`ಕನ್ನಡಿಗರ ಒಗ್ಗಟ್ಟು, ಸ್ವಾಭಿಮಾನ ಹಾಗೂ ಪ್ರಜಾಸತ್ತಾತ್ಮಕ ಆಶಯಗಳ ಸಂಕೇತವೇ ರಾಜ್ಯೋತ್ಸವದ ಆಚರಣೆ’ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಚಂದ್ರಕಾoತ ಕೊಚರೇಕರ ಅವರು ಹೇಳಿದ್ದಾರೆ. ಹೊನ್ನಾವರದ ಅಳ್ಳಂಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು `ರಾಜ್ಯದ ಏಕೀಕರಣಕ್ಕಾಗಿ ಶ್ರಮಿಸಿದವರ ಕೊಡುಗೆಯನ್ನು ಸ್ಮರಿಸಿ ಅವರು ಕಂಡ ಕನಸಿನ ಕರ್ನಾಟಕವನ್ನು ಕಟ್ಟುವ ಕೆಲಸ ನಡೆಯಬೇಕು’ ಎಂದು ಆಶಿಸಿದ್ದಾರೆ.
`ಕನ್ನಡ ರಾಜ್ಯೋತ್ಸವ ಎಂಬುದು ಅತ್ಯಂತ ಹೆಮ್ಮೆಯಿಂದ ನಡೆಸುವ ಉತ್ಸವವಾಗಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಕನ್ನಡಗರು ಸಾಧನೆ ಮಾಡಿದ್ದು, ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ’ ಎಂದರು. ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲ ಜಿ ಎಸ್ ಹೆಗಡೆ ಅವರು ಮಾತನಾಡಿ `ಕನ್ನಡದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಅಂಥ ಅವಕಾಶ ಬಳಸಿಕೊಳ್ಳಬೇಕು. ಕನ್ನಡ ಎಂಬುದು ಕೇವಲ ಸಂವಹನದ ಸಾಧನವಲ್ಲ. ಅದು ಇಲ್ಲಿನ ತಾಯಿಯ ಮಮತೆ-ಮಣ್ಣಿನ ಸೊಗಡು’ ಎಂದು ಹೇಳಿದರು. `ಜನರ ಬದುಕಿನ ಅನುಭವ ಮತ್ತು ತಲೆಮಾರುಗಳಿಂದ ಹರಿದುಬಂದ ಜ್ಞಾನದ ಭಂಡಾರ ಕನ್ನಡದಲ್ಲಿದೆ. ಅಂಥ ಕನ್ನಡದ ಅಭಿಮಾನವನ್ನು ಬದುಕಿನಲ್ಲಿ ಕಾಣಬೇಕು’ ಎಂದರು. ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಂಶುಪಾಲ ಕಿಶೋರ ನಾಯ್ಕ ಅವರು ಮಾತನಾಡಿ `ನಾವು ಕನ್ನಡವನ್ನು ಪ್ರತಿದಿನದ ಬದುಕಿನಲ್ಲಿ ಗೌರವಿಸೋಣ’ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಾದ ಗಣೇಶ, ಅಕ್ಷಯ, ಕ್ರತ್ತಿಕಾ, ಪ್ರಿಯ, ಅಮೂಲ್ಯ ಮತ್ತಿತರ ವಿದ್ಯಾರ್ಥಿಗಳು ರಾಜ್ಯೋತ್ಸವದ ಕುರಿತು ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಕದಂಬ ಕನ್ನಡ ಸಂಘದ ಸಂಸ್ಥಾಪಕರಾಗಿ ಸೇವೆ ಸಲ್ಲಿಸಿರುವ ಜಿ ಎಸ್ ಹೆಗಡೆ ಅವರನ್ನು ಗೌರವಿಸಲಾಯಿತು. ವರ್ಷಾ, ಪೂರ್ಣಿಮಾ ಮತ್ತು ಸಂಗಡಿಗರು ರಾಜ್ಯೋತ್ಸವ ಗೀತೆಗಳನ್ನು ಹಾಡಿದರು.ಲಿಖಿತ ಮತ್ತು ತಂಡದವರಿAದ ನೃತ್ಯ ನಡೆಯಿತು. ಉಪನ್ಯಾಸಕ ಶೇಖರ ನಾಯ್ಕ, ಉಪನ್ಯಾಸಕಿ ಸಮಿಯಾಭಾನು ಹಾಗೂ ಸ್ವಾತಿ ಮೇಸ್ತ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು.