ಅವೈಜ್ಞಾನಿಕ ನದಿ ಜೋಡಣೆಗೆ ರಾಜ್ಯ ಸರ್ಕಾರ ಆಸಕ್ತಿವಹಿಸಿದ್ದು, ಇದಕ್ಕಾಗಿ ನೀರಾವರಿ ನಿಗಮದವರು ವಿವಿಧ ದಾಖಲೆ ಸಂಗ್ರಹ ಮಾಡಿದ್ದಾರೆ. ವಿವರವಾದ ಯೋಜನಾ ವರದಿ ಸಿದ್ಧಪಡಿಸುವುದಕ್ಕಾಗಿ ಅಂಕಿ-ಅoಶಗಳನ್ನು ಒಳಗೊಂಡ ಮಾಹಿತಿ ಹಾಗೂ ದಾಖಲೆಗಳ ಕ್ರೂಢೀಕರಣ ನಡೆದಿದೆ.
ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಒದಗಿಸಿದ್ದು, ಪರಿಸರಕ್ಕೆ ಮಾರಕವಾದ ಅವೈಜ್ಞಾನಿಕ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಮುಂದಾಗಿರುವುದಕ್ಕೆ ಅಸಮಧಾನವ್ಯಕ್ತಪಡಿಸಿದ್ದಾರೆ. ನವೆಂಬರ್ 12ರಂದು ಮಲಪ್ರಭಾ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಈ ಸಭೆ ನಡೆದ ಬಗ್ಗೆ ಅವರು ವಿಷಯ ಬಹಿರಂಗಪಡಿಸಿದ್ದಾರೆ.
`ಮುಖ್ಯ ಇಂಜಿನಿಯರ್ ಎನ್ ಡ ಬ್ಲೂ ಡಿ ಎ ಹೈದರಾಬಾದ ಮತ್ತು ಧಾರವಾಡದ ಕೆ ಎನ್ ಎನ್ ಎಲ್ ಚೀಪ್ ಇಂಜಿನೀಯರ್ ಕಛೇರಿಯ ಮಾರ್ಗದರ್ಶನದಂತೆ ಈ ಕೆಲಸ ನಡೆಯುತ್ತಿದೆ. ಡಿಪಿಆರ್‌ನಲ್ಲಿ ಹಾವೇರಿ ಜಿಲ್ಲೆಯಲ್ಲಿ 5ರಿಂದ 6ಟಿ ಎಮ್ ಸಿ ಎಸ್ಟೋ ನೀರು ಸಂಗ್ರಹಣ ಅವಕಾಶಕ್ಕೆ ಮತ್ತು ಅನ್ವೇಷಣೆ ಕುರಿತು ಚರ್ಚಿಸಿ ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದವರು ಮಾಹಿತಿ ನೀಡಿದ್ದಾರೆ.
`ಮುಖ್ಯ ಇಂಜಿನೀಯರ್ ನೀರಾವರಿ ನಿಗಮ, ಮಲಪ್ರಭಾ ಯೋಜನಾ ವಲಯ ಧಾರವಾಡ ಇವರು ಯೋಜನೆಯ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಮುಖ್ಯ ಇಂಜಿನೀಯರ್ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಬೇಡ್ತಿ – ವರದಾ ನದಿ ಸಂಪರ್ಕ ಯೋಜನೆಯ ಡಿಪಿಆರ್ ತಯಾರಿಕೆಗಾಗಿ ನೋಡಲ್ ಅಧಿಕಾರಿ ಹೋರಡಿಸಿರುವ ಸಭೆಯ ಸೂಚನೆಯ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
`ಕರ್ನಾಟಕ ನೀರಾವರಿ ನಿಗಮವೂ ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ 5ರಿಂದ 6 ಟಿ ಎಮ್ ಸಿ ನೀರನ್ನು ಸಂಗ್ರಹಕ್ಕಾಗಿ ಸಂಭಾವ್ಯ ,ಸಂಗ್ರಹಣ ಸಾಮಥ್ಯವಿರುವ ಹೊಸ ಸಂಗ್ರಹಣ ಜಲಾಶಯಗಳ ರಚನೆಗೆ ಸೂಕ್ತವಾದ ಸ್ಥಳಗಳನ್ನ ಗುರುತಿಸುವುದು, ಗುರುತಿಸಲಾದ ಎಮ್ ಐ ಟ್ಯಾಂಕ್ ಗಳು ಮತ್ತು ಇತರ ಟ್ಯಾಂಕ್ ಗಳಲ್ಲಿ ಪ್ರಮುಖ ಲಕ್ಷಣಗಳು, ಅಸ್ತಿತ್ವದಲ್ಲಿರುವ ಸಂಗ್ರಹಣ ಸಾಮಥ್ಯ ಮತ್ತು ಹೆಚ್ಚುವರಿ ಸಂಗ್ರಹಣೆಗೆ ಅವಕಾಶ, ಪ್ರಸ್ತಾವಿತ ಯೋಜನೆಯ ಜೋಡಣೆ ಉದ್ದಕ್ಕೂ ಎಮ್ ಐ ಅಥವಾ ಜಡ್ ಪಿ ಟ್ಯಾಂಕ್ ಗಳು ಮತ್ತು ಇತರ ಸಂಭಾವ್ಯ ಸಂಗ್ರಹಣಾ ತಾಣಗಳ ವಿವರಗಳನ್ನ ಚರ್ಚಿಸಿ ಯೋಜನೆಗೆ ಸಂಬoಧಿಸಿದ ಅಂಶಗಳನ್ನ ಎನ್ ಡಬ್ಲೂ ಡಿ ಗೆ ಸಲ್ಲಿಸಲು ಮೇಲಿನ ವಿವರಗಳನ್ನು ಚರ್ಚಿಸಲು ಮತ್ತು ಅಂತಮ ಗೊಳಿಸಲು ಸಭೆಯನ್ನು ಕರೆಯಲಾಗಿತ್ತು ಎಂದು ಸಲಹೆ ಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಅವರು ವಿವರಿಸಿದ್ದಾರೆ.
ಹಿರಿಯ ವಕೀಲ ಉದಯ ನಾಯ್ಕ ಮತ್ತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಗ್ರೀನ್ ಕಾರ್ಡ ಪ್ರಮುಖ ಲಕ್ಷಣ ನಾಯ್ಕ ಐಗೋಡ ಜಡ್ಡಿ ಉಪಸ್ಥಿತರಿದ್ದರು.