ಸಕಲ ಕಷ್ಟ ಬಗೆಹರಿಸುವುದಾಗಿ ಭರವಸೆ ನೀಡುತ್ತಿದ್ದ ಮುಸ್ಲಿಂ ಧರ್ಮ ಗುರು ಅಶ್ರಫ್ ಸ-ಅದಿ ಅವರ ಬಳಿ ಕುಮಟಾದ ಯುವತಿಯೊಬ್ಬಳು ಹೋಗಿದ್ದು, ಯುವತಿಗೆ ಬಲೆ ಬೀಸಿದ ಅಶ್ರಪ್ ಸ ಅದಿ ಅವರು ಯುವತಿಯ ಕುಟುಂಬದವರನ್ನು ಸಂಕಷ್ಟಕ್ಕೆ ದೂಡಿದ್ದಾರೆ. 40 ವರ್ಷದ ಆ ಧರ್ಮ ಗುರು 22 ವರ್ಷದ ಯುವತಿಯ ಜೊತೆ ಪರಾರಿಯಾಗಿದ್ದಾರೆ.
ಮಂಗಳೂರಿನ ಅಸೈಗೋಳಿ ನಿವಾಸಿಯಾಗಿರುವ ಶ್ರಫ್ ಸ-ಅದಿ ಅವರಿಗೆ ಈಗಾಗಲೇ ಮದುವೆಯಾಗಿದೆ. ಅವರಿಗೆ ಮಕ್ಕಳು ಸಹ ಇದ್ದಾರೆ. ಹೀಗಿರುವಾಗ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮದರಸಾವೊಂದಕ್ಕೆ ಉದ್ಯೋಗ ಅರೆಸಿ ಬಂದಿದ್ದು, ಇಲ್ಲಿಯೇ ಧರ್ಮ ಗುರು ಆಗಿದ್ದಾರೆ. ಕುಮಟಾದ ಬೆಟ್ಕುಳಿಯ ಯುವತಿ ಮಗದುಮ್ಮ ದಾವುದ್ ಬುದ್ವನ್ ಎಂಬಾತರು ಈ ಧರ್ಮ ಗುರುವಿನ ಭೇಟಿಗೆ ಆಗಮಿಸಿದ್ದಾರೆ. ಆ ಯುವತಿ ತನ್ನ ಜೀವನದ ಕಷ್ಟ ಹೇಳಿಕೊಂಡಿದ್ದು, ಅದನ್ನು ಬಗೆಹರಿಸುವುದಾಗಿ ಧರ್ಮ ಗುರು ಭರವಸೆ ನೀಡಿದ್ದಾರೆ. ನಿತ್ಯವೂ ಯುವತಿ ಹಾಗೂ ಧರ್ಮ ಗುರುವಿನ ಭೇಟಿ ನಡೆದಿದ್ದು ಅದು ಪ್ರೀತಿ-ಪ್ರೇಮಕ್ಕೆ ತಿರುಗಿದೆ.
ಧರ್ಮ ಗುರುವಿನ ಮೇಲಿನ ಮೋಹಕ್ಕೆ ಬಿದ್ದ ಯುವತಿ ಪಾಲಕರಿಗೂ ತಿಳಿಸದೇ ಅಶ್ರಫ್ ಸ-ಅದಿ ಅವರ ಜೊತೆ ಪರಾರಿಯಾಗಿದ್ದು, ಇದರಿಂದ ಕುಟುಂಬದವರು ಕಂಗಾಲಾಗಿದ್ದಾರೆ. ಅವರಿಬ್ಬರು ಮಂಗಳೂರು ಸೇರಿದ ಬಗ್ಗೆ ನಂತರ ಮಾಹಿತಿ ಸಿಕ್ಕಿದೆ. ಮಗಳನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಯುವತಿಯ ಕುಟುಂಬಸ್ಥರು ಕೋಣಾಜೆ ಪೊಲೀಸ್ ಠಾಣೆಗೆ ತೆರಳಿ ಕಣ್ಣೀರಿಟ್ಟಿದ್ದಾರೆ. ಪೊಲೀಸರು ಅಶ್ರಫ್ ಹಾಗೂ ಮಗದುಮ್ಮ ಅವರನ್ನು ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಂದೆ, ತಾಯಿ, ಸಹೋದರ ಹಾಗೂ ಸಂಬAಧಿಕರು ಎಷ್ಟೇ ಕಾಡಿಬೇಡಿದರೂ ಯುವತಿ ಮಾತ್ರ ಧರ್ಮ ಗುರುವನ್ನು ಬಿಟ್ಟು ಬರಲು ಒಪ್ಪಿಲ್ಲ. ಯುವತಿ ವಯಸ್ಕಳಾಗಿರುವುದರಿಂದ ಪಾಲಕರಿಂದಲೂ ಏನೂ ಮಾಡಲು ಸಾಧ್ಯವಾಗಿಲ್ಲ.