ಕಡಿಮೆ ಅವಧಿಯಲ್ಲಿ ಹೆಚ್ಚು ದುಡ್ಡು ಮಾಡಬೇಕು ಎಂದು ಬಯಸಿದ ಹಂಚಿನಕೇರಿಯ ಗೋಪಾಲಕೃಷ್ಣ ಭಟ್ಟ ಅವರು ಅರಿವಿಲ್ಲದಿದ್ದರೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಹೊಗಿ ಮೋಸ ಹೋಗಿದ್ದಾರೆ. ಗೋಪಾಲಕೃಷ್ಣ ಭಟ್ಟ ಅವರ ಬ್ಯಾಂಕ್ ಖಾತೆಯಲ್ಲಿದ್ದ 46 ಲಕ್ಷ ರೂ ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ.
ಶಿರಸಿಯ ಬನವಾಸಿ ರಸ್ತೆಯ ಹಂಚಿನಕೇರಿಯಲ್ಲಿ ಗೋಪಾಲಕೃಷ್ಣ ಗಜಾನನ ಭಟ್ಟ ಅವರು ವಾಸವಾಗಿದ್ದಾರೆ. 65 ವರ್ಷದ ಅವರು ಖಾಸಗಿ ಕಂಪನಿಯ ನೌಕರರಾಗಿ ನಿವೃತ್ತರಾಗಿದ್ದಾರೆ. ದುಡಿಮೆಯ ಅವಧಿಯಲ್ಲಿ ಅವರು ಉಳಿಸಿದ ಹಣವನ್ನು ದುಪ್ಪಟ್ಟು ಮಾಡುವ ಆಸೆಗೆ ಬಿದ್ದು ಅವರು ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದಾರೆ. ಗೋಪಾಲಕೃಷ್ಣ ಭಟ್ಟ ಅವರಿಗೆ ವಾಟ್ಸಪ್ ಮೂಲಕ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಹೆಸರಿನಲ್ಲಿ ಹೂಡಿಕೆ ಕುರಿತ ಸಂದೇಶವೊAದು ಬಂದಿದೆ. ಅದನ್ನು ನಂಬಿದ ಅವರು ಲಿಂಕ್ ಮೂಲಕ ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರಿದ್ದಾರೆ. ಅಲ್ಲಿದ್ದ ಅಡ್ಮಿನ್ ಮೀರಾ ಅಯ್ಯರ್ ಅವರು `ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಆಕರ್ಷಕ ಲಾಭ ಸಿಗುತ್ತದೆ’ ಎಂದು ನಂಬಿಸಿದ್ದಾರೆ.
ಮೀರಾ ಅಯ್ಯರ್ ಅವರ ಮಾತಿನ ಮೋಡಿಗೆ ಒಳಗಾದ ಗೋಪಾಲಕೃಷ್ಣ ಭಟ್ಟ ಅವರು ಸೆಪ್ಟೆಂಬರ್ 11ರಿಂದ 27ರವರೆಗೆ ವಿವಿಧ ಹಂತಗಳಲ್ಲಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು 46 ಲಕ್ಷ ರೂ. ವರ್ಗಾಯಿಸಿದ್ದಾರೆ. ಆರಂಭದಲ್ಲಿ ಹೆಚ್ಚಿನ ಲಾಭದ ಭರವಸೆ ಮೀರಾ ಅವರು ನಂತರ ಕೈ ಕೊಟ್ಟಿದ್ದಾರೆ. ಮೋಸ ಹೋಗಿರುವುದನ್ನು ಅರಿತು ಅವರು ಸೈಬರ್ ಪೊಲೀಸ್ ಸಹಾಯ ಕೇಳಿದ್ದಾರೆ.