ಕಂಠಪೂರ್ತಿ ಕುಡಿದ ಟ್ಯಾಂಕರ್ ಚಾಲಕನೊಬ್ಬ ಅಡ್ಡಾದಿಡ್ಡಿ ಲಾರಿ ಓಡಿಸಿದ್ದು, ಅದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಕುಡುಕ ಚಾಲಕನಿಂದ ನಡೆದಿದೆ. ಸಿಟ್ಟಿನಲ್ಲಿದ್ದ ಚಾಲಕ ಕಬ್ಬಿಣದ ರಾಡು ಬೀಸಿದ್ದು, ರಾಮನಗರ ಪಿಸೈ ಮಹಂತೇಶ ನಾಯಕ ಅವರು ತಕ್ಷಣ ತಲೆ ತಗ್ಗಿಸಿದ್ದರಿಂದ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಬೆಳಗಾವಿಯ ಶಬ್ಬೀರ ಮೌಲಾ ಬಾಡಕರ್ ಅವರು ಕಂಠಪೂರ್ತಿ ಸರಾಯಿ ಕುಡಿದು ಟ್ಯಾಂಕರ್ ಓಡಿಸಿದ್ದಾರೆ. ಜೊಯಿಡಾದ ರಾಮನಗರದಿಂದ ಗೋವಾ ಕಡೆ ಟ್ಯಾಂಕರ್ ಓಡಿಸುತ್ತಿದ್ದ ಅವರು ಕಾರಿನಲ್ಲಿ ಬಂದ ಪ್ರವಾಸಿಗರನ್ನು ಅಡ್ಡಗಟ್ಟಿ ರಂಪಾಟ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದು, ಅಡ್ಡಾದಿಡ್ಡಿ ಚಲಿಸುತ್ತಿದ್ದ ವಾಹನದ ಬಗ್ಗೆ ವಿಚಾರಿಸಲು ಪಿಸೈ ಹನುಮಂತ ಕುಡಗುಂಡಿ ಅವರು ಆ ಮಾರ್ಗವಾಗಿ ಹೋಗಿದ್ದಾರೆ. ಎಸೈ ನಾಗಭೂಷಣ ಹಾಗೂ ಪೊಲೀಸ್ ಸಿಬ್ಬಂದಿ ವಿಠ್ಠಲ ಪವಾರ್, ಬಾಳಪ್ಪ ದೊಡ್ಡಮನಿ, ಶಿವಾನಂದ ತಾನಸೆ ಅವರು ಪಿಸೈ ಹನುಮಂತ ಕುಡಗುಂಡಿ ಅವರ ಜೊತೆ ಹೋಗಿದ್ದಾರೆ.
ಅಡ್ಡಾದಿಡ್ಡಿ ಬರುತಿದ್ದ ಟ್ಯಾಂಕರ್ ನೋಡಿದ ಪೊಲೀಸರು ಅದಕ್ಕೆ ಅಡ್ಡಲಾಗಿ ಕೈ ಮಾಡಿದ್ದಾರೆ. ಆದರೆ, ಟ್ಯಾಂಕರ್ ಚಾಲಕ ಶಬ್ಬೀರ ಮೌಲಾ ಬಾಡಕರ್ ಅವರು ವಾಹನ ನಿಲ್ಲಿಸಿಲ್ಲ. ಹೀಗಾಗಿ ಪೊಲೀಸರು ಆ ಟ್ಯಾಂಕರ್ ಬೆನ್ನಟ್ಟಿದ್ದಾರೆ. ಜೋರಾಗಿ ಬಂದ ಟ್ಯಾಂಕರ್ ರಾಮನಗರದ ಜಾಮಿಯಾ ಮಸೀದಿ ಬಳಿ ನಿಂತಿದೆ. ಚಾಲಕನನ್ನು ಟ್ಯಾಂಕರಿನಿAದ ಇಳಿಸಿದ ಪೊಲೀಸರು ಬ್ರೀಥ್ ಅನಾಲೈಸಿಸ್ ಯಂತ್ರ ಊದಿಸಿದ್ದಾರೆ. ಆಗ, ಶಬ್ಬೀರ ಮೌಲಾ ಬಾಡಕರ್ ಅವರು ನಶೆಯಲ್ಲಿರುವುದು ಗೊತ್ತಾಗಿದೆ. ಪೊಲೀಸರು ದಂಡ ಹಾಕಿ ರಸೀದಿ ನೀಡಲು ಹೊದಾಗ ಚಾಲಕ ಶಬ್ಬಿರ್ ಮೌಲಾ ಬಾಡಕರ್ ಅವರು ಗಲಾಟೆ ಮಾಡಿದ್ದಾರೆ. `ನಾನು ದಂಡ ಕಟ್ಟಲ್ಲ. ಕೋರ್ಟಿಗೂ ಬರಲ್ಲ’ ಎಂದು ಬೊಬ್ಬೆ ಹಾಕಿದ್ದಾರೆ.
ಆಗ, ಪಿಸೈ ಹುನುಮಂತ ಕುಡಗುಂಡಿ ಅವರು `ಕುಡಿದ ಕಾರಣ ಟ್ಯಾಂಕರ್ ಓಡಿಸಲು ಆಗಲ್ಲ. ಬೇರೆ ಚಾಲಕನ್ನು ಕರೆಯಿಸಿ’ ಎಂದು ಸೂಚಿಸಿದ್ದಾರೆ. ಆಗ, ಇನ್ನಷ್ಟು ಸಿಟ್ಟಾದ ಟ್ಯಾಂಕರ್ ಚಾಲಕ `ಗಾಡಿ ಬಿಡದಿದ್ದರೆ ನಿಮ್ಮ ಮೇಲೆ ವಾಹನ ಆಯಿಸುವೆ’ ಎಂದು ಹೇಳಿದ್ದಾರೆ. ಈ ವಿಷಯ ಅರಿತು ಅಲ್ಲಿ ಮತ್ತೊಬ್ಬ ಪಿಸೈ ಮಹಂತೇಶ ಉದಯ ನಾಯಕ ಅವರು ಆಗಮಿಸಿದ್ದಾರೆ. ಮಹಂತೇಶ ನಾಯಕ ಅವರಿಗೆ ಆ ಚಾಲಕ ಕಬ್ಬಿಣದ ರಾಡ್ ಕಾಣಿಸಿದ್ದಾರೆ. ನಂತರ ಆ ರಾಡನ್ನು ಜೋರಾಗಿ ಪೊಲೀಸರ ಕಡೆ ಎಸೆದಿದ್ದಾರೆ. ಮಹಂತೇಶ ನಾಯಕ ಅವರಿಗೆ ರಾಡು ತಾಗುವುದಿದ್ದು, ಅವರು ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಹಲ್ಲೆ ತಪ್ಪಿಸಲು ಹೋಗಿದ್ದ ಎಸೈ ನಾಗಭೂಷಣ ಅವರಿಗೆ ಚಾಲಕ ಶಬ್ಬೀರ ಮೌಲಾ ಬಾಡಕರ್ ಅವರು ಹೊಡೆದಿದ್ದಾರೆ.
ಅದಾದ ನಂತರ ಶಬ್ಬೀರ ಮೌಲಾ ಬಾಡಕರ್ ಅವರು ತಲೆಕೆಳಗಾಗಿ ನೆಲಕ್ಕೆ ಬಿದ್ದಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಚಾಲಕನನ್ನು ಪೊಲೀಸರೇ ಆರೈಕೆ ಮಾಡಿ, ಕೇಸು ಹಾಕಿದ್ದಾರೆ.