ಶಿರಾಲಿ ಆಸ್ಪತ್ರೆಯಲ್ಲಿ ಬುಧವಾರ ನವಜಾತ ಶಿಶು ಸಾವನಪ್ಪಿದೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪಾಲಕರು ದೂರಿದ್ದಾರೆ. ಜೊತೆಗೆ ಅಲ್ಲಿದ್ದ ವೈದ್ಯರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ.
ಭಟ್ಕಳದ ಶಿರಾಲಿಯ ಸತೀಶ ರಾಮಾ ನಾಯ್ಕ ಹಾಗೂ ಹೇಮಾ ನಾಯ್ಕ ದಂಪತಿಯ ಎರಡನೇ ಮಗು 27ರಂದು ಶಿರಾಲಿಯ ಸಮುದಾಯ ಆಸ್ಪತ್ರೆಯಲ್ಲಿ ಜನಿಸಿತ್ತು. ಬುಧವಾರ ಮುಂಜಾನೆ ತಾಯಿ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಮಗು ನೀಲಿ ಬಣ್ಣಕ್ಕೆ ತಿರುಗಿತು. ತಕ್ಷಣ ಶಿಶು ವೈದ್ಯರು ಮಗುವನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಅದಾಗಿಯೂ, ಮಗು ಸ್ಪಂದಿಸಲಿಲ್ಲ. ಕೆಲವೇ ಕ್ಷಣದಲ್ಲಿ ಮಗು ಉಸಿರು ನಿಲ್ಲಿಸಿತು. ಮಗುವಿನ ಸಾವಿನಿಂದ ಆಕ್ರೋಶಗೊಂಡ ಸಂಬAಧಿಕರು ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿದರು. ಅಲ್ಲಿದ್ದ ಶಿಶು ವೈದ್ಯರು ಹಾಗೂ ತರಬೇತಿ ವೈದ್ಯರ ಮೇಲೆ ಹಲ್ಲೆಯನ್ನೂ ನಡೆಸಿದರು.
ಈ ಘಟನೆಗೆ ಸಂಬoಧಿಸಿದ0ತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶಿಶು ವೈದ್ಯ ಲೀಲಾಧರ ಮೊಗೇರ ಅವರು ಪೊಲೀಸ್ ದೂರು ನೀಡಿದ್ದಾರೆ. ವೈದ್ಯರ ನಿರ್ಲಕ್ಷವೆ ನವಜಾತ ಶಿಶುವಿನ ಸಾವಿಗೆ ಕಾರಣ ಎಂದು ಮೃತರ ಸಂಬoಧಿಕರು ಠಾಣೆಯ ಮೆಟ್ಟಿಲೇರಿದ್ದಾರೆ. ಕರ್ನಾಟಕ ಸರ್ಕಾರಿ ವೈದ್ಯರ ಸಂಘ, ಬೆಂಗಳೂರು, ಐಎಮ್ಎ ವೈದ್ಯರ ಮೇಲಿನ ದಾಳಿಯನ್ನು ಖಂಡಿಸಿದೆ. ಮಗುವಿನ ಮರಣೋತ್ತರ ಪರೀಕ್ಷೆ ನಂತರ ಸಾವಿನ ಕಾರಣ ಗೊತ್ತಾಗಲಿದೆ.