ಕೈಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಾವನಪ್ಪಿದ್ದ ಯೋಧ ಶೇಖರ್ ಜಗದಾಳೆ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ವೇತನ ಪ್ಯಾಕೇಜಿನ ಅಡಿ 1 ಕೋಟಿ ರೂ ವಿಮೆ ಪರಿಹಾರ ನೀಡಿದೆ. ಮೃತರ ಪತ್ನಿ ಅಂಜನಿ ಜಗದಾಳೆ ಹಾಗೂ ಪುತ್ರ ಅಥರ್ವ ಜಗದಾಳೆ ಅವರು ಈ ಚೆಕ್ ಸ್ವೀಕರಿಸಿದ್ದಾರೆ.
ADVERTISEMENT
ಕೈಗಾದ ಎನ್ಪಿಸಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಖರ್ ಬಿ. ಜಗದಾಳೆ ಅವರು 2025ರ ನವೆಂಬರ್ 8ರಂದು ಮೃತಪಟ್ಟಿದ್ದರು. ಅವರು ಎಸ್ಬಿಐನ ಎನ್ಪಿಸಿ ಕೈಗಾ ಶಾಖೆಯ ಗ್ರಾಹಕರಾಗಿದ್ದು, ಸಿಐಎಸ್ಎಫ್ ಸಿಬ್ಬಂದಿಗಾಗಿ ರೂಪಿಸಿರುವ ಸಿಎಪಿಎಸ್ಪಿ ವೇತನ ಪ್ಯಾಕೇಜ್ನಡಿ ವಿಮಾ ಸೌಲಭ್ಯ ಹೊಂದಿದ್ದರು. ಇದೇ ವೇತನ ಪ್ಯಾಕೇಜ್ನಡಿ ಈ ಹಿಂದೆ 10 ಲಕ್ಷ ಮೊತ್ತದ ಟರ್ಮ್ ಲೈಫ್ ಇನ್ಶೂರೆನ್ಸ್ ಪರಿಹಾರವನ್ನೂ ಕುಟುಂಬಕ್ಕೆ ಪಾವತಿಸಲಾಗಿತ್ತು. ಸದ್ಯ 1ಕೋಟಿ ರೂಪಾಯಿಯ ಪರಿಹಾರವನ್ನು ನೀಡಲಾಗಿದೆ.
ADVERTISEMENT
ಸಿಐಎಸ್ಎಫ್ ಹಿರಿಯ ಕಮಾಂಡೆoಟ್ ಅಜಯ್ ಕುಮಾರ್ ಝಾ, ಉಪ ಕಮಾಂಡೆAಟ್ ಬಿರೇಂದ್ರ ಕುಮಾರ್ ಹಾಗೂ ಸಹಾಯಕ ಕಮಾಂಡೆoಟ್ ಮನೋಜ್ ಕುಮಾರ್ ಪಾಲ್ಗೊಂಡಿದ್ದರು. ಎಸ್ಬಿಐ ಪರವಾಗಿ ಹುಬ್ಬಳ್ಳಿಯ ಉಪ ಪ್ರಧಾನ ವ್ಯವಸ್ಥಾಪಕ ಮೊಣಿಕಂಡನ್ ರಾಮಕೃಷ್ಣನ್, ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಮುರಳೀಧರ, ಕಾರವಾರದ ಮುಖ್ಯ ವ್ಯವಸ್ಥಾಪಕ ಗಣೇಶ್ ಎಲ್. ಭಟ್ ಹಾಗೂ ಎಸ್ಬಿಐ ಎನ್ಪಿಸಿಸಿ ಕೈಗಾ ಶಾಖೆಯ ವ್ಯವಸ್ಥಾಪಕ ಮನೀಶ್ ದುಮಾಡೆ ಅವರು ಈ ಪರಿಹಾರ ವಿತರಿಸಿದ್ದಾರೆ.