65 ವರ್ಷದ ಇಸ್ಮಾಯಲ್ ಸಾಬ್ ಹುಲಗೋರ ಎಂಬಾತರು 7ನೇ ತರಗತಿ ಬಾಲಕಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದು, ಆ ಬಾಲಕಿ ಗರ್ಭ ಧರಿಸಿದ್ದಾರೆ. ಈ ವಿಷಯ ಹೊರ ಬಂದ ತಕ್ಷಣ ಜನ ಆಕ್ರೋಶಗೊಂಡಿದ್ದು, ಇಸ್ಮಾಯಲ್ ಸಾಬ್ ಅವರ ಮನೆ ಧ್ವಂಸ ಮಾಡಿದ್ದಾರೆ.
12 ವರ್ಷದ ಸಂತ್ರಸ್ತೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಮೊದಲು ಬಾಲಕಿ ಹೊಟ್ಟೆ ನೋವು ಎಂದು ಹೇಳಿದ್ದು, ಪಾಲಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗಲೇ ಆಕೆ ಗರ್ಭಿಣಿಯಾಗಿರುವುದು ಅರಿತು ಪಾಲಕರು ಕಂಗಾಲಾಗಿದ್ದಾರೆ. ಈ ಕುರಿತು ವಿಚಾರಿಸಿದಾಗ ಬಾಲಕಿಯನ್ನು ಪುಸಲಾಯಿಸಿ, ಬೆದರಿಸಿದ ಇಸ್ಮಾಯಲ್ ಸಾಬ್ ಹುಲಗೋರ ಅವರು ಅತ್ಯಾಚಾರ ನಡೆಸಿರುವ ವಿಷಯ ಹೊರಬಿದ್ದಿದೆ. ಮೊದಲು ಇದನ್ನು ಒಪ್ಪಿಕೊಳ್ಳದ ಇಸ್ಮಾಯಲ್ ಸಾಬ್ ನಂತರ ತಪ್ಪು ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇಸ್ಮಾಯಲ್ ಸಾಬ್ ಅವರು ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಮೊದಲು ಬಾಲಕಿಯನ್ನು ಪುಸಲಾಯಿಸಿದ್ದ ಅವರು ನಂತರ ಬೆದರಿಕೆ ಒಡ್ಡಿದ್ದಾರೆ. `ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ತೆಗೆಯುವೆ’ ಎಂದು ಸಹ ಬೆದರಿಸಿದ್ದಾರೆ. ಇದರಿಂದ ಬಾಲಕಿ ಮೌನಿಯಾಗಿದ್ದು, ಇನ್ನೊಂದು ವಾರದಲ್ಲಿ ಮಗು ಜನಿಸುವ ಸಾಧ್ಯತೆಯಿದೆ.
ಅತ್ಯಾಚಾರಿಯ ಮನೆ ಧ್ವಂಸ:
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಇಸ್ಮಾಯಲ್ ಸಾಬ್ ಅವರ ವಿರುದ್ಧ ಎಲ್ಲಡೆ ಆಕ್ರೊಶ ಹೆಚ್ಚಾಗಿದೆ. ಕೆರಳಿದ ಜನ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇಡೀ ಮನೆಯನ್ನು ಮುರಿದು ಧ್ವಂಸ ಮಾಡಿದ್ದಾರೆ. ಜಾಲತಾಣಗಳಲ್ಲಿಯೂ ಇಸ್ಮಾಯಲ್ ಸಾಬ್ ಅವರ ವಿರುದ್ಧ ಜನ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ