ಬೆಂಗಳೂರುನಿoದ ಗೋವಾದ ಮಡಗಾಂವ್ವರೆಗೆ ವಂದೇ ಭಾರತ್ ರೈಲು ಸಂಚಾರಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಶನಿವಾರ ನಸುಕಿನಲ್ಲಿ ಕಾರವಾರಕ್ಕೆ ಬಂದ ಈ ರೈಲಿಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಾವುಟ ತೋರಿಸಿದ್ದಾರೆ. ಭಾರತದ ಧ್ವಜ ನೋಡಿದ ನಂತರ ಆ ರೈಲು ನಿಲುಗಡೆಯಾಗಿದೆ.
ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಬೆಂಗಳೂರಿನಿAದ ಹೊರಟ ಈ ರೈಲು ಶನಿವಾರ ನಸುಕಿನ 2.30ಕ್ಕೆ ಕಾರವಾರಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಿದ್ದಾರೆ. ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲನ್ನು ಬರಮಾಡಿಕೊಂಡಿದ್ದಾರೆ.
`ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ , ಗೋಕರ್ಣ ಮತ್ತು ಕಾರವಾರದಲ್ಲಿ ನಿಲುಗಡೆ ಆಗಲಿದೆ. ಈ ಜಿಲ್ಲೆ ಅನುಕೂಲಕ್ಕೆ ರೈಲು ನೀಡಿದ ಪ್ರಧಾನಿಗಳಿಗೆ ಧನ್ಯವಾದ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. `ಕೊಂಕಣ ರೈಲ್ವೆಯ ಮೂಲಭೂತ ಸೌಕರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊಂಕಣ ರೈಲ್ವೆ ಸುಧಾರಣೆಗಾಗಿ ಸುಮಾರು ರೂ 7,000 ಕೋಟಿ ಅನುಮೋದನೆ ನೀಡಲಾಗಿದೆ’ ಎಂದು ಅವರು ಆ ನಸುಕಿನಲ್ಲಿ ಭಾಷಣ ಮಾಡಿದ್ದಾರೆ.
`ಮುಂಬರುವ ದಿನಗಳಲ್ಲಿ ಈ ಅನುದಾನವನ್ನು ಅನುಷ್ಠಾನಕ್ಕೆ ತರುವುದರಿಂದ ಕೊಂಕಣ ರೈಲ್ವೆಗೆ ಸಂಬoಧಿಸಿದ ಅನೇಕ ಅವಶ್ಯಕತೆಗಳು ಈಡೇರಲಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ’ ಎಂದು ಸಹ ಅವರು ಹೇಳಿದ್ದಾರೆ. ನ್ಯಾಯವಾದಿ ನಾಗರಾಜ ನಾಯಕ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.