಗಿದ್ದರು. ಜಿಲ್ಲಾಸ್ಪತ್ರೆಯಲ್ಲಿಯೂ ಅವರು ಸೇವೆ ಸಲ್ಲಿಸಿ ಜನಮನ್ನಣೆಗಳಿಸಿದ್ದರು. ನಿವೃತ್ತಿ ನಂತರವೂ ಅವರು ಜನ ಸೇವೆಯನ್ನು ಮುಂದುವರೆಸಿದ್ದರು. ಚರ್ಮರೋಗ ತಜ್ಞರಾಗಿ ಅವರು ಪ್ರಸಿದ್ಧಿಪಡೆದಿದ್ದರು.
ಅಕ್ಟೊಬರ್ 22ರಂದು ಸಂಜೆ ಡಾ ಸುಭಾಷ್ ತಾಂಡೇಲ್ ಅವರು ಕಾರವಾರದಿಂದ ಮಾಜಾಳಿ ಕಡೆ ಹೊರಟಿದ್ದರು. ತಮ್ಮ ಬೈಕಿನಲ್ಲಿ ಅವರು ವೇಗವಾಗಿ ಸಂಚರಿಸಿದ್ದು, ಸಂಜೆ 7.45ರ ವೇಳೆಗೆ ಅವರ ಬೈಕಿಗೆ ದನವೊಂದು ಅಡ್ಡಬಂದಿತು. ಮಾಜಾಳಿಯ ಬಾಬಾ ರಾಮದೇವ್ ಹೋಟೆಲ್ ಬಳಿ ಅವರ ಬೈಕು ಅಪಘಾತಕ್ಕೀಡಾಯಿತು. ಗಂಭೀರಗಾಯಗೊoಡ ಡಾ ಸುಭಾಷ್ ತಾಂಡೇಲ್ ಅವರು ಅಲ್ಲಿಯೇ ಸಾವನಪ್ಪಿದರು.
ಸುಭಾಷ್ ತಾಂಡೇಲ್ ಅವರ ಅಕಾಲಿಕ ನಿಧನದ ಬಗ್ಗೆ ಅವರ ಮುರುಳಿಧರ ಚಂದ್ರಕಾoತ ತಾಂಡೇಲ್ ಅವರು ಮಾಹಿತಿ ನೀಡಿದರು. ಚಿತ್ತಾಕುಲ ಪೊಲೀಸರು ಈ ವರದಿ ಸ್ವೀಕರಿಸಿ, ಪ್ರಕರಣ ದಾಖಲಿಸಿದರು.
`ಹೆಲ್ಮೆಟ್ ಧರಿಸಿಯೇ ಬೈಕ್ ಓಡಿಸಿ’